ತಮ್ಮ ಅವಧಿ ಮುಗಿಯುವ ಮುನ್ನವೇ ವಿಧಾನಪರಿಷತ್(MLC) ಸದಸ್ಯೆ ತೇಜಸ್ವಿನಿ ಗೌಡ(Tejaswini Gowd) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ ಕುತೂಹಲಕ್ಕೆ ಕಾರಣವಾಗಿದ್ದರು. ಮುಂಬರುವ ಜೂನ್ ೨೦೨೪ ರ (June 2024) ವರೆಗೂ ಅವರ ಪರಿಷತ್ ಸದಸ್ಯ ಅವಧಿ ಸಮಯ ಇತ್ತು. ಆದ್ರೆ ೩ ತಿಂಗಳು (3 months) ಮುಂಚಿತವಾಗಿಯೇ ಸ್ವಯಂ ಪ್ರೇರಿತವಾಗಿ ತೇಜಸ್ವಿನಿ ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದೀಗ ಕೂತೂಹಲಗಳಿಗೆ ಬ್ರೇಕ್ ಹಾಕಿ ತೇಜಸ್ವಿನಿ ಗೌಡ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.
ಈ ಮೊದಲಿನಿಂದಲೂ ತೇಜಸ್ವಿನಿ ಅವರಿಗೆ ಲೋಕಸಭೆಗೆ ಚುನಾವಣೆಗೆ (Parliment election) ನಿಲ್ಲಬೇಕು ಎಂಬ ಇಂಗಿತ ಇತ್ತು. ಅದಕ್ಕಾಗಿ ಅವರು ಪಕ್ಷದ ನಾಯಕರ ಬಳಿ ತಮ್ಮ ಆಕಾಂಶೆಯನ್ನ ಹೇಳಿಕೊಂಡಿದ್ದರು ಕೂಡ. ಆದ್ರೆ ಪಕ್ಷದ ಹೈಕಮ್ಯಾಂಡ್(Highcommand) ನಿಂದ ಯಾವುದೇ ಸಕಾರಾತ್ಮ ಸ್ಪಂದನೆ ಸಿಕ್ಕಿರಲಿಲ್ಲ. ಆ ಕಾರಣಕ್ಕಾಗಿ ಅವರು MLC ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮೂಲತಃ ಪತ್ರಕರ್ತೆ (Journalist) ಆಗಿದ್ದ ತೇಜಸ್ವಿನಿ ದೇವೇಗೌಡರ (Devegowda) ವಿರುದ್ಧ ಕಣಕ್ಕಿಳಿಯೋದರ ಮೂಲಕ ಚುನಾವಣಾ ರಾಜಕಾರಣಕ್ಕೆ ಬಂದಿದ್ದರು. ಡಿಕೆ ಶಿವಕುಮಾರ್ (DK shivakumar) ತೇಜಸ್ವಿನಿ ಅವರನ್ನ ಚುನಾವಣಾ ರಂಗ ಪ್ರವೇಶ ಮಾಡಿಸಿದ್ದರು. ನಂತರದ ಬೆಳವಣಿಗೆಯಲ್ಲಿ ತೇಜಸ್ವಿನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದರು. ಇದೀಗ ತೇಜಸ್ವಿನಿ ಬಿಜೆಪಿ(BJP) ಬಿಟ್ಟು ಹೊರಬಂದು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.