ಬಿಜೆಪಿ ಒಂದಲ್ಲ ಒಂದು ರೀತಿಯ ಎಡವಟ್ಟುಗಳನ್ನ ಕರ್ನಾಟಕದಲ್ಲಿ ಈ ಹಿಂದಿನಿಂದ ಮಾಡುತ್ತಲೇ ಬರುತ್ತಿತ್ತು ಇದರ ಪರಿಣಾಮವಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾದ ಸೋಲನ್ನ ಅನುಭವಿಸಿತ್ತು..
ಆದರೆ ಈ ಸೋಲಿನಿಂದ ಬುದ್ದಿ ಕಲಿಯದ ಬಿಜೆಪಿ ಹೈಕಮಾಂಡ್ ಮಧ್ಯಪ್ರದೇಶದಲ್ಲೂ ಇಂತಹದ್ದೇ ಎಡವಟ್ಟುಗಳನ್ನ ಮಾಡುತ್ತಿದೆ. ಇದರ ಪರಿಣಾಮವಾಗಿ ದಶಕಗಳಂದ ಮಧ್ಯಪ್ರದೇಶದ ಬಿಜೆಪಿಗೆ ನಿಷ್ಠರಾಗಿದ್ದ ಹಲವು ನಾಯಕರು ಬಿಜೆಪಿ ತೊರೆಯುತ್ತಿದ್ದಾರೆ.
ಹೌದು… ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ, ದಶಕಗಳಿಂದ ಬಿಜೆಪಿಗೆ ನಿಷ್ಠರಾಗಿರುವ ಕುಟುಂಬಗಳು ಕೇಸರಿ ಪಕ್ಷದಿಂದ ನಿರಾಶೆಗೊಂಡಿರುವ ಅಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಾಜಿ ಶಾಸಕ ಗಿರಿಜಾ ಶಂಕರ್ ಶರ್ಮಾ ಶುಕ್ರವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.
ಅಂಕಿ ಅಂಶಗಳ ಪ್ರಕಾರ ಕಳೆದ ಐದು ತಿಂಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ತೊರೆದಿರುವ ನಾಲ್ಕನೇ ಬಿಜೆಪಿ ನಾಯಕ ಇವರಾಗಿದ್ದು, ನರ್ಮದಾಪುರಂ ಜಿಲ್ಲೆಯ ಪ್ರಬಲ ಬ್ರಾಹ್ಮಣ ಶರ್ಮಾ ಕುಟುಂಬದ ಇಬ್ಬರು ನಾಯಕರು ಸತತ ಏಳು ಬಾರಿ ಅಂದ್ರೆ 1990, 1993, 1998, 2013 ಮತ್ತು 2018ರ ನಡುವೆ ಹೊಶಂಗಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ದಿಗ್ವಿಜಯವನ್ನ ಸಾಧಿಸಿದ್ದು ಮಾತ್ರವಲ್ಲದೆ 33 ವರ್ಷಗಳ ಕಾಲ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಬಾವುಟವನ್ನು ಹಾರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾಲಿ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಡಾ. ಸೀತಾಸರಣ್ ಶರ್ಮಾ ಅವರು ಕೂಡ ಐದು ಬಾರಿ ಅಂದ್ರೆ, 1990, 1993, 1998, 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ
ಕೇವಲ ಇವರು ಮಾತ್ರವಲ್ಲದೇ ಇನ್ನೂ ಹಲವು ಹಿರಿಯ ನಾಯಕರುಗಳು ಬಿಜೆಪಿಯನ್ನು ತೊರೆಯುವ ಸಾಧ್ಯತೆಗಳು ಇದೀಗ ಮಧ್ಯಪ್ರದೇಶ ಬಿಜೆಪಿಯಲ್ಲಿ ದಟ್ಟವಾಗಿ ಕಾಣಿಸುತ್ತಿದೆ.
ಇದರ ನಡುವೆ ರಾಜ್ಯದಲ್ಲಿ ಎದ್ದಿರುವ ಬಿಜೆಪಿ ಆಡಳಿತ ವಿರೋಧಿ ಅಲೆ ಇದೀಗ ಮಧ್ಯಪ್ರದೇಶ ಬಿಜೆಪಿಯನ್ನು ಹಲವು ರೀತಿಯಾದ ಸಂಕಷ್ಟಕ್ಕೆ ಸಿಲುಕಿಸಿದೆ…