ಬೆಂಗಳೂರು: ರೇಣುಕಾಸ್ವಾಮಿ (Renuka Swamy) ಹತ್ಯೆ ಪ್ರಕರಣಕ್ಕೆ ಬಲವಾದ ಎವಿಡೆನ್ಸ್ ಸಿಕ್ಕಿದೆ ಎನ್ನಲಾಗುತ್ತಿದೆ. ಸದ್ಯ ಈ ಗ್ಯಾಂಗ್ ನ ಕೃತ್ಯದ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಸ್ನೇಹಿತನೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ ಎಂದು ವರದಿಯಾಗುತ್ತಿದೆ.
ಈ ಆಡಿಯೋದಲ್ಲಿ ಮಾತನಾಡಿದಂತೆ ದರ್ಶನ್ ಮತ್ತು ಗ್ಯಾಂಗ್ (Darshan Gang) ಬರೆ ಹಾಕಿ, ಕೋಳಿ ಎಸೆದಂತೆ ಎಸೆದು ಮಿನಿ ಟ್ರಕ್ ಗೆ ಗುದ್ದಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸುಮ್ಮನೆ ಒಂದು ವಾರ್ನಿಂಗ್ ಮಾಡಿ ಬಿಟ್ಟಿದ್ದರೆ ಆಗ್ತಿತ್ತು ಎಂದು ಅಧಿಕಾರಿ ಹೇಳಿದ್ದಾರೆ. ಅಲ್ಲದೇ, ಎಲ್ಲರೂ ಸೇರಿ ಹೊಡೆದಿದ್ದಾರೆ. ಕಬ್ಬಿಣ ಕಾಯಿಸಿ ಬರೆ ಹಾಕಿ, ಲಾರಿಗೆ ತಲೆ ಹೊಡೆದಿದ್ದಾರೆ. ಶೆಡ್ ನಲ್ಲಿ ಸೀಜ್ ಮಾಡಿದ ಲಾರಿ, ಬಸ್, ಆಟೋಗಳಿಗೆ ಗುದ್ದಿದ್ದಾರೆ. ಕೋಳಿ ಎಸೆದಂಗೆ ದರ್ಶನ್ ಎಸಿದಿದ್ದಾನೆ.

ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ. ಬೌನ್ಸರ್ ಗಳು ಹೊಡೆಯೋ ಏಟಿಗೆ ಚಿಕ್ಕ ಹುಡುಗ ಹೇಗೆ ತಡೆದಾನು? ಎಲ್ಲಾ ಕುಡಿದು ಬಂದು ಹೊಡಿದಿದ್ದಾರೆ. ಕೊಲೆ ತುಂಬಾ ಹೀನಾಯವಾಗಿದೆ. ಪವಿತ್ರಾ ಗೌಡಗೂ ಹೊಡೆದಿದ್ದಾನೆ. ಅವಳು ಹೋಗಿ ಆರ್.ಆರ್.ನಗರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ, ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದ್ದಾಳೆ ಎಂದು ಅಧಿಕಾರಿ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿದೆ.
ಘಟನೆ ನಡೆದ ನಂತರ ನಾಲ್ವರು ಬಂದು ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಶರಣಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ ಮೇಲೆ ಸಿಕ್ಕಾಕಿಕೊಂಡಿದ್ದಾರೆ ಎಂದು ಕೂಡ ಅಧಿಕಾರಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದರೆ ದರ್ಶನ್ ಆಂಡ್ ತಂಡ ಯಾವ ರೀತಿ ಮೃಗೀಯ ವರ್ತನೆ ತೋರಿದೆ ಎಂಬುವುದು ಗೊತ್ತಾಗುತ್ತಿದೆ. ಇದು ನಿಜವಾಗಿಯೂ ಇಡೀ ಮಾನವ ಕುಲವೇ ಛೀಮಾರಿ ಹಾಕುವಂತಹ ಘಟನೆ. ಇದೇ ರೀತಿ ಘಟನೆ ನಡೆದಿದ್ದೇ ಸತ್ಯವಾದರೆ ನಿಜಕ್ಕೂ ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.