ಬೆಂಗಳೂರು ಗ್ರಾಮಾಂತರ (Bangalore rural), ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೈವೋಲ್ವೇಜ್ ಅಖಾಡ. ಕಾಂಗ್ರೆಸ್‌ನಿಂದ (congress) ಡಿಕೆ ಸುರೇಶ್ (Dk sures) ಹಾಗೂ ಬಿಜೆಪಿ-ಜೆಡಿಎಸ್ (bjp-jds) ಮೈತ್ರಿ ಅಭ್ಯರ್ಥಿಯಾಗಿ ಡಾ.ಮಂಜುನಾಥ (Dr manjunath) ಸ್ಪರ್ಧೆ ಬೆನ್ನಲ್ಲೇ ಕಣ ರಣರಂಗವಾಗಿದೆ. ಈ ಹಿನ್ನೆಲೆ ಸಹೋದರನನ್ನು ಗೆಲ್ಲಿಸಲು ಡಿಕೆಶಿ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.

ಸಹೋದರ ಡಿ.ಕೆ ಸುರೇಶ್‌ನನ್ನ ಗೆಲ್ಲಿಸಲು ಡಿಕೆಶಿ ಬೆಂಗಳೂರು ಗ್ರಾಮಾಂತರದಲ್ಲಿ ಮಿಡ್ ನೈಟ್ ಆಪರೇಷನ್ (mid night operation) ಮಾಡಿದ್ದಾರೆ. ರಾತ್ರೋರಾತ್ರಿ ಹೆಚ್‌ಡಿಕೆ ಆಪ್ತರನ್ನೇ ಪಕ್ಷಕ್ಕೆ ಕರೆತಂದಿದ್ದಾರೆ. ಬೆಂಗಳೂರಿನ KPCC ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹೆಚ್‌ಡಿಕೆ (Hdk) ಆಪ್ತ ವಲಯದಲ್ಲಿದ್ದ ಮುಖಂಡರು ಡಿಕೆಶಿ ತಂಡ ಸೇರಿಕೊಂಡಿದ್ದಾರೆ.

ಈ ಮೂಲಕ ಡಿಕೆಶಿ ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಮತ್ತೆ ಆಘಾತ ನೀಡಿದ್ದಲ್ಲದೆ ಮಾಜಿ ಸಿಎಂ ಹೆಚ್‌ಡಿಕೆಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ರಾತ್ರೋರಾತ್ರಿ ಹೆಚ್‌ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದಿದ್ದಾರೆ. ಅಕ್ಕೂರು ದೊಡ್ಡಿ ಶಿವಣ್ಣ ಸೇರಿದಂತೆ 200 ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. KPCC ಕಚೇರಿಯಲ್ಲಿ ತಡರಾತ್ರಿ 12 ಗಂಟೆಗೆ ಜೆಡಿಎಸ್ ಮುಖಂಡರು ಕಾಂಗ್ರೇಸ್ ಸೇರಿದ್ದಾರೆ. ಜೆಡಿಎಸ್ ಮುಖಂಡರಿಗೆ ಡಿಕೆಶಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ತಮ್ಮ ಡಿಕೆ ಸುರೇಶ್‌ನನ್ನು ಗೆಲ್ಲಿಸಲು ಡಿಕೆಶಿಯಂತೂ ಟೊಂಕ ಕಟ್ಟಿ ನಿಂತಿದ್ದಾರೆ. ಹಗಲಿರುಳು ಎನ್ನದಂತೆ ಪ್ರಚಾರ ಮಾಡ್ತಿರುವ ಡಿಸಿಎಂ ಸದ್ಯ ಮದ್ಯರಾತ್ರಿ ಆಪರೇಷನ್ ಹಸ್ತ ಮಾಡೋ ಮೂಲಕ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ.