ಬಿಜೆಪಿಯವರು ಕಳೆದ ಒಂದು ವಾರದ ಒದರುತ್ತಿದ್ದಾರೆ, ಮೂಡ ಸೈಟ್ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ಆಗಿದೆ ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ. ಸಿಎಂ ಪತ್ನಿ ಹೆಸರು ತಂದು ಆರೋಪ ಮಾಡ್ತಿದ್ದಾರೆ
ಸರ್ವೇ ನಂಬರ್ 464 ರಲ್ಲಿ 3.16 ಎಕರೆ ಜಮೀನು ಜವರಯ್ಯ ಅನ್ನೋ ರೈತನ ಹೆಸರಿನಲ್ಲಿ ಜಮೀನು ಇರತ್ತೆ.
1992 ರಲ್ಲಿ ನೋಟಿಫೈ ಮಾಡ್ತಾರೆ, 1998 ರಲ್ಲಿ ಡೀ ನೋಟಿಫೈ ಮಾಡ್ತಾರೆ, 2005 ಇಸವಿಯಲ್ಲಿ ಜವರಯ್ಯ ಅವರ ಬಳಿಯಿಂದ ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿ ಮಾಡಿದ್ದಾರೆ, 2010 ದಾನ ಪತ್ರದ ಮೂಲಕ ಪಾರ್ವತಮ್ಮ ಅವರಿಗೆ ಕೊಟ್ಟಿದ್ದಾರೆ, 2015 ರಲ್ಲಿ ಮೂಡ ನೋಟಿಫೈ ಮಾಡದೆಯೇ ಈ ಜಾಗ ಜೊತೆಗೆ ಅಕ್ಕಪಕ್ಕದ ಜಮೀನು ಪಡೆದು ಸೈಟ್ ಹಂಚಿಕೆ ಮಾಡ್ತಾರೆ, 2017 ರಲ್ಲಿ ನಮ್ಮ ಗಮನಕ್ಕೆ ತಾರದೇ ಜಮೀನು ಪಡೆದು ಸೈಟ್ ಹಂಚಿಕೆ ಮಾಡಿದ್ದಾರೆ ಅಂತ ಮೂಡಾಕ್ಕೆ ದೂರು ಕೊಡ್ತಾರೆ.
2015 ರಲ್ಲಿ 59 ಸೈಟ್ ಮಾಡಿ ಹಂಚುತ್ತಾರೆ, 2021 ರಲ್ಲಿ ಮೂಡಾದಲ್ಲಿ ಒಂದು ತೀರ್ಮಾನಕ್ಕೆ ಬರ್ತಾರೆ, ಬಿಡಿಎ ಮಾದರಿಯಲ್ಲಿ 50:50 ನಿಯಮದ ಅಡಿ ಹಂಚುವ ತೀರ್ಮಾನ ಮಾಡುವ ನಿರ್ಣಯ ತೆಗೆದುಕೊಳ್ತಾರೆ. ಅದಾದ ಮೇಲೆ 1,49,104 ಚದರ ಅಡಿ ಬದಲು 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ.
ಎಲ್ಲಿ ಖಾಲಿ ಇದೆ ಅಲ್ಲಿ ಸೈಟ್ ಕೊಟ್ಟಿದ್ದಾರೆ, ವಿಜಯನಗರದಲ್ಲಿ 14 ಸೈಟ್ ಕೊಟ್ಟಿದ್ದಾರೆ.
ಕಾಯ್ದೆ ಬಹಳ ಸ್ಪಷ್ಟವಾಗಿದೆ ಎಲ್ಲಿ ಜಾಗ ಪಡೆಯುತ್ತಾರೆ ಅದರ ಬದಲಿಗೆ ನಿವೇಶನ ಕೊಡಬೇಕು ಅಂತ ಇದೆ. ಅದೇ ಜಾಗದಲ್ಲೇ ಕೊಡಬಹುದು ಅಥವಾ ಅಭಿವೃದ್ಧಿ ಪಡಿಸಿದ ಜಾಗದಲ್ಲೇ ಕೊಡಬಹುದು ಅಂತ ಕಾಯ್ದೆ ಇದೆ, ಪಾರ್ವತಮ್ಮ ಅವರು ಇದೇ ಏರಿಯಾದಲ್ಲಿ ಕೊಡಿ ಅಂತ ಅಪ್ಲಿಕೇಶನ್ ಹಾಕಿಕೊಂಡಿಲ್ಲ ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಮಾನ ಮರ್ಯಾದೆ ಇದ್ದರೆ ಅಕ್ರಮ ಆಗಿರುವ ದಾಖಲೆ ಇಟ್ಟು ಮಾತನಾಡಲಿ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಗುಡುಗಿದರು.