• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಧನ್ಯವಾದಗಳು ಮೋದಿ ಎಂದ ರಾಜ್ಯ ಕಾಂಗ್ರೆಸ್‌ ನಾಯಕರು: ಟ್ವೀಟ್‌ ಮೂಲಕ ಕಾಂಗ್ರೆಸ್‌ ಪಕ್ಷ ಮೋದಿಗೆ ಏನು ಹೇಳಿದ್ರು ನೋಡಿ ..!

ಪ್ರತಿಧ್ವನಿ by ಪ್ರತಿಧ್ವನಿ
February 27, 2023
in Top Story, ರಾಜಕೀಯ
0
ಧನ್ಯವಾದಗಳು ಮೋದಿ ಎಂದ ರಾಜ್ಯ ಕಾಂಗ್ರೆಸ್‌ ನಾಯಕರು: ಟ್ವೀಟ್‌ ಮೂಲಕ ಕಾಂಗ್ರೆಸ್‌ ಪಕ್ಷ ಮೋದಿಗೆ ಏನು ಹೇಳಿದ್ರು ನೋಡಿ ..!
Share on WhatsAppShare on FacebookShare on Telegram

ಪ್ರಧಾನಿ ನರೇಂದ್ರ ಮೋದಿ ಇಂದು ಪ್ರವಾಸದಲ್ಲಿದ್ದಾರೆ ಶಿವಮೊಗ್ಗ ಮತ್ತು ಬೆಳಗಾವಿಗೆ ಭೇಟಿ ನೀಡಲಿರುವ ಮೋದಿ ಅವರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಇದರ ಬೆನ್ನೆಲ್ಲೇ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಮೋದಿ ಭೇಟಿ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಾಂಗ್ರೆಸ್ #ThankYouModi ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್‌ ಮಾಡಿದೆ. ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ #ThankYouModi!! ಎಂದು ವ್ಯಂಗ್ಯವಾಡಿದೆ.

 ಸರಣಿ ಟ್ವೀಟ್‌’ಗಳನ್ನು ಮಾಡುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ ಜೊತೆಗೆ ರಾಜ್ಯ ಬಿಜೆಪಿ ನಾಯಕರು ಸಹ ನಿಮ್ಮ ಅಷ್ಟೇ ಜನರಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ನಿಮ್ಮಗೆ ಹಾಗೆ ರಾಜ್ಯದ ಬಿಜೆಪಿ ನಾಯಕರಿಗೆ ಇಬ್ಬರಿಗೂ ತುಂಬಾ ಹೃದಯದ ಧನ್ಯವಾದಗಳು ಎಂದು ವಂಗ್ಯವಾಗಿ ಟ್ಟೀಟ್‌ ಮಾಡಿದೆ.

ಕರ್ನಾಟಕದ ಕೈಗಾರಿಕಾ ಕ್ರಾಂತಿಯ ಮುಕುಟಮಣಿಯಂತಿದ್ದ ಭದ್ರಾವತಿಯ VISL ಕಾರ್ಖಾನೆಯನ್ನು ಮುಚ್ಚಿ ಸಾವಿರಾರು ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟ @narendramodi ಅವರೇ, ನಿಮಗೆ ಸಾಷ್ಟಾಂಗ ನಮಸ್ಕಾರಗಳು!

"ಮೋದಿ ಹೈ ತೋ ಮುಮ್ಕಿನ್ ಹೈ" ಎಂದರೆ ಮೋದಿಯಿಂದ ಎಲ್ಲವನ್ನೂ ಮುಳುಗಿಸಲು ಸಾಧ್ಯ ಎಂಬದೇ ಅಸಲಿ ಅರ್ಥ!#ThankYouModi pic.twitter.com/Dxi1Y5H7mK

— Karnataka Congress (@INCKarnataka) February 27, 2023

ಪಿಎಸ್‌ಐನಿಂದ ಹಿಡಿದು ಪೌರ ಕಾರ್ಮಿಕರ ನೇಮಕಾತಿಯವರೆಗೂ ಪ್ರತಿ ಹುದ್ದೆಗಳನ್ನೂ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಅಮೋಘವಾದುದು!

ಅರ್ಹತೆಯ ಆಧಾರದಲ್ಲಿ ಸಿಗುತ್ತಿದ್ದ ಉದ್ಯೋಗಗಳನ್ನ ಸುಲಭವಾಗಿ ಹಣ ಕೊಟ್ಟು ಕೊಳ್ಳುವಂತ ವ್ಯವಸ್ಥೆ ನಿರ್ಮಾಣವಾಗಿದ್ದರಲ್ಲಿ ಮೋದಿಯವರ ಪಾತ್ರ ದೊಡ್ಡದಿದೆ! ಎಂದು ಹೇಳಿದೆ.

ಸರ್ವಶಕ್ತ ಮೋದಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದರೆ ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಪಕ್ಷ 40% ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ. ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ. ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಉತ್ತರವಿಲ್ಲ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ.

ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ 40 % ಸರ್ಕಾರ ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು ಎಂದು ಕಿಡಿಕಾರಿದೆ.

“ಮೋದಿ ಹೈ ತೊ ಮುಮ್ಕಿನ್ ಹೈ” ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ! #ThankYouModi ಕರ್ನಾಟಕವು ಪ್ರತಿ ವರ್ಷ ನಿರಂತರ ಪ್ರವಾಹ ಎದುರಿಸಿದಾಗ, ಜನರ ಬದುಕು ಮುಳುಗಿದಾಗ, ಅಪಾರ ಆಸ್ತಿಪಾಸ್ತಿ ಹಾನಿಯಾದಾಗ ಕರ್ನಾಟಕದತ್ತ ತಿರುಗಿಯೂ ನೋಡದ ನರೇಂದ್ರ ಮೋದಿ ಅವರೇ, ತಾವು ಕರ್ನಾಟಕಕ್ಕೆ ನಯಾಪೈಸೆ ನೆರವು ನೀಡದೆ ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದೀರಿ.ತಮ್ಮ ಈ ದ್ರೋಹಕ್ಕೆ ಧನ್ಯವಾದಗಳು ಎಂದು ಕಾಂಗ್ರೆಸ್‌ ಪಕ್ಷ ತ್ರೀವುವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಕಾಂಗ್ರೆಸ್ ಮತ್ತೊಂದು ಟ್ವೀಟ್‌’ನಲ್ಲಿ, ‘ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ 40 % ಸರ್ಕಾರ ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು. “ಮೋದಿ ಹೈ ತೊ ಮುಮ್ಕಿನ್ ಹೈ” ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ! #ThankYouModi’ ಎಂದು ಟೀಕಿಸಿದೆ.

Tags: Congress Partyನರೇಂದ್ರ ಮೋದಿಬಿಜೆಪಿ
Previous Post

ರಾಜ್ಯದ ವಿಚಾರದಲ್ಲಿ ಸುಳ್ಳು ಹೇಳಿರುವ ಪ್ರಧಾನಿ ಮೋದಿಯವರು ಜನರಲ್ಲಿ ಕ್ಷಮೆಯಾಚಿಸಬೇಕು: ಸಿದ್ದರಾಮಯ್ಯ

Next Post

ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ ಎಂಬುದು ನಿಮಗೆ ಗೊತ್ತೆ?

Related Posts

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?
Top Story

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗಿದ್ದು, ಕಾಂಗ್ರೆಸ್‌ ಪಾಳಯದಲ್ಲಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ...

Read moreDetails
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

May 26, 2026
ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

May 26, 2026
Next Post
ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ ಎಂಬುದು ನಿಮಗೆ ಗೊತ್ತೆ?

ಭಾರತದ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ ಎಂಬುದು ನಿಮಗೆ ಗೊತ್ತೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada