6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎನ್ನುವ HDK ಹೇಳಿಕೆಗೆ ದಿನೇಶ್ ಗುಂಡೂರಾವ್ ಈ ವಾರದ ಅತ್ಯುತ್ತಮ ಜೋಕ್ ಎಂದು ಲೇವಡಿ ಮಾಡಿದ್ದಾರೆ. ನಮ್ಮ ಸರ್ಕಾರದ ಭವಿಷ್ಯದ ಚಿಂತೆ ಬಿಟ್ಟು ತಮ್ಮ ಪಕ್ಷದ ಬಗ್ಗೆ ಚಿಂತಿಸಲಿ.ಈಗಾಗ್ಲೆ ಜನರ ಮನಸ್ಸಿಂದ ಗೇಟ್ ಪಾಸ್ ಆಗಿರುವ ಪಕ್ಷದ ಬಗ್ಗೆ ಚಿಂತಿಸಲಿ.ಅಧಿಕಾರ ಇಲ್ಲದೆ ಅತೃಪ್ತ ಆತ್ಮ ಆಗಿರುವ ಎಚ್ ಡಿಕೆ ಹತಾಶೆಯಿಂದ ಸರ್ಕಾರ ಬೀಳೋ ಕನಸು ಕಾಣ್ತಿದಾರೆ.ನಾವು ಪೂರ್ಣಾವಧಿ ಸರ್ಕಾರ ನಡೆಸೋದು ನಿಶ್ಚಿತ. ಹೆಚ್‌ಡಿಕೆಗೆ ಸಿಗದ ದ್ರಾಕ್ಷಿ ಹುಳಿ ಎನ್ನುವಂತ ನರಿ ಕಥೆಯಾಗಿದೆ ಎಂದು ಸರಣಿ ಟ್ವೀಟ್ ಮುಖಾಂತರ ಲೇವಡಿ ಮಾಡಿದ್ದಾರೆ.
1
2
3
3000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ಪ್ರಾಧಿಕಾರದ ಆದೇಶದ ವಿಚಾರ
ಕಾನೂನಿನ ಹೋರಾಟ ಆದೇಶ ಒಪ್ಪುತ್ತಿಲ್ಲ.ಮತ್ತೆ ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರಕ್ಕೆ ಅರ್ಜಿ ಹಾಕುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.ನಾವು ನೀರು ಕೊಡಲ್ಲ ಅಂತ ಹೇಳುತ್ತಿಲ್ಲ.ನಮಗೂ ನೀರಿಲ್ಲ.ತಮಿಳುನಾಡಿನವರು ಕೂಡ ನಮ್ಮ ಸಹೋದರರು.ನೀರಿನ ಮಟ್ಟ ಕಡಿಮೆಯಿದೆ ಆಕ್ಟೊಬರ್ ತಿಂಗಳಿನಲ್ಲಿ ಮಳೆ ಆಗಲ್ಲ.ಆಕ್ಟೊಬರ್ ನಿಂದ ಮೇ ವರೆಗೂ ನಾವು ನೀರು ನೋಡಿಕೊಳ್ಳಬೇಕು.ಕಾನೂನಿನ ಹೋರಾಟ ಮಾಡುತ್ತಿದ್ದೇವೆ ಒಂದು ತಾರ್ಕಿಕ ಅಂತ್ಯ ಹೋಗುತ್ತೆ. ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ರು.