ಈ ಪೆನ್ ಡ್ರೈವ್ ಸಂಚು ಜಾರಿಗೆ ತರಲು CDಶಿವಕುಮಾರ್ ಮತ್ತು ಅವರ ಸ್ಲೀಪರ್ ಸೆಲ್ ನ ಟೂಲ್ ಕಿಟ್ ವ್ಯವಹಾರದ ಬಗ್ಗೆ ಜೆಡಿಎಸ್ ಎಳೆಎಳೆಯಾಗಿ ವಿವರಿಸಿ ಆಕ್ರೋಶ ಹೊರಹಾಕಿದೆ.

•ಈ ಮಹಾಸಂಚು ಸಾಕಾರಕ್ಕೆ CDಶಿವಕುಮಾರ್ ಹೂಡಲಿದ್ದ ಬಂಡವಾಳ ಬರೋಬ್ಬರಿ ₹100 ಕೋಟಿಯಂತೆ !
•ಹೆಚ್.ಡಿ.ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಹೇಳಲು ವಕೀಲ ದೇವರಾಜೇಗೌಡರಿಗೆ ₹100 ಕೋಟಿ ಆಫರ್ ಕೊಟ್ಟಿದ್ರಂತೆ
•ಅಡ್ವಾನ್ಸ್ ಆಗಿ ₹5 ಕೋಟಿ ಹಣವನ್ನು ಬೌರಿಂಗ್ ಕ್ಲಬ್ಬಿನ ಕೊಠಡಿ ಸಂಖ್ಯೆ 110ಕ್ಕೆ ಕಳುಹಿಸಿಕೊಡಲಾಗಿತ್ತಂತೆ
•ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ರೆಡಿ ಮಾಡಿದ್ದೇ CDಶಿವಕುಮಾರ್ ಎಂಬ ಆರೋಪ !
•ಮೋದಿ, ಕುಮಾರಸ್ವಾಮಿ ಅವರುಗಳ ವಿರುದ್ಧ ಅಪಪ್ರಚಾರ ನಡೆಸಲು, ಇಡೀ ಸಂಚು ಅನುಷ್ಠಾನಕ್ಕೆ ನಾಲ್ವರು ಪ್ರಮುಖ ಸಚಿವರ ಸಮಿತಿ ರಚಿಸಿದ್ದೇ CDಶಿವಕುಮಾರ್ ಎಂಬ ಆರೋಪ.
•ದೇವೇಗೌಡರನ್ನು ಸಾವಿನ ದವಡೆಗೆ ನೂಕುವುದು ಈ ಸ್ಲೀಪರ್ ಸೆಲ್ ನ ಮಹಾನ್ ಟಾರ್ಗೆಟ್ ಆಗಿತ್ತಂತೆ.

ವಕೀಲರಾದ ದೇವೇರಾಜೇಗೌಡರೇ ಸ್ವತಃ ಬಿಚ್ಚಿಟ್ಟ ಈ ಸತ್ಯಗಳು ಹಾಗೂ ಆಡಿಯೋ ಟೇಪುಗಳು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಮಾನವನ್ನು ಬೀದಿ ಬೀದಿಯಲ್ಲಿ ಹರಾಜು ಹಾಕಿವೆ. ಕಂಡವರ ಮನೆಯಲ್ಲಿ ಸಾವು ಬಯಸುವ ಕಾಂಗ್ರೆಸ್ಸಿಗೆ ಧಿಕ್ಕಾರ ಎಂದು ಜೆಡಿಎಸ್ ಕಿಡಿಕಾರಿದೆ.