ಇಂದು ಕರಾವಳಿ ಜಿಲ್ಲೆಗಳಾದ (Costal districts) ದಕ್ಷಿಣ ಕನ್ನಡ (Dakshina kannada) ಮತ್ತು ಉಡುಪಿಗೆ (Udupi) ಭೇಟಿ ನೀಡಿರುವ ಡಿಕೆ ಶಿವಕುಮಾರ್ (Dk Shivakumar), ಉಡುಪಿಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಪರೋಕ್ಷವಾಗಿ ಧರ್ಮ.. ದೇವರು..ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ.
ದೇವರು ವರ -ಶಾಪ ಕೊಡಲ್ಲ.. ನಾವು ನಂಬಿರುವ ಅವಕಾಶಗಳನ್ನು ಮಾತ್ರ ಕೊಡ್ತಾನೆ. ಆ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ನನಗೆ ಬಿಟ್ಟಿದ್ದು. ಮಾತೃಭೂಮಿ, ಭೂತಾಯಿ, ದೇವಿ ದರ್ಶನ ಮಾಡುವ ಅವಕಾಶ ಸಿಕ್ಕಿದೆ, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದಿದ್ದಾರೆ.

ನಾವು ಧರ್ಮ ಉಳಿಸಬೇಕು..ನಾವು ನಮ್ಮ ಧರ್ಮ ಕಾಪಾಡಬೇಕು.ಯಾರಿಗಾದರು ತೊಂದರೆ ಕೊಡಬೇಕು ಅಂತ ಯಾವ ಧರ್ಮದಲ್ಲೂ ಇಲ್ಲ.ದೇಗುಲಕ್ಕೆ ಸೇವೆ ಮಾಡಿದವರಿಗೆ ದೇವರ ಆಶೀರ್ವಾದವಿರುತ್ತದೆ. ಭಕ್ತಿ ಇಲ್ಲದೆ ಯಾವ ಮನುಷ್ಯನೂ ಬದುಕಲು ಸಾಧ್ಯವಿಲ್ಲ,ಎಲ್ಲಾ ಕಾರ್ಯಕ್ರಮ ಮುಗಿದ ಮೇಲೆ ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ ಎಂದಿದ್ದಾರೆ.
ಈಗಾಗಲೇ ಮಹಾ ಕುಂಭಮೇಳ, ಮಹಾ ಶಿವರಾತ್ರಿಯಲ್ಲಿ ಭಾಗಿಯಾಗಿರುವ ಡಿಕೆ, ನಾನು ಹಿಂದೂವಾಗಿ ಹುಟ್ಟಿದ್ದೇನೆ.. ಹಿಂದುವಾಗಿಯೇ ಸಾಯುತ್ತೇನೆ ಎಂದಿದ್ದರು. ಇದು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಈ ಹೇಳಿಕೆ ಮತೊಮ್ಮೆ ಸಂಚಲನ ಸೃಷಿಸುವ ಸಾಧ್ಯತೆಯಿದೆ.












