ಈ ಮುಡಾ ಕೇಸ್‌ನಲ್ಲಿ (MUDA scam) ಏನೂ ಇಲ್ಲ, ಇದರಲ್ಲಿ ನಾನೇನೂ ತಪ್ಪು ಮಾಡಿಲ್ಲ, ನ್ನ ಮೇಲೆ ಬಿಜೆಪಿಯವರು (Bjp) ಸುಳ್ಳು ಆರೋಪ ಮಾಡಿದ್ದಾರೆ ಅಂತ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ (Cm siddaramiah) ಹೇಳಿದ್ದಾರೆ.ಹೇಗಾದ್ರೂ ಮಾಡಿ ನನ್ನ ಸಿಲುಕಿಸಬೇಕೆಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ವಿರೋಧ ಪಕ್ಷಗಳು ಏನೇ ಆರೋಪ ಮಾಡ್ಲಿ ಎಲ್ಲಿಯವರೆಗೆ ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರುತ್ತೋ ಅಲ್ಲಿವರೆಗೆ ನನ್ನನ್ನು ಏನೂ ಮಾಡಲು ಆಗಲ್ಲ, ಯಾಕಂದ್ರೆ ನಾನೇನೂ ತಪ್ಪು ಮಾಡಿಲ್ಲ, ನಾನು ಮಂತ್ರಿಯಾಗಿ 40 ವರ್ಷವಾಗಿದೆ. ಇದುವರೆಗೆ ಯಾವುದೇ ಕಪ್ಪು ಚುಕ್ಕೆ ನನ್ನ ಮೇಲಿಲ್ಲ, ಹಿಂದೆಯೂ ನಾನು ತಪ್ಪು ಮಾಡಿಲ್ಲ, ಮುಂದೆಯೂ ತಪ್ಪು ಮಾಡಲ್ಲ ಎಂದಿದ್ದಾರೆ.
ಹೀಗಾಗಿ ಕುಮಾರಸ್ವಾಮಿ (Kumaraswamy), ಆರ್ ಅಶೋಕ್ (R ashok), ಯಡಿಯೂರಪ್ಪ (Yediyurappa), ವಿಜಯೇಂದ್ರ (Vijayendra) ರೀತಿಯವರು ನನ್ನನ್ನು ರಾಜಕೀಯವಾಗಿ ಮುಗಿಸ್ತೀನಿ ಅಂದುಕೊಂಡಿದ್ರೆ ಅದು ಅವರ ಮೂರ್ಖತನ ಅಂತ ಮೈತ್ರಿ ನಾಯಕರ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.