ಇನ್ನು ಮುಂದೆ ನಾವು ಬಿಜೆಪಿಯವರಿಗೆ ನಿರಂತರವಾಗಿ ಪ್ರಶ್ನೆ ಕೇಳುತ್ತಾ ಇರುತ್ತೇವೆ ಅವರಿಗೆ ನೈತಿಕತೆ ಇದ್ದರೆ ಉತ್ತರಸಿಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗ ಸವಾಲ್ ಎಸೆದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಡಿಕೆಶಿ ಅಧಿಕಾರಕ್ಕೆ ಬರುವ ದುರಾಸೆಯಿಂದ ಬಿಜೆಪಿಯವರು ದೇಶದ ಜನರ ಮುಂದೆ ಸುಳ್ಳಿನ ಅರಮನೆಯನ್ನು ಕಟ್ಟಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಇದಿದ್ದು ಶೇ.90ರಷ್ಟು ಸುಳ್ಳು ಚುನಾವಣೆ ಸಮಯದಲ್ಲಿ ಜನರಿಗೆ ಮೋಸ ಮಾಡಿ ಈಗ ಬೇರೆ ವಿಚಾರಗಳನ್ನ ಮುನ್ನೆಲೆಗೆ ತಂದು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಭಿವರದ್ದಿ ಹೆಸರಿನಲ್ಲಿ ಸುಳ್ಳನ್ನು ಹೇಳುತ್ತಿರುವ ಬಿಜೆಪಿ ನಾಯಕರೇ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವೀರಾ. ಉದ್ಯೋಗ ಸೃಷ್ಟಿ ಬಗ್ಗೆ ನೀವು ಕೊಟ್ಟ ಭರವಸೆ ಏನಾಯ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಒಂಗಡದ ವಿದ್ಯಾರ್ಥಿಗಳಿಗೆ ನೀಡಿದ್ದೇವೆ ಎನ್ನಲಾದ 4,500 ಕೋಟಿ ಹಣ ಎಲ್ಲಿಗೆ ಹೋಯಿತ್ತು ಎಂದು ಪ್ರಶ್ನಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಣಾಳಿಕೆಯಲ್ಲಿ ನೀವು ನೀಡಿದ ಭರವಸೆಗಳಲ್ಲಿ ಒಂದನ್ನಾದರೂ ನಿಜವ್ವನಾಗಿಸಿದ್ದೀರ. ನಾಡು ನುಡಿಗೆ ನಿಮ್ಮ ಕೊಡುಗೆ ಶೂನ್ಯ. ಭ್ರಷ್ಟಾಚಾರದಲ್ಲಿ ಇಂದು ರಾಜ್ಯ ದೇಶಕ್ಕೆ ರಾಜಧಾನಿಯಾಗಿದೆ ಇದರ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಇನ್ಮುಂದೆ ನಾವು ನಿರಂತರವಾಗಿ ಪ್ರಶ್ನಿಸುತ್ತೀವಿ ನಿಮ್ಮಗೆ ನೈತಿಕತೆ ಇದ್ದರೆ ಉತ್ತರಿಸಿ ಎಂದು ಸವಾಲ್ ಹಾಕಿದ್ದಾರೆ.











