
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಟ್ರೋಫಿ ತನ್ನದಾಗಿಸಿಕೊಂಡಿದ್ದು, ಇವತ್ತು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮನೆ ಮಾಡಲಿದೆ. ಗುಜರಾತ್ನ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಜಯ ದಾಖಲಿಸಿ ತವರಿಗೆ ಆಗಮಿಸುತ್ತಿದ್ದು, ವಿಕ್ಟರಿ ಪರೇಡ್ ಮಾಡಲು ಸಕಲ ತಯಾರಿಗಳು ನಡೆದಿವೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದ್ದು, ಬೆಂಗಳೂರಿನಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿದೆ.
ಆರ್ಸಿಬಿ ತಂಡದ ಷಡ್ಯೂಲ್ ನೋಡೋದಾದ್ರೆ ಮಧ್ಯಾಹ್ನ 1 ಘಂಟೆಗೆ ವಿಶೇಷ ವಿಮಾನದ ಮೂಲಕ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಲಿರುವ ಟೀಂ ಆಟಗಾರರು ಹಾಗು ಸಹಾಯಕ ಸಿಬ್ಬಂದಿ, ಕೋಚ್, ಆಡಳಿತಾಧಿಕಾರಿಗಳು,

ತಾಜ್‌ವೆಸ್ಟೆಂಡ್ ಹೊಟೇಲ್‌ನಲ್ಲಿನ ವಿಶ್ರಾಂತಿ ಪಡೆಯಲಿದ್ದಾರೆ. ಮಧ್ಯಾಹ್ನ 3 ಘಂಟೆಗೆ ವಿಧಾನಸೌಧದ ಮುಂಭಾಗದಿಂದ ವಿಕ್ಟರಿ ಪರೇಡ್ ಆರಂಭ ಆಗಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ತನಕ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ.

ಆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಕ್ಟರಿ ಪ್ರೋಗ್ರಾಂ ನಡೆಯಲಿದೆ. 18 ವರ್ಷಗಳ ಅಭಿಮಾನಗಳ ಕಾಯುವಿಕೆಗೆ ಫುಲ್ ಸ್ಟಾಪ್ ಬಿದ್ದಿದ್ದು, ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ವಿರಾಟ್ ಕೊಹ್ಲಿ ಮತನಾಡಲಿದ್ದಾರೆ. ಈಗಾಗಲೇ ಚಿಕ್ಕಸ್ವಾಮಿ ಸ್ಟೇಡಿಯಂ ಕಡೆಗೆ ಅಭಿಮಾನಿಗಳು ಹರಿದು ಬರುತ್ತಿದ್ದು, ಸುಮಾರು 40 ಸಾವಿರ ಅಭಿಮಾನಿಗಳಿಗೆ ಉಚಿತ ಪ್ರವೇಶ ಸಿಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮಕ್ಕೆ ಕರ್ನಾಟಕ ಕ್ರಿಕೆಟ್ ಅಕಾಡೆಮಿ ಯಾವುದೇ ಟಿಕೆಟ್ ನಿಗದಿ ಮಾಡಿರದ ಕಾರಣಕ್ಕೆ ಅಭಿಮಾನಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.

ಫೈನಲ್ ಪಂದ್ಯದಲ್ಲಿ ಗೆದ್ದು ಐಪಿಎಲ್ ಕಪ್ ಜೊತೆಗೆ ಬರ್ತಿರೋ RCB ತಂಡವನ್ನು ಸ್ವಾಗತಿಸಲು ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದ್ದು, ವಿಕ್ಟರಿ ಪರೇಡ್ಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಗಂಣದವರೆಗೂ ನಡೆಯುವ ಪರೇಡ್ ಪೊಲೀಸ್ ಕಣ್ಗಾವಲಿನಲ್ಲಿ ನಡೆಯಲಿದೆ. 3 ಜನ ಡಿಸಿಪಿಗಳು, 9 ಜನ ಎಸಿಪಿಗಳು, 12 ಜನ ಇನ್ಸ್ ಪೆಕ್ಟರ್ ಗಳು ಹಾಗೂ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. CTO ಜಂಕ್ಷನ್ ಹಾಗೂ ಕಾಫಿ ಬೋರ್ಡ್ ಜಕ್ಷನ್ನಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಜನರನ್ನು ನಿಯಂತ್ರಿಸಲು ಸಿದ್ಧತೆಗಳು ನಡೆದಿವೆ.







