ಭಜರಂಗದಳದ ಮುಖಂಡ ಮತ್ತು ಪುಡಿರೌಡಿಗಳು ನಡುರಸ್ತೆಯಲ್ಲೇ ನಾಲ್ವರನ್ನು ಅಂಗಡಿಯಿಂದ ಹೊರಗೆಳೆದು ಹಲ್ಲೆಗೈದು ಗೂಂಡಾಗಿರಿ ನಡೆಸಿದ ಆತಂಕಕಾರಿ ಘಟನೆ ದಕ್ಷಿಣ ಕನ್ಮಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಡೀ ದಿನ ಜನಜಂಗುಳಿ ಇರುವ ಸಿಟಿ ಮದ್ಯದಲ್ಲೇ ಈ ಕೃತ್ಯ ನಡೆದಿದ್ದು, ಈಗ ಉಪ್ಪಿನಂಗಡಿಯ ಜನರು ಆತಂಕದಲ್ಲಿ ಇದ್ದಾರೆ. ಭಜರಂಗದಳದ ಮುಖಂಡ ಮತ್ತು ಲೋಕಲ್ ರೌಡಿಶೀಟರ್ ಭರತ್ ಕುಮ್ಡೇಲ್ ಮತ್ತು ಆತನ ಗ್ಯಾಂಗ್ ನಾಲ್ವರ ಮೇಲೆ ಹಲ್ಲೆಗೈದಿದ್ದಾರೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ.
ಹರೀಶ ನಾಯ್ಕ, ಸುದರ್ಶನ್ ಕುಮಾರ್, ರಮಾನಂದ ಎಂಬುವವರ ಮೇಲೆ ಭಜರಂಗದಳ ಮುಖಂಡರಾದ ಭಜರಂಗದಳದ ಕಾರ್ಯಕರ್ತರಾದ ಜಗಜೀವನ್ ರೈ, ಭವಿಷ್, ಸಂದೀಪ್ ಹಾಗೂ ಕಿಡಿಗೇಡಿ ಭರತ್ ಕುಮ್ಡೇಲ್ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಮೂಲಗಳ ಪ್ರಕಾರ ಜಾಗದ ವಿಚಾರದಲ್ಲಿ ತಕರಾರು ಇದ್ದು, ಇದೇ ವಿಚಾರವಾಗಿ ಅಂಗಡಿಗೆ ನುಗ್ಗಿ ನಾಲ್ವರನ್ನು ಹೆಳೆದು ಹಲ್ಲೆ ಮಾಡಿದ್ದಾರೆ.
ಭರತ್ ಕುಮ್ಡೇಲು ಕಲ್ಲಡ್ಕದ ಬಜರಂಗದಳ ಮುಖಂಡನಾಗಿದ್ದು, ಬಂಟ್ವಾಳದಲ್ಲಿ ಕುಖ್ಯಾತ ರೌಡಿ ಶೀಟರ್ ಆಗಿದ್ದಾನೆ. ರೌಡಿ ಶೀಟರ್ ಭರತ್ ಕುಮ್ಡೇಲ್ 2017ರಲ್ಲಿ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಈ ಹಿಂದೆ ಜೈಲಿಗೂ ಹೋಗಿ ಬಂದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಸಂತ್ರಸ್ತರು ಎಸ್ಸಿ- ಎಸ್ಟಿ ಕಾಯ್ದೆಯಡಿ ಪ್ರಕರಣ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.