ರಾಜ್ಯದಲ್ಲಿ ನಾಳೆ ಪ್ರಜಾಪ್ರಭುತ್ವದ ಹಬ್ಬವೇ ನಡೆಯಲಿದೆ. ಮತದಾನ ಮಾಡಲು ಮತಗಟ್ಟೆಗಳಿಗೆ ಬರುವ ಮತದಾರರು ತಮ್ಮ ಗುರುತಿಗಾಗಿ ಈ ಕೆಳಗಿನ ಪೂರಕ ದಾಖಲೆಗಳನ್ನು ಸಲ್ಲಿಸಬಹುದಾಗಿದೆ.
ಮೊದಲನೆಯದಾಗಿ ಮತಗಟ್ಟೆಗೆ ಬರುವ ಮತದಾರರು ಭಾರತೀಯ ಚುನಾವಣಾ ಆಯೋಗ ನೀಡಿದ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಎದುರು ಹಾಜರುಪಡಿಸಬೇಕು.
ಒಂದು ವೇಳೆ ಈ ದಾಖಲೆಯನ್ನು ಹಾಜರುಪಡಿಸಲು ಸಾಧ್ಯವಾಗದೇ ಹೋದಲ್ಲಿ ಕೆಳಗಿರುವ 11 ದಾಖಲೆಗಳ ಪೈಕಿ ಯಾವುದೇ ದಾಖಲೆಗಳನ್ನು ಮತಗಟ್ಟೆಗಳಲ್ಲಿ ಅಧಿಕಾರಿಗಳ ಎದುರು ಹಾಜರುಪಡಿಸಬಹುದಾಗಿದೆ.
ಮತದಾರರ ಭಾವಚಿತ್ರವಿರುವ ವೋಟರ್ ಸ್ಲಿಪ್ ಕೂಡ ಮತದಾರರಿಗೆ ವಿತರಣೆ ಮಾಡಲಾಗುವುದು.
- ಆಧಾರ್ ಕಾರ್ಡ್
- ಮನರೇಗಾ ಯೋಜನೆಯಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್ ಪಾಸ್‍ಪೋರ್ಟ್
- ಭಾವಚಿತ್ರವಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಪಾಸ್ ಪುಸ್ತಕ
- ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ)
- ವಾಹನ ಪರವಾನಗಿ.
- ಪಾನ್‍ಕಾರ್ಡ್
- ರಾಷ್ಟ್ರೀಯ ಜನಸಂಖ್ಯೆ ನೊಂದಣಿ ವಹಿ ಯೋಜನೆಯಡಿ RGI ವಿತರಿಸಿರುವ ಸ್ಮಾರ್ಟ್ ಕಾರ್ಡ್ ಗಳು
- ಭಾರತಿಯ ಪಾಸ್ ಪೋರ್ಟ್
- ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶ ಪತ್ರಗಳು
- ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
- ಸಂಸದರು, ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ನೀಡಿರುವ ಗುರುತಿನ ಚೀಟಿ.
ನಾಳೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಯುಯನ್ನು ಹಾಕಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.






