ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Dcm dk shivakumar) ವಿರುದ್ಧದ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ (Supreme court) ನಡೆಯಲಿದೆ.
ಸಿಬಿಐ (CBI) ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಯತ್ನಾಳ್ (Basana gowda patil) ಸಲ್ಲಿಸಿರುವ ಮೇಲ್ಮನವಿ ಕುರಿತು ನ್ಯಾ.ಸೋಮಶೇಖರ್ ನೇತೃತ್ವದಲ್ಲಿ ವಿಚಾರಣೆ ಮಾಡಿ ತೀರ್ಪು ನೀಡಿತು. ಸಿಬಿಐ ಮತ್ತು ರಾಜ್ಯದ ನಡುವಿನ ವಿವಾದವನ್ನು ಸುಪ್ರೀಂಕೋರ್ಟ್ನಲ್ಲಿಯೇ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಹೇಳಿತ್ತು.
ಈ ಪ್ರಕರಣನ್ನ ಸಿಬಿಐ ಬದಲಾಗಿ ಲೋಕಾಯುಕ್ತದಲ್ಲಿ (Lokayukta) ತನಿಖೆ ಮುಂದುವರೆಸಬಹುದು ಎಂದು ವಿಭಾಗೀಯ ಪೀಠ ಹೇಳಿ ಕೇಸ್ ಅವನ್ನು ವಜಾ ಮಾಡಿತ್ತು. ಈಗ ಆ ಪ್ರಕರಣವನ್ನ ಸುಪ್ರೀಂ ಕೋರ್ಟ್ ನಲ್ಲಿ ನ್ಯಾ.ಸೂರ್ಯಕಾಂತ್ ನೇತೃತ್ವದ ಪೀಠದಲ್ಲಿ ಇಂದು ವಿಚಾರಣೆ ನಡೆಯಲಿದೆ.