ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯನ ಲಂಚಾವತಾರ ಸ್ಟಿಂಗ್ಆಪರೇಷನ್ನಲ್ಲಿ ಬಯಲು: ವೈದ್ಯನನ್ನು ಅಮಾನತ್ತು ಮಾಡಿದ ಜಿಲ್ಲಾಧಿಕಾರಿ

 ಕೋವಿಡ್ ಮಹಾಮಾರಿ ಎಲ್ಲರನ್ನೂ ಭಯಗೊಳಿಸಿರುವ ಈ ಸಂದಿಗ್ದ ಸಮಯದಲ್ಲಿ ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ರೋಗಿಗಳ , ಸೋಂಕಿತರ ಆರೈಕೆಗೆ ಮುಂದಾಗಿದೆ. ಮತ್ತೊಂದೆಡೆ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿ , ವೈದ್ಯರು ರಣ ಹದ್ದುಗಳಂತೆ ಅವರನ್ನೆ ಕಿತ್ತು ತಿನ್ನುತ್ತಿರುವ ಪ್ರಕರಣಗಳೂ ವರದಿಯಾಗುತಿದ್ದು ಇವು ವೈದ್ಯಕೀಯ ವೃತ್ತಿಯ ಘನತೆಯನ್ನೇ ಕುಗ್ಗಿಸಿವೆ. ಈಗಾಗಲೇ ನಕಲಿ ರೆಮ್ಡಿಸಿವಿರ್‌ಮಾರಾಟ, ಆಕ್ಸಿಜನ್‌ಸಿಲಿಂಡರ್‌ಮಾರಾಟ , ರೋಗಿಗೆ ರೆಮಿಡಿಸಿವಿರ್‌ನೀಡದೇ ಹೊರೆಗೆ ಮಾರಾಟ ಮಾಡಿರುವ ನೂರಾರು ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿ ಆಗುತ್ತಿವೆ.

ಈಗ ಇಂತಹ ಘಟನೆಯೊಂದು ಮಡಿಕೇರಿ ಜಿಲ್ಲಾಸ್ಪತ್ರೆಯಿಂದ ವರದಿ ಆಗಿದ್ದು ಇಲ್ಲಿನ ತಜ್ಞ ವೈದ್ಯ ಶಿವ ಕುಮಾರ್ ಇಬ್ಬರು ರೋಗಿಗಳ ಸಂಭಂದಿಕರಿಂದ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದಾಗಿ ಹಣ ಪಡೆದಿರುವುದು ಸ್ಟಿಂಗ್‌ಆಪರೇಷನ್‌ನಲ್ಲಿ ಬಯಲಾಗಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಸೆಂಟರ್ನಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿರುವ ಡಾ.ಶಿವಕುಮಾರ್, ಬಾಯಿಬಿಟ್ಟು ರೋಗಿಗಳಿಗೆ ಇಂತಿಷ್ಟು ಹಣ ಬೇಕೆಂದು ಕೇಳುತ್ತಾರೆ. . ಗರಿಗರಿ ನೋಟು ತಲುಪಿಸಿದರಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾರೆ.ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಸ್.ಶಮೀರ್ ಅಹಮದ್ ನೀಡಿದ ಮಾಹಿತಿ ಮತ್ತು ದಾಖಲೆ ಆಧಾರದಲ್ಲಿ ಪತ್ರಕರ್ತರು ನಡೆಸಿದ ಕಾರ್ಯಾಚರಣೆಯಲ್ಲಿ ವೈದ್ಯನ ಲಂಚಾವತಾರ ಸಾಕ್ಷಿಸಹಿತ ಬಯಲುಗೊಂಡಿದೆ. ಕಾರ್ಯಾಚರಣೆಗೆ ವಿಶ್ವ ಹಿಂದು ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೆರ ಕೂಡ ಪಾಲ್ಗೊಂಡಿದ್ದರು.ಇಬ್ಬರು ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಮ್ಮ ಕಾರ್ಯಾಚರಣೆ ತಂಡದವರು ಮನವಿ ಮಾಡಿದ್ದಾರೆ. ವೈದ್ಯ ಶಿವಕುಮಾರ್ ಒಟ್ಟು 5 ಸಾವಿರ ರೂ. ಕೇಳಿರುವುದು ಹಾಗೂ ಇಬ್ಬರು ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆಯೊಂದಿಗೆ 4500 ರೂ. ಸ್ವೀಕರಿಸಿರುವುದಕ್ಕೆ ಸಂಬಂಧಿಸಿದಂತೆ ಆಡಿಯೋ ಮತ್ತು ವಿಡಿಯೋ ದಾಖಲೆ ಕೂಡ ಇದೆ.

ಮಾಲ್ದಾರೆ ಗ್ರಾಪಂ ವ್ಯಾಪ್ತಿಯ 38ರ ಪ್ರಾಯದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲು ಆಕೆಯ ಸಂಬಂಧಿಕರು 1 ಸಾವಿರ ರೂ. ವೈದ್ಯನಿಗೆ ನೀಡಿದ್ದರು. ಮೇ 13 ರಂದು ರಾತ್ರಿ 9 ಗಂಟೆಗೆ ಆಸ್ಪತ್ರೆಯಿಂದ ಹೊರಗೆ ಬಂದು ವೈದ್ಯ ಲಂಚ ಪಡೆದುಕೊಂಡಿದ್ದ, ಈ ವೇಳೆ ಟಿ.ಎಸ್. ಶಮೀರ್ ದೂರದಲ್ಲಿದ್ದು, ವೈದ್ಯನ ಕರ್ಮಕಾಂಡದ ಧ್ವನಿಮುದ್ರಿಕೆ ಮಾಡಿಕೊಂಡಿದ್ದರು. ಅದನ್ನು ಪತ್ರಿಕೆಗೆ ತಲುಪಿಸಿದ್ದರು.  ಸೋಮವಾರ ರಾತ್ರಿ 8 ಗಂಟೆಗೆ ಕೋವಿಡ್ ಆಸ್ಪತ್ರೆ ಮುಂಭಾಗಕ್ಕೆ ತೆರಳಿದ್ದ ಕಾರ್ಯಾಚರಣೆ ತಂಡದ ಸದಸ್ಯರು ವೈದ್ಯನಿಗೆ ಕರೆ ಮಾಡಿದ್ದು, 5 ನಿಮಿಷ ಬಿಟ್ಟು ಕರೆ ಮಾಡುವುದಾಗಿ ಹೇಳಿದ್ದ. 15 ನಿಮಿಷದ ಬಳಿಕ ಆಸ್ಪತ್ರೆಯಿಂದ ಹೊರ ಬಂದ ವೈದ್ಯ,   ಆಸ್ಪತ್ರೆ ಆವರಣದಲ್ಲಿ ಕತ್ತಲೆಯಾಗಿರುವ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಯಾರೂ ತಮ್ಮನ್ನು ನೋಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕ ಲಂಚದ ಹಣ ಸ್ವೀಕರಿಸಿದ. ಒಬ್ಬ ರೋಗಿಗೆ ಸಂಬಂಧಿಸಿದಂತೆ 4 ಸಾವಿರ ರೂ. ಸ್ವೀಕರಿಸಿದ. ಮತ್ತೊಬ್ಬ ರೋಗಿಗೆ ಸಂಬಂಧಿಸಿದಂತೆ 1 ಸಾವಿರ ರೂ. ಕೇಳಿದ್ದು, ನಮ್ಮ ತಂಡದ ಸದಸ್ಯ ನನ್ನ ಕೈಯಲ್ಲಿ ಈಗ 500 ರೂ. ಇದೆ. ನಾಳೆ ಬಾಕಿ ತಂದುಕೊಡುವುದಾಗಿ ಹೇಳಿದ. ಅದಕ್ಕೆ ಒಪ್ಪಿಕೊಂಡ ವೈದ್ಯ, ರೋಗಿಯನ್ನು ನೋಡಿ ಹೇಗಿದ್ದಾರೆಂದು ಹೇಳುವುದಾಗಿ ಭರವಸೆ ನೀಡಿ ತೆರಳಿದ್ದಾರೆ.

ಕಳೆದ ಬಾರಿಯ ಕೋವಿಡ್‌ಸಂದರ್ಭದಲ್ಲಿ ಹಸಿರು ಪಟ್ಟಿಯಲ್ಲಿದ್ದ ಪ್ರವಾಸೀ ಜಿಲ್ಲೆ ಕೊಡಗು ಈ ವರ್ಷ ಮೊದಲಿನಿಂದಲೂ ಸೋಂಕು ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿಯೇ ಇದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೋವಿಡ್‌ಪ್ರಕರಣಗಳಿರುವ 6 ಜಿಲ್ಲೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಇಲ್ಲಿನ ಜಿಲ್ಲಾಡಳಿತ ಸೋಂಕು ಪ್ರಕರಣಗಳನ್ನು ಕುಗ್ಗಿಸಲು ಶ್ರಮವಹಿಸಿ ಕೆಲಸ ಮಾಡುತ್ತಿದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಇಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸಿರುವ ಸೋಂಕು ಪ್ರಕರಣಗಳ ಬಹುತೇಕ ಸಾವುಗಳೆಲ್ಲವೂ ರಾತ್ರಿ ಸಂಭವಿಸಿವೆ. ವೆಂಟಿಲೇಟರ್‌ಗಳನ್ನು ತಮಗೆ ಬೇಕಾದವರಿಗೆ ಮಾರಿಕೊಳ್ಳಲು ಸಿಬ್ಬಂದಿಗಳು ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡುತ್ತಿದ್ದರೆ ಎಂಬ ಸಂಶಯವೂ ವ್ಯಕ್ತವಾಗಿದೆ. ಇಲ್ಲಿನ ಕೋವಿಡ್‌ವಾರ್ಡ್‌ನಲ್ಲಿ ಸೋಂಕಿತರು ಊಟ ಸರಿಯಾಗಿಲ್ಲ ಎಂದು ದೂರಿಕೊಡಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿಗಳು ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಲ್ಲದೆ ಸೋಂಕಿತರಿಗೆ ರುಚಿ ಮತ್ತು ವಾಸನಾ ಶಕ್ತಿ ಇಲ್ಲದಿರುವುದರಿಂದ ಹಾಗೆ ಅನಿಸುತ್ತಿದೆ ಎಂದು ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ದಾಖಲಾಗಿದ್ದ ಸೋಂಕಿತರ ಬೆಲೆ ಬಾಳುವ ಮೊಬೈಲ್‌ಗಳು ಕಳುವಾಗಿದ್ದು ಇವು ಈಗಲೂ ಸ್ವಿಚ್‌ಆಫ್‌ಮೋಡ್‌ನಲ್ಲಿವೆ. ಇದರ ಬಗ್ಗೆ ತನಿಖೆ ಆಗಲೇಬೇಕಿದೆ.

 ಕಳೆದ ವಾರ 3 ದಿನ ಕೊಡಗು ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಿಲ್ಲೆಯಲ್ಲಿ ಹೆಚ್ಚಾಗಿರುವ ಕೋವಿಡ್ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ವೈದ್ಯಾಧಿಕಾರಿಗಳು, ವೈದ್ಯರು ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಕರ್ತವ್ಯಲೋಪ ಸಹಿಸಲಾಗದು, ಸಾವಿನ ಸಂಖ್ಯೆ ಇಳಿಕೆ ಆಗದಿದ್ದಲ್ಲಿ ವೈದ್ಯಾಧಿಕಾರಿಗಳನ್ನು ಬದಲಾಯಿಸುವ ಎಚ್ಚರಿಕೆ ನೀಡಿದ್ದರು.

 ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೇರ ಅವರು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಾಗಿರುವ ಬಹುತೇಕ ಸಾವುಗಳು ರಾತ್ರಿ ವೇಳೆ ಸಂಭವಿಸಿರುವುದು ಅನುಮಾನ ಮೂಡಿಸಿದೆ. ರಾತ್ರಿ ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂದಿಗ್ದ ಸಮಯದಲ್ಲೂ ಜನರ ಹತ್ತಿರ ದುಡ್ಡು ಕೀಳುವ ವೈದ್ಯರ ವಿರುದ್ದ  ಅಮೂಲಾಗ್ರ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

 ವೈದ್ಯನ ಲಂಚ ಪ್ರಕರಣವು ಪತ್ರಿಕೆಗಳಲ್ಲಿ ಟಿವಿಗಳಲ್ಲಿ ವೈರಲ್‌ ಆಗುತಿದ್ದಂತೆ ಎಚ್ಚತ್ತುಕೊಂಡ ಜಿಲ್ಲಾಡಳಿತ ವೈದ್ಯನನ್ನು ಅಮಾನತ್ತುಗೊಳಿಸಿದೆ. ಇಂತಹ ವೈದ್ಯರು ಇನ್ನೆಂದೂ ಸೇವೆಗೆ ಬಾರದಿರಲಿ ಎಂದು ಜನತೆಯ ಆಶಯ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...