ಬಳ್ಳಾರಿ ರಾಜಕಾರಣ (Bellary politics) ರಂಗೇರಿದೆ. ಬಿಜೆಪಿ ಕೋರ್ ಕಮಿಟಿಯ (Bjp core committee) ಸಭೆ ನಡೆದ ನಂತರದಲ್ಲಿನ ಪಕ್ಷದ ಒಳ ಬೇಗುದಿ ಸ್ಫೋಟಗೊಂಡಿದ್ದು, ಶ್ರೀ ರಾಮುಲು V/S ಜನಾರ್ದನ ರೆಡ್ಡಿ ಮುಸುಕಿನ ಗುದ್ದಾಟ ಈಗ ಮುನ್ನಲೆಗೆ ಬಂದಿದೆ. ಈ ಬಗ್ಗೆ ಇಂದು ಮಾತನಾಡಿದ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ Janardana reddy), ಶ್ರೀ ರಾಮುಲು (Sri ramulu) ಪಕ್ಷ ಬಿಡಲಿ ಎಂದು ಯಾರೂ ಹೇಳಿಲ್ಲ. ಆದ್ರೆ ಬಹುಶಃ ಅವರಿಗೆ ಕಾಂಗ್ರೆಸ್ ನಿಂದ ಆಫರ್ ಬಂದಿರಬಹುದು. ಹೀಗಾಗಿ ಅವರು ಈ ನಿರ್ಧಾರಕ್ಕೆ ಬರಬಹುದು ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರೆಡ್ಡಿ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಕಾಂಗ್ರೆಸ್ ನಲ್ಲಿ (Congress) ಸತೀಶ್ ಜಾರಕಿಹೊಳಿ (Satish jarakiholi) ಅವರನ್ನು ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಶ್ರೀ ರಾಮುಲು ಕೂಡ ಅದೇ ಸಮುದಾಯದ ನಾಯಕ, ಹೀಗಾಗಿ ಡಿಕೆ ಶಿವಕುಮಾರ್ ಜಾರಕಿಹೊಳಿಯ ಓಟಕ್ಕೆ ಬ್ರೇಕ್ ಹಾಕಲು ರಾಮುಲು ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿರಬಹುದು ಎಂದು ಪರೋಕ್ಷವಾಗಿ ಹೇಕುವ ಮೂಲಕ ಕಿಡಿ ಹೊತ್ತಿಸಿದ್ದಾರೆ.
ಜನಾರ್ದನ ರೆಡ್ಡಿ ಅವರ ಈ ಹೇಳಿಕೆ , ಕೇವಲ ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್ ಪಾಳಯದಲ್ಲೂ ಸಂಚಲನ ಸೃಷ್ಟಿಸಿದ್ದು, ಸತೀಶ್ ಜಾರಕಿಹೊಳಿ ಮತ್ತು ಡಿಕೆ ನಡುವಿನ ತಿಕ್ಕಾಟ ಇನ್ನಷ್ಟು ತೀವ್ರಗೊಳ್ಳುವ ಸಂಭವವಿದೆ.