ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದೆಂಬ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ. ಡಿಜೆ ಹಳ್ಳಿ -ಕೆಜೆ ಹಳ್ಳಿ ಗಲಭೆಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರೇ ನೇರ ಹೊಣೆಯಾಗಿದ್ದು, ತಮ್ಮ ಅಳಿಯನನ್ನು ರಕ್ಷಿಸಲು ಹೋಗಿ ಗಲಭೆಗೆ ಕಾರಣವಾದರು ಎಂಬ ಆಕ್ರೋಶ ಸ್ಥಳೀಯ ಮುಸ್ಲಿಂ ನೇತಾರರಲ್ಲಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿಯುತ್ತಿದ್ದಾರೆ. ಬೇರೆ ಯಾರಿಗೇ ಟಿಕೆಟ್ ನೀಡಿದರೂ ಓಕೆ, ಆದ್ರೆ, ಅಖಂಡಗೆ ಮಾತ್ರ ಟಿಕೆಟ್ ನೀಡಬಾರದೆಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಕೂಡಾ ಮಾಡಿದ್ದಾರೆ.
ಅದಾಗ್ಯೂ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಖಂಡ ಪರವಾಗಿ ಲಾಬಿ ಮಾಡುತ್ತಿದ್ದ, ಮುಸ್ಲಿಂ ಮುಖಂಡರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರ ಬಣದಲ್ಲಿರುವ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಕಾಂಗ್ರೆಸಿನ ಇನ್ನೊಂದು ಬಣ ನಡೆಸುತ್ತಿರುವ ಷಡ್ಯಂತ್ರ ಎಂಬ ಆರೋಪವೂ ಇದೆ/
2ಬಿ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಮುಸ್ಲಿಂ ಸಮುದಾಯದ ಗುರುಗಳಾದ ಮೊಹಮ್ಮದ್ ಜೈನ್ ಉಲ್ ಅಬಿದೀನ್ (ಉಪಾಧ್ಯಕ್ಷರು, ಜಮೈತ್ ಉಲೂಮ್ ಕರ್ನಾಟಕ), ಮೌಲಾನಾ ಜುಲ್ಫಿಕರ್ ಅಲಿ (ಇಮಾಮ್ ಜಾಮಿಯಾ ಬಿಲಾಲ್ ಮಸೀದಿ, ಮುಖ್ಯಸ್ಥರು) ಸೇರಿದಂತೆ ಹಲವು ಮುಖಂಡರು ಬೆಂಗಳೂರಿನ ಕ್ವೀನ್ಲ್ ರಸ್ತೆಯಲ್ಲಿರುವ ದರಸಲಂ ಹಾಲ್ನಲ್ಲಿ ಸಭೆಯನ್ನ ನಡೆಸಿದ್ದಾರೆ.

ಜೊತೆಗೆ ಬೆಂಗಳೂರಿನ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಪುಲಕೇಶಿನಗರದ ಕಾಂಗ್ರೆಸ್ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕೈ ಪಕ್ಷದಿಂದ ಟಿಕೆಟ್ ಕೊಡಬಾರದೆಂದು ಆಕ್ರೋಶವನ್ನ ಹೊರಹಾಕಿದ್ದಾರೆ.
ಡಿಜೆ ಹಳ್ಳಿ ಗಲಭೆಯಿಂದ 40 ಮಂದಿ ಮುಸ್ಲಿಂ ಯುವಕರು ಯುಎಪಿಎ ಆ್ಯಕ್ಟ್ ಅಡಿಯಲ್ಲಿ ಜೈಲಿನಲ್ಲಿ ಇದ್ದಾರೆ. ಉಳಿದ ಎಲ್ಲರ ಜೀವನ ಬೀದಿಗೆ ಬಂದಿದ್ದು, ಇನ್ನೂ ಕೋರ್ಟ್-ಕಛೇರಿ ಅಲೆಯುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಅಖಂಡ ಶ್ರೀನಿವಾಸ ಮೂರ್ತಿ. ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೊಟ್ಟರೆ, ನಾವು ಅವರನ್ನ ಸೋಲಿಸುತ್ತೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.