ಬ್ಯೂಟಿ ಕಾಂಶಿಯಸ್ ಇರೋರು ತುಂಬಾ ಪ್ರಾಮುಖ್ಯತೆ ಕೊಡೊದು ಒಂದು ಸ್ಕಿನ್ ಬಗ್ಗೆ ಮತ್ತೊಂದು ಹೇರ್ ಬಗ್ಗೆ.. ಆದ್ರೆ ಇವತ್ತಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಅದನ್ನ ಪ್ರಾಪರ್ ಆಗಿ ಮೈಟೈನ್ ಮಾಡೋದಿಕ್ಕೆ ಆಗಲ್ಲಾ.. ಅದರಲ್ಲೂ ಸ್ಕಿನ್ ಮೇಲೆ ಅಲ್ಪ ಸ್ವಲ್ಪ ಕೇರ್ ಮಾಡಿದ್ರೂ ಕೂದಲು ಬಗ್ಗೆ ಹೆಚ್ಚು ಕಾಳಜಿ ವಹಿಸಲ್ಲಾ.. ಹಾಗಾಗಿ ಈ ತಲೆಹೊಟ್ಟಿನ ಸಮಸ್ಯ ಶುರುವಾಗತ್ತೆ.. ಒಂದಿಷ್ಟು ಜನಕ್ಕೆ ಈ ಸಮಸ್ಯ ಜಾಸ್ತಿ ಆದಾಗ ಏನು ಮಾಡ್ಬೇಕು ಎಂಬ ಪ್ರಶ್ನೆ ಮೂಡೋದು ಸಹಜ.. ಈ ಡ್ಯಾಂಡ್ರಫ್ ಸಮಸ್ಯೆಗೆ ಇಲ್ಲಿದೆ ಬೆಸ್ಟ್ ಹೋಮ್ ರೆಮಿಡಿ..

ನಿಂಬೆ ರಸ
ನಿಂಬೆ ಹಣ್ಣಿನ ರಸದಲ್ಲಿ ಸಿಕ್ಟ್ರಿಕ್ ಅಂಶ ಹೆಚ್ಚಿರೊದ್ರಿಂದ ಡ್ಯಾಂಡ್ರಫ್‌ನ ಶಮನಗೊಳಿಸುವಲ್ಲಿ ಉಪಯುಕ್ತ.. ಹಾಗೂ ಕೂದಲಿನ ಬೆಳವಣಿಗೆಗು ಕೂಡಾ ಸಹಕಾರಿ. .ನಿಂಬೆ ರಸವು ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿ ಇರಿಸುವ ಮೂಲಕ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ತಲೆಗೆ ಎರಡು ಬಾರಿ ನಿಂಬೆ ರಸವನ್ನ ಹಚ್ಚುವುದು ಒಳ್ಳೆಯದ.. ಸ್ನಾನಕ್ಕೆ ಹೋಗುವ ಮುನ್ನ ತಲೆಗೆ ನಿಂಬೆ ರಸವನ್ನು ಹಚ್ಚಿ, ೨೦ ನಿಮಿಷಗಳ ನಂತ್ರ ತೊಳೆಯಿರಿ..

ಮೊಟ್ಟೆಯ ಬಿಳಿಯ ಭಾಗ
ಮೊಟ್ಟೆಯಲ್ಲಿರುವ ಪ್ರೋಟೀನ್, ಬಯೋಟಿನ್ ಮತ್ತು ಸಲ್‌ಫರ್ ಅಂಶ ಹೆಚ್ಚಿರೋದ್ರಿಂದ , ಇದು ತಲೆಹೊಟ್ಟು ವಿರುದ್ಧ ಹೋರಾಡುತ್ತದೆ ಹಾಗೂ ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ನೆತ್ತಿಯಿಂದ ಅತಿಯಾದ ಜಿಡ್ಡಿನ ಮತ್ತು ಕೊಳೆಯನ್ನು ತೆಗೆದುಹಾಕಲು ಮೊಟ್ಟೆಯ ಬಿಳಿ ಸಹಾಯ ಮಾಡುತ್ತದೆ..

ಮೆಂತ್ಯ
ಮೆಂತ್ಯಯನ್ನ ಹಚ್ಚೊದ್ರಿಂದ ತಲೆಹೊಟ್ಟು ಬೇಗನೆ ಕಡಿಮೆಯಾಗುತ್ತದೆ.. ಮಾತ್ರವಲ್ಲದೆ ಸ್ಕಾಲ್ಪ್‌ನಲ್ಲಿ ಉಂಟಾಗುವ ಎಣ್ಣೆ ಅಂಶವನ್ನ ತೆಗೆದು ಹಾಕಲು ಸಹಾಯಕಾರಿ..ಇನ್ನೂ ಸಿಲ್ಕಿ ಹೇರ್ ಬೇಕಾದರವ್ರು ಮಂತ್ಯೆಯನ್ನ ಹಚ್ಚೋದು ಉತ್ತಮ.. ಹಾಗೂ ಡ್ಯಾಂಡ್ರಫ್‌ನಿಂದ ಉಂಟಾಗುವ ತುರಿಕೆಯನ್ನ ಕೂಡಾ ಕಡಿಮೆ ಮಾಡುತ್ತದೆ..

ಬಳಸುವ ವಿಧಾನ
ರಾತ್ರಿ ಮಲಗುವ ಮುನ್ನ ಮೂರು ಟೇಬಲ್ ಸ್ಪೂನ್‌ನಷ್ಟು ಮೆಂತ್ಯಯನ್ನ ಒಂದು ಲೋಟ ನೀರಿನಲ್ಲಿ ನೆನೆಸಲು ಇಡಿ, ಬೆಳಗೆದ್ದು ಆ ಮೆಂತೆಯನ್ನ ರುಬ್ಬಿ ತಲೆಗೆ ಹಚ್ಚಿ.. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ..
ಈ ಹೋಮ್ ರೆಮೀಡಿಸ್‌ನ ಫಾಲೋ ಮಾಡೊದ್ರಿಂದ ಡ್ಯಾಂಡ್ರಫ್ ಸಮಸ್ಯೆಗೆ ಗುಡ್‌ಬಾಯ್ ಹೇಳಿ..