• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ ಎಂಬುದು ನಿಮಗೆ ಗೊತ್ತೆ?

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
February 27, 2023
in ಅಂಕಣ
0
ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ ಎಂಬುದು ನಿಮಗೆ ಗೊತ್ತೆ?
Share on WhatsAppShare on FacebookShare on Telegram

ಭಾರತದ ಸಂವಿಧಾನವನ್ನು ಬರೆಯಲು ಯಾವುದೇ ಮುದ್ರಣ ಸಾಧನವನ್ನು ಬಳಸದೆ ಇಡೀಯಾಗಿ ಕೈಯಲ್ಲಿ ಬರೆಯಲಾಗಿದೆ ಎನ್ನುವ ಸಂಗತಿ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅಂದಿನ ದೆಹಲಿಯ ನಿವಾಸಿ ಪ್ರೇಮ್ ಬಿಹಾರಿ ನಾರಾಯಣ ರೈಜಾಡಾ ಅವರು ಸಂವಿಧಾನದ ಈ ಬೃಹತ್ ಪುಸ್ತಕವನ್ನು ಇಟಾಲಿಕ್ ಶೈಲಿಯಲ್ಲಿ ಇಡೀಯಾಗಿ ತಮ್ಮ ಕೈಗಳಿಂದ ಬರೆದಿದ್ದಾರೆ ಎನ್ನುವುದು ನಾವು ತಿಳಿದುಕೊಳ್ಳಬೇಕಿದೆ.

ADVERTISEMENT

ಪ್ರೇಮ್ ಬಿಹಾರಿ ಅವರು ಆ ಕಾಲದ ಪ್ರಸಿದ್ಧ ಕ್ಯಾಲಿಗ್ರಫಿ ಬರಹಗಾರರಾಗಿದ್ದರು. ಅವರು ದೆಹಲಿಯ ಹೆಸರಾಂತ ಕೈಬರಹ ಸಂಶೋಧಕರ ಕುಟುಂಬದಲ್ಲಿ ೧೬ ಡಿಸೆಂಬರ್ ೧೯೦೧ ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅವರು ತಮ್ಮ ಅಜ್ಜ ರಾಮ್ ಪ್ರಸಾದ್ ಸಕ್ಸೇನಾ ಮತ್ತು ಚಿಕ್ಕಪ್ಪ ಚತುರ್ ಬಿಹಾರಿ ನಾರಾಯಣ್ ಸಕ್ಸೇನಾರ ಆಶ್ರಯದಲ್ಲಿ ಬೆಳೆದರು. ಅವರ ಅಜ್ಜ ರಾಮ್ ಪ್ರಸಾದ್ ಒಬ್ಬ ಪ್ರಸಿದ್ಧ ಕ್ಯಾಲಿಗ್ರಾಫರ್ ಆಗಿದ್ದರು. ಅವರು ಪರ್ಷಿಯನ್ ಮತ್ತು ಇಂಗ್ಲಿಷ್ ಭಾಷಾ ಪಂಡಿತರಾಗಿದ್ದು ಬ್ರಿಟೀಷ್  ಸರಕಾರದ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಪರ್ಷಿಯನ್ ಭಾಷೆಯನ್ನು ಕಲಿಸುವ ವೃತ್ತಿ ಮಾಡುತ್ತಿದ್ದರು.

ಅವರ ಅಜ್ಜ ಚಿಕ್ಕಂದಿನಿಂದಲೂ ಪ್ರೇಮ್ ಬಿಹಾರಿಗೆ ತಮ್ಮ ಸುಂದರವಾದ ಕೈಬರಹದ ಮೂಲಕ ಕ್ಯಾಲಿಗ್ರಫಿ ಕಲೆಯನ್ನು ಕಲಿಸುತ್ತಿದ್ದರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಪ್ರೇಮ್ ಬಿಹಾರಿ ತನ್ನ ಅಜ್ಜನಿಂದ ಕಲಿತ ಕ್ಯಾಲಿಗ್ರಫಿ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಕ್ರಮೇಣ ಅವರ ಹೆಸರು ಸುಂದರವಾದ ಕೈಬರಹಕ್ಕೆ ಜನಪ್ರೀಯವಾಗಹತ್ತಿತು. ನಮ್ಮ ಸಂವಿಧಾನದ ಕರಡು ಪ್ರತಿ ಮುದ್ರಣಕ್ಕೆ ಸಿದ್ಧವಾದಾಗ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು ಪ್ರೇಮ್ ಬಿಹಾರಿ ಅವರನ್ನು ಕರೆಸಿದ್ದರು. ನೆಹರು ಅವರು ಸಂವಿಧಾನವನ್ನು ಮುದ್ರಣದ ಬದಲು ಇಟಾಲಿಕ್ ಅಕ್ಷರಗಳಲ್ಲಿ ಕೈಬರಹದ ಕ್ಯಾಲಿಗ್ರಫಿಯಲ್ಲಿ ಬರೆಸಲು ಬಯಸಿದ್ದರು.

ಅದಕ್ಕಾಗಿಯೇ ಅವರು ಪ್ರೇಮ್ ಬಿಹಾರಿ ಅವರನ್ನು ಸಂಪರ್ಕಿಸಿ ಸಂವಿಧಾನವನ್ನು ಇಟಾಲಿಕ್ ಶೈಲಿಯಲ್ಲಿ ಕೈಬರಹ ಮಾಡಲು ಮನವಿ ಮಾಡಿದರು ಮತ್ತು ಅದಕ್ಕೆ ಎಷ್ಟು ಶುಲ್ಕವನ್ನು ತೆಗೆದುಕೊಳ್ಳುತ್ತೀರಿ ಎಂದು ವಿಚಾರಿಸಿದರು. ಪ್ರೇಮ್ ಬಿಹಾರಿ ನೆಹರು ಅವರಿಗೆ “ಒಂದು ಪೈಸೆಯೂ ತೆಗೆದುಕೊಳ್ಳುವುದಿಲ್ಲ ˌ ದೇವರ ದಯೆಯಿಂದ ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ ಮತ್ತು ನನ್ನ ಜೀವನದಲ್ಲಿ ನಾನು ಸಾಕಷ್ಟು ಸಂತೋಷವಾಗಿದ್ದೇನೆ” ಎಂದು ಉತ್ತರಿಸಿದರು.

ಆದರೆ ಅವರು ನೆಹರು ಅವರಲ್ಲಿ ಒಂದು ವಿನಂತಿಯನ್ನು ಮಾಡಿದರು: “ಸಂವಿಧಾನ ಕೃತಿಯ ಪ್ರತಿ ಪುಟದಲ್ಲಿ ನನ್ನ ಹೆಸರನ್ನು ಮತ್ತು ಕೊನೆಯ ಪುಟದಲ್ಲಿ ನನ್ನ ಹೆಸರಿನ ಜೊತೆಗೆ ನನ್ನ ಅಜ್ಜನ ಹೆಸರನ್ನು ಬರೆಯಲು ಅನುಮತಿಸಿ” ಎಂದು ಕೇಳಿಕೊಂಡರು. ನೆಹರು ಅವರ ಮನವಿಗೆ ಒಪ್ಪಿಗೆಯಿತ್ತರು. ಈ ಸಂವಿಧಾನವನ್ನು ಬರೆಯಲು ಅವರಿಗೆ ಒಂದು ಮನೆಯನ್ನು ನೀಡಲಾಯಿತು. ಅಲ್ಲಿಯೇ ಕುಳಿತು ಪ್ರೇಮ್‌ಜೀ ಅವರು ಇಡೀ ಸಂವಿಧಾನದ ಹಸ್ತಪ್ರತಿಯನ್ನು ಬರೆದರು.

https://twitter.com/aimim_national/status/1213079236807757826/photo/1

ಬರೆಯಲು ಪ್ರಾರಂಭಿಸುವ ಮೊದಲು, ಪ್ರೇಮ್ ಬಿಹಾರಿ ನಾರಾಯಣ್ ಅವರು ನೆಹರೂ ಅವರ ಆದೇಶದ ಮೇರೆಗೆ ಅಂದಿನ ಭಾರತದ ರಾಷ್ಟ್ರಪತಿ ಶ್ರೀ ರಾಜೇಂದ್ರ ಪ್ರಸಾದ್ ಅವರೊಂದಿಗೆ ೨೯ ನವೆಂಬರ್ ೧೯೪೯ ರಂದು ಶಾಂತಿನಿಕೇತನಕ್ಕೆ ಬಂದರು. ಅವರು ಪ್ರಸಿದ್ಧ ವರ್ಣಚಿತ್ರಕಾರ ನಂದಲಾಲ್ ಬಸು ಅವರೊಂದಿಗೆ ಚರ್ಚಿಸಿದರು ಮತ್ತು ಪ್ರೇಮ್ ಬಿಹಾರಿಯವರು ಸಂವಿಧಾನದ ಯಾವ ಭಾಗವನ್ನು ಬರೆಯಬೇಕು ಮತ್ತು ಉಳಿದ ಭಾಗವನ್ನು ನಂದಲಾಲ್ ಬಸು ಅವರು ಚಿತ್ರಗಳಿಂದ ಅಲಂಕರಿಸಬೇಕು ಎನ್ನುವ ಕುರಿತು ನಿರ್ಧರಿಸಲಾಯಿತು.

ನಂದಲಾಲ್ ಬೋಸ್ ಮತ್ತು ಶಾಂತಿನಿಕೇತನದ ಅವರ ಕೆಲವು ವಿದ್ಯಾರ್ಥಿಗಳು ನಿಷ್ಪಾಪ ಚಿತ್ರಣದಿಂದ ಸಂವಿಧಾನ ಗ್ರಂಥವನ್ನು ಅಲಂಕಸಿರಿದರು. ಮೊಹೆಂಜೋದಾರೋ ಮುದ್ರೆಗಳು, ರಾಮಾಯಣ, ಮಹಾಭಾರತ, ಗೌತಮ ಬುದ್ಧನ ಜೀವನ, ಅಶೋಕ ಚಕ್ರವರ್ತಿಯಿಂದ ಬೌದ್ಧ ಧರ್ಮದ ಪ್ರಚಾರ, ವಿಕ್ರಮಾದಿತ್ಯ, ಚಕ್ರವರ್ತಿ ಅಕ್ಬರ್ ಮತ್ತು ಮೊಘಲ್ ಸಾಮ್ರಾಜ್ಯದ ಕುರಿತ ಚಿತ್ರಗಳು ಸಂವಿಧಾನದ ಗ್ರಂಥ ಸೇರಿದವು.

ಭಾರತೀಯ ಸಂವಿಧಾನವನ್ನು ಬರೆಯಲು ಪ್ರೇಮ್ ಬಿಹಾರಿ ಅವರಿಗೆ ೪೩೨ ಪೆನ್ ಹೋಲ್ಡರ್‌ಗಳ ಅಗತ್ಯವಿತ್ತು ಮತ್ತು ಅವರು ನಿಬ್ ಸಂಖ್ಯೆ ೩೦೩ ಅನ್ನು ಬಳಸಿದರು. ನಿಬ್‌ಗಳನ್ನು ಇಂಗ್ಲೆಂಡ್ ಮತ್ತು ಜೆಕೊಸ್ಲೊವಾಕಿಯಾದಿಂದ ತರಿಸಲಾಗಿತ್ತು. ಅವರು ಇಡೀ ಸಂವಿಧಾನದ ಹಸ್ತಪ್ರತಿಯನ್ನು ಆರು ತಿಂಗಳ ಕಾಲ ಭಾರತದ ಸಂವಿಧಾನ ಭವನದ ಕೊಠಡಿಯಲ್ಲಿ ಬರೆದರು. ಸಂವಿಧಾನವನ್ನು ಬರೆಯಲು ೨೫೧ ಪುಟಗಳ ಪರ್ಚಮೆಂಟ್ ಕಾಗದವನ್ನು ಬಳಸಿದರು. ನಮ್ಮ ಸಂವಿಧಾನ ಗ್ರಂಥದ ತೂಕ ೩ ಕೆಜಿ ೬೫೦ ಗ್ರಾಂ ಆಗಿದ್ದು ಅದು ೨೨ ಅಂಗುಲ ಉದ್ದ ಮತ್ತು ೧೬ ಅಂಗುಲ ಅಗಲವಿದೆ.

ಪ್ರೇಮ್ ಬಿಹಾರಿಯವರು ಫೆಬ್ರವರಿ ೧೭, ೧೯೮೬ ರಂದು ನಿಧನರಾದರು.

(ಸಂಗ್ರಹದಿಂದ)

Tags: ಪ್ರೇಮ್ ಬಿಹಾರಿ ನಾರಾಯಣ ರೈಜಾಡಾಸಂವಿಧಾನ
Previous Post

ಧನ್ಯವಾದಗಳು ಮೋದಿ ಎಂದ ರಾಜ್ಯ ಕಾಂಗ್ರೆಸ್‌ ನಾಯಕರು: ಟ್ವೀಟ್‌ ಮೂಲಕ ಕಾಂಗ್ರೆಸ್‌ ಪಕ್ಷ ಮೋದಿಗೆ ಏನು ಹೇಳಿದ್ರು ನೋಡಿ ..!

Next Post

ಕಲಬುರಗಿ ಸಿಯುಕೆ ಆವರಣದಲ್ಲಿ ಭಾರಿ ಬೆಂಕಿ: ಸಸ್ಯ ಸಂಪತ್ತು, ಪ್ರಾಣಿ–ಪಕ್ಷಿಗಳು ಸುಟ್ಟು ಭಸ್ಮ

Related Posts

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
0

ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕರೆ “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು...

Read moreDetails

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

July 30, 2025
Next Post
ಕಲಬುರಗಿ ಸಿಯುಕೆ ಆವರಣದಲ್ಲಿ ಭಾರಿ ಬೆಂಕಿ: ಸಸ್ಯ ಸಂಪತ್ತು, ಪ್ರಾಣಿ–ಪಕ್ಷಿಗಳು ಸುಟ್ಟು ಭಸ್ಮ

ಕಲಬುರಗಿ ಸಿಯುಕೆ ಆವರಣದಲ್ಲಿ ಭಾರಿ ಬೆಂಕಿ: ಸಸ್ಯ ಸಂಪತ್ತು, ಪ್ರಾಣಿ–ಪಕ್ಷಿಗಳು ಸುಟ್ಟು ಭಸ್ಮ

Please login to join discussion

Recent News

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
Top Story

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada