ಸಿಎಂ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ, ಕಮಲ ಪಾಳಯಕ್ಕೆ ಠಕ್ಕರ್ ಕೊಟ್ಟಿದೆ. ಆದ್ರೆ ಗೆಲುವಿನ ನಿರೀಕ್ಷೆಯಿದ್ದ ಸಿಂದಗಿಯಲ್ಲೇ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಹಾಗಾದ್ರೆ ಹಾನಗಲ್ನಲ್ಲಿ ಕಾಂಗ್ರೆಸ್ಗೆ ವರ್ಕ್ಔಟ್ ಆಗಿದ್ದೇನು? ಸಿಂದಗಿಯಲ್ಲಿ ಕೈ ಪಾಳಯದ ಕೈ ಸುಡಲು ಕಾರಣಗಳೇನು? ಇಲ್ಲಿದೆ ಇದರ ಕಂಪ್ಲೀಟ್ ರಿಪೋರ್ಟ್.
ಹಾನಗಲ್, ಸಿಎಂ ಬಸವರಾಜ್ ಬೊಮ್ಮಾಯಿಯ ತವರು ಜಿಲ್ಲೆಯ ಕ್ಷೇತ್ರ. ಸಿಎಂಗೆ ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರ. ಹೇಳಿ ಕೇಳಿ ಕೇಸರಿ ಪಾಳಯದ ಹಿಡಿತದಲ್ಲಿದ್ದ ಕ್ಷೇತ್ರ. ಆದ್ರೆ ಇಂತಹ ಕೇಸರಿ ಪಾಳಯದ ಕೋಟೆಗೆ ನುಗ್ಗಿ ಕಾಂಗ್ರೆಸ್ ತನ್ನ ಧ್ವಜ ಹಾರಿಸಿದೆ. ಸಿಎಂ ತವರು ಜಿಲ್ಲೆಯಲ್ಲೇ ಜಯ ಭೇರಿ ಬಾರಿಸಿ ಬಿಜೆಪಿಗೆ ಠಕ್ಕರ್ ಕೊಟ್ಟಿದೆ.
ಈಗ ಹಾನಗಲ್ನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು, ಬಿಜೆಪಿ ವಿರುದ್ಧ ಶ್ರೀನಿವಾಸ್ ಮಾನೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬರೊಬ್ಬರಿ 87,113 ಮತಗಳನ್ನ ಪಡೆದ ಶ್ರೀನಿವಾಸ್ ಮಾನೆ, 7,598 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಬಿಜೆಪಿ ಕೈನಲ್ಲಿದ್ದ ಕ್ಷೇತ್ರವನ್ನ ತನ್ನ ವಶಕ್ಕೆ ಪಡೆದುಕೊಂಡಿರುವ ಕಾಂಗ್ರೆಸ್ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ಸಾಬೀತು ಪಡಿಸಿದೆ.
ಫಲಿಸಿದ ಸಂಧಾನ ಸೂತ್ರ!
- ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾನೆ ಭರ್ಜರಿ ಗೆಲುವು
- ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾಬೀತು ಮಾಡಿದ ಕಾಂಗ್ರೆಸ್
- ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ಮನೋಹರ ತಹಶೀಲ್ದಾರ
- ಮನೋಹರ ತಹಶೀಲ್ದಾರನ್ನ ಶಾಂತಗೊಳಿಸಿದ್ದ ‘ಕೈ’ ನಾಯಕರು
- ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದ ಡಿಕೆಶಿ, ಸಿದ್ದರಾಮಯ್ಯ
- ಮಾನೆ ಗೆಲುವಿಗೆ ಪೂರಕವಾಗಿದ್ದ ಮನೋಹರ ಯಶಸ್ವಿ ಸಂಧಾನ
ಮಾನೆ ಗೆಲುವಿನ ಮೂಲಕ ಸಂಧಾನದ ಫಲ ಪಡೆದ ನಾಯಕರು
ಇನ್ನು, ಹಾನಗಲ್ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ಸಾಬೀತು ಮಾಡಿದೆ. ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ಮನೋಹರ ತಹಶೀಲ್ದಾರರನ್ನ ಕಾಂಗ್ರೆಸ್ ನಾಯಕರು ಶಾಂತಗೊಳಿಸಿದ್ದರು. ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಇದೇ ಸಂಧಾನ ಮಾನೆ ಗೆಲುವಿಗೆ ಪೂರಕವಾಗಿದ್ದು, ಈ ಮೂಲಕ ಕಾಂಗ್ರೆಸ್ ನಾಯಕರು ಸಂಧಾನದ ಫಲ ಪಡೆದಿದ್ದಾರೆ.
ಸದ್ಯ ಹಾನಗಲ್ನಲ್ಲಿ ಕಾಂಗ್ರೆಸ್ನ ಶ್ರೀನಿವಾಸ ಮಾನೆ ಗೆಲುವಿನಿಂದ ಯುವ ಶಾಸಕರ ಪವರ್ ಸೆಂಟರ್ ಉದಯವಾಗಿದೆ. ಮಾನೆ ಗೆಲುವಿಗೆ ಸಮಾನ ಮನಸ್ಕರ ಯುವಕರು ಟೊಂಕ ಕಟ್ಟಿ ಶ್ರಮಿಸಿದ್ದರಿಂದ, ಡಿಕೆಶಿ, ಸಿದ್ದು ಹೊರತಾಗಿ ಯುವ ಶಾಸಕರ ಪವರ್ ಸೆಂಟರ್ವೊಂದು ಉದಯವಾಗಿದೆ.
ಯುವ ಶಾಸಕರ ‘ಪವರ್’
- ಹಾನಗಲ್ ಗೆಲುವಿನಿಂದ ಯುವ ಶಾಸಕರ ಪವರ್ ಸೆಂಟರ್ ಉದಯ
- ಪವರ್ ಸೆಂಟರ್ನಲ್ಲಿ ಒಕ್ಕಲಿಗ, ಬ್ರಾಹ್ಮಣ, ಅಲ್ವ ಸಂಖ್ಯಾತ ಶಾಸಕರು
- ಸಮಾನ ಮನಸ್ಕರ ಯುವ ಶಾಸಕರ ಜಂಟಿ ಪ್ರಚಾರದಿಂದಾಗಿ ಗೆಲುವು
- ಯುವ ಶಾಸಕರ ಪವರ್ ಸೆಂಟರ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ
ಹಾನಗಲ್ ಗೆಲುವು ಸದ್ಯ ರಾಜ್ಯ ಕಾಂಗ್ರೆಸ್ನಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದು ಹೊರತಾದ ಯುವ ಶಾಸಕರ ಪವರ್ ಸೆಂಟರ್ ಉದಯಕ್ಕೆ ಕಾರಣವಾಗಿದೆ. ಈ ಪವರ್ ಸೆಂಟರ್ನಲ್ಲಿ ಒಕ್ಕಲಿಗ, ಬ್ರಾಹ್ಮಣ, ಅಲ್ವ ಸಂಖ್ಯಾತ, ಮರಾಠ ಹಾಗೂ ದಲಿತ ಶಾಸಕರು ಸೇರಿದಂತೆ ಸಮಾನ ಮನಸ್ಕರರ ಯುವ ಶಾಸಕರು ಒಳಗೊಂಡಿದ್ದಾರೆ. ಈ ಎಲ್ಲಾ ಸಮಾನ ಮನಸ್ಕ ಯುವ ಶಾಸಕರ ಜಂಟಿ ಪ್ರಚಾರದಿಂದಾಗಿ ಮಾನೆ ಗೆಲುವಿನ ನಗೆ ಬೀರೋದಕ್ಕೆ ಕಾರಣ ಅಂತಾ ಹೇಳಲಾಗ್ತಿದೆ. ಸದ್ಯ ಯುವ ಶಾಸಕರ ಪವರ್ ಸೆಂಟರ್ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಲೂ ಪೂರಕವಾಗಿದೆ.
ಸದ್ಯ ಸಿಎಂ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಗೆಲುವಿನ ನಗೆ ಏನೋ ಬೀರಿದೆ ಆದ್ರೆ ಭಾರೀ ನಿರೀಕ್ಷೆ ಇದ್ದ ಸಿಂದಗಿಯಲ್ಲೇ ಕಾಂಗ್ರೆಸ್ ಸೋಲುಂಡಿದೆ. ರಮೇಶ್ ಬೂಸನೂರು ವಿರುದ್ಧ ಕೈ ಅಭ್ಯರ್ಥಿ ಅಶೋಕ್ ಮನಗುಳಿ ಪರಾಭವಗೊಂಡಿದ್ದಾರೆ. ಅಷ್ಟಕ್ಕೂ ಸಿಂದಗಿಯಲ್ಲಿ ಕಾಂಗ್ರೆಸ್ ಎಡವಿದ್ದೆಲ್ಲಿ ಅಂತಾ ನೋಡೋದಾದ್ರೆ…
ಸಿಂದಗಿಯಲ್ಲಿ ಕಾಂಗ್ರೆಸ್ ಎಡವಿದ್ದೆಲ್ಲಿ?
- ಸ್ಥಳೀಯವಾಗಿ ಟಿಕೆಟ್ ಆಕಾಂಕ್ಷಿಗಳ ಒಳೇಟನ್ನು ತಡೆಯುವಲ್ಲಿ ವಿಫಲ
- ಅಶೋಕ್ ಬಗ್ಗೆ ಸ್ಥಳೀಯವಾಗಿದ್ದ ಅಸಮಾಧಾನ ಅರಿಯದೆ ಅಭ್ಯರ್ಥಿ ಮಾಡಿದ್ದು
- ಎಂಬಿಪಿ, ಶಿವಾನಂದ, ಯಶವಂತರಾಯ ಗೌಡ ಪಾಟೀಲ್ ಬಣಗಳ ಸಂಧಾನ ವಿಫಲ
- ಅಲ್ಪಸಂಖ್ಯಾತ ಮತಗಳು ಜೆಡಿಎಸ್ ತೆಕ್ಕೆಗೆ ಹೋಗದಂತೆ ತಡೆಯುವಲ್ಲಿ ವಿಫಲ
ಸ್ಥಳೀಯವಾಗಿ ಟಿಕೆಟ್ ಆಕಾಂಕ್ಷಿಗಳ ಒಳೇಟನ್ನು ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಅಂತಾ ಹೇಳಲಾಗ್ತಿದೆ. ಅಲ್ಲದೆ ಅಶೋಕ್ ಬಗ್ಗೆ ಸ್ಥಳೀಯವಾಗಿದ್ದ ಅಸಮಾಧಾನ ಅರಿಯದೆ ಅವರನ್ನ ಅಭ್ಯರ್ಥಿ ಮಾಡಿದ್ದು ಕೂಡ ಕಾಂಗ್ರೆಸ್ನ ಕೈ ಸುಡಲು ಕಾರಣವಾಗಿರಬಹುದು. ಇನ್ನು ಎಂಬಿಪಿ, ಶಿವಾನಂದ ಹಾಗೂ ಯಶವಂತರಾಯ ಗೌಡ ಪಾಟೀಲ್ ಬಣಗಳ ಸಂಧಾನದಲ್ಲಿ ವಿಫಲವಾಗಿದ್ದು ಕೂಡ ಕಾಂಗ್ರೆಸ್ ಸೋಲಿಗೆ ಕಾರಣವಾಗಿರಬಹುದು. ಇದಿಷ್ಟೇ ಅಲ್ಲ, ಅಲ್ಪಸಂಖ್ಯಾತ ಮತಗಳು ಜೆಡಿಎಸ್ ತೆಕ್ಕೆಗೆ ಹೋಗದಂತೆ ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿರೋದು ಕೂಡ ಸೋಲಿನ ಹಿಂದಿರುವ ಕಾರಣ ಅಂತಾ ಹೇಳಲಾಗ್ತಿದೆ.
ಒಟ್ಟಾರೆ ಹಾನಗಲ್ನಲ್ಲಿ ಕಾಂಗ್ರೆಸ್ ನಾಯಕರ ಅಬ್ಬರದ ಪ್ರಚಾರಕ್ಕೆ ಮತದಾರರು ಅಸ್ತು ಎಂದಿದ್ದಾರೆ. ನಾಯಕರ ಒಗ್ಗಟ್ಟಿನ ಮಂತ್ರದಿಂದ ಹಾನಗಲ್ನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಸದ್ಯ ಹಾನಗಲ್ನ ಈ ಗೆಲುವು 2023ರ ಚುನಾವಣೆ ಎದುರಿಸಲು ಕಾಂಗ್ರೆಸ್ಗೆ ಹೊಸದೊಂದು ಭರವಸೆ ಮೂಡಿಸಿದೆ.