ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿ (MUDA) ನಡೆದಿದ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Cm siddaramaiah) ಸೇರಿ ನಾಲ್ವರಿಗೆ ಕ್ಲೀನ್ ಚಿಟ್ ಸಿಕ್ಕ ವಿಚಾರಕ್ಕೆ ಸಂಭಾದಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ನಾನು ಆರಂಭದಲ್ಲಿ ಹೇಳಿದ್ದೆ. ಬಿಜೆಪಿ-ಜೆಡಿಎಸ್ (BJP-jds) ನವರು ಪಾದಯಾತ್ರೆ ಮಾಡಿದಾಗ ಆವತ್ತೇ ನಾನು ಹೇಳಿದ್ದೆ.ಇದು ರಾಜಕೀಯ ಪ್ರೇರಿತ, ಸಿಎಂ ಮತ್ತು ಅವರ ಕುಟುಂಬಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇಂತಹದ್ದೇ ಜಾಗ ಕೊಡಿ ಎಂದು ಸಿಎಂ ಆಗಲಿ ಅವರ ಪತ್ನಿಯಾಗಲಿ ಕೇಳಿಲ್ಲ. ಹೀಗಾಗಿ ಇದು ರಾಜಕೀಯದಿಂದ ಮಾಡಿದ್ದಾರೆ ಎಂದು ಸಿಎಂ ದೂರಿದ್ದಾರೆ. ಕೇಸ್ ನಲ್ಲಿ ಯಾವುದೇ ಎವಿಡೆನ್ಸ್ ಇಲ್ಲ ಎಂದಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ಅವರು ತನಿಖೆ ಮಾಡಿದ್ದಾರೆ. ಈ ಆರೋಪಗಳೆಲ್ಲವೂ ವಿರೋಧ ಪಕ್ಷಗಳ ರಾಜಕೀಯ ಪ್ರೇರಿತ ನಡೆ ಅಷ್ಟೇ. ಹೈಕೋರ್ಟ್ ಈಗಾಗಲೇ ಲೋಕಾಯುಕ್ತವನ್ನು ಇಂಡಿಪೆಂಡೆಂಟ್ ಬಾಡಿ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಅಧಿಕಾರಿಗಳು ಸಿಎಂ ಹೇಳಿದ್ದಂತೆ ಕೇಳುತ್ತಾರಾ…..? ಎಂದಿದ್ದಾರೆ.
ಹೀಗಾಗಿ ಲೋಕಾಯುಕ್ತ ಸ್ವತಂತ್ರ ಸಂಸ್ಥೆ, ಇದರಲ್ಲಿ ಯಾವುದೇ ಪ್ರಭಾವ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.