ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ (KPCC) ಗುದ್ದಾಟ ತೀವ್ರಗೊಂಡಿದ್ದ ಬೆನ್ನಲ್ಲೇ ಡಿಕೆಶಿ (Dk Shivakumar) ಮಾಸ್ಟರ್ ಸ್ಟ್ರೋಕ್ ಕೊಟ್ಟಂತೆ ಕಾಣುತ್ತಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ನನ್ನದೇ ನೇತೃತ್ವ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಗಾದಿ ಗುದ್ದಾಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (Dcc dk Shivakumar) ಫುಲ್‌ಸ್ಟಾಪ್ ಇಟ್ಟಿದ್ದಾರೆ.

ನಿನ್ನೆ ಗುರುವಾರ ನಡೆದ ಸರ್ಕಾರಿ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡುವ ವೇಳೆ ಚುನಾವಣಾ ನಾಯಕತ್ವ ವಿಚಾರ ಪ್ರಸ್ತಾಪಿಸಿದ ಡಿಕೆಶಿ, ಇನ್ನೂ 8-10 ವರ್ಷ ನಾನು ವಿಧಾನಸೌಧದಲ್ಲಿ ಇರುವವನೇ.. ನನ್ನ ಮೇಲೆ ನಂಬಿಕೆಯಿಡಿ ಎನ್ನುವ ಮೂಲಕ ತಾವೇ ಅಧ್ಯಕ್ಷರಾಗಿ ಮುಂದುವರಿಯೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಚರ್ಚೆ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ಇದು ಕಾಂಗ್ರೆಸ್ ಒಳಗೆ ಇನ್ಯಾವ ರೀತಿಯ ಅಸಮಾಧಾನಕ್ಕೆ ದಾರಿ ಮಾಡಿಕೊಡಲಿದ್ಯೋ ಕಾದು ನೋಡಬೇಕಿದೆ.