ವಿಧಾನಸಭೆ / ಲೋಕಸಭೆ ಚುನಾವಣೆ ಸಂದರ್ಭ ವಿವಿಧ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳ ಭರವಸೆ ಮತ್ತು ಅವುಗಳ ವಿತರಣೆ ಗಂಭಿರ ವಿಚಾರವಾಗಿದ್ದು ಇವುಗಳು ದೇಶವನ್ನ ಆರ್ಥಿಕ ಕೂಪಕ್ಕೆ ತಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಉಚಿತ ಕುಡುಗೆಗಳನ್ನು ನೀಡುವ ಬದಲಾಗಿ ಆ ಹಣವನ್ನ ಮೂಲಭೂತ ಸೌಕರ್ಯಗಳಿಗೆ ವ್ಯಯಿಸುವುದು ಉತ್ತಮ ಎಂದು ನ್ಯಾಯಾಲಯ ಹೇಳಿದೆ.
ಉಚಿತ ಕೊಡುಗೆಗಳ ಮೂಲಕ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸ್ಕತಿ ಅರ್ಜಿ ವಿಚಾರನೆ ನಡೆಸಿದ ನ್ಯಾಯಮೂರ್ತಿ ಎನ್.ವಿ.ರಮಣ ಅವರಿದ್ದ ಪೀಠವು ಆರ್ಥಿಕತೆಯಿಂದಾಗಿ ಹಣದ ನಷ್ಟವಾಗುತ್ತಿದೆ ಅದನ್ನು ಜನರ ಕಲ್ಯಾಣಕ್ಕಾಗಿ ಸಮತೋಲನಗೊಳಿಸಬೇಕು ಎಂದು ಪೀಠ ಹೇಳಿದೆ.

ಇದು ಸಮಸ್ಯೆಯಲ್ಲ ಎಂದು ಯಾರು ಹೇಳುವುದಿಲ್ಲ ಇದು ಗಂಭೀರ ಸಮಸ್ಯೆಯಾಗಿದೆ ಉಚಿತ ಕೊಡುಗೆಗಳನ್ನು ಪಡೆಯುತ್ತಿರುವವರು ಅದನ್ನು ಬಯಸುತ್ತಾರೆ. ಉಚಿತ ಕೊಡುಗೆಗಳ ವಿಚಾರವಾಗಿ ಜನರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ.
ಆದರೆ, ಆ ತೆರಿಗೆ ಹಣವನ್ನು ಅಭಿವೃದ್ದಿ ಪ್ರಕ್ರಿಯೆಗೆ ಬಳಸಬೇಕು ಆದ್ದರಿಂದ ಚುನಾವಣೆಗಳ ಸಮಯದಲ್ಲಿ ಉಚಿತ ಕೊಡುಗೆಗಳ ಭರವಸೇ ಒಂದು ಗಂಭೀರ ಸಮಸ್ಯೆಯಾಗಿದೆ. ನಾವು ಎರಡು ಕಡೆಯವರ ವಾದವನ್ನ ಸುಧೀರ್ಘವಾಗಿ ಆಲಿಸಬೇಕು ಎಂದು ಹೇಳುತ್ತಾ ನ್ಯಾಯಮೂರ್ತಿ ಎನ್.ವಿ.ರಮಣ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದ್ದಾರೆ.