ಬೆಂಗಳೂರು: ಮೇ.22: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಮಲ್ಲೇಶ್ವರಂನಲ್ಲಿದ್ದ ಚಿನ್ನಾಭರಣ ಮಳಿಗೆಗೆ ನೀರು ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಮಳೆ ನೀರಲ್ಲಿ ಕೊಚ್ಚಿಹೋಗಿವೆ. ಇನ್ನು ಮಳೆ ನೀರಿನಿಂದ ಪ್ರವಾಹದಂಥ ಸ್ಥಿತಿ (flood-like situation) ಉಂಟಾಗಿ ನೀರು ಅಂಗಡಿಯೊಳಗೆ ರಭಸದಿಂದ ನುಗ್ಗಿ ತಮ್ಮ ಕಣ್ಣೆದುರೇ ಕೋಟ್ಯಾನುಗಟ್ಟಲೆ ಮೌಲ್ಯದ ಚಿನ್ನಾಭರಣಗಳು (jewelry) ಕೊಚ್ಚಿಹೋಗಿವೆ ಎಂದು ಅಂಗಡಿ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳಿದ್ದಾರೆ.



ನಗರದ ಮಲ್ಲೇಶ್ವರಂನಲ್ಲಿರುವ ನಿಹಾನ್ ಜ್ಯವೆಲರಿ (Nihaan Jewelry Shop) ಅಂಗಡಿಯ ಸ್ಥಿತಿ ಇದು. ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿ ಹೇಳುವ ಹಾಗೆ ಸುಮರಿ 200-225 ಕೋಟಿ ಮೌಲ್ಯದ ಶೇಕಡ 80ರಷ್ಟು ಆಭರಣಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಆದ್ರೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.












