
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನೀರಿಕ್ಷಿತ ʼಮಾರ್ಟಿನ್ʼ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಎ.ಪಿ. ಅರ್ಜುನ್ ನಿರ್ದೇಶನದ ʼಮಾರ್ಟಿನ್ʼ (Martin Movie) ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜುಗೊಂಡಿದ್ದು, ಅಕ್ಟೋಬರ್ 11ಕ್ಕೆ ತೆರೆಗೆ ಅಪ್ಪಲಿಸಲಿದೆ.ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗಲಿವೆ ಎಂಬ ಸುದ್ದಿ ಹರಿದಾಡುತ್ತಿರುವ ನಡುವೆ ‘ಮಾರ್ಟಿನ್’ ಚಿತ್ರತಂಡ ಬಿಗ್ ಅನೌನ್ಸ್ಮೆಂಟ್ ಮಾಡಿದೆ. ಈ ಚಿತ್ರವು ಆ್ಯಕ್ಷನ್-ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 5ನೇ ಚಿತ್ರವಾಗಿದ್ದು, ಉದಯ್ ಕೆ.ಮೆಹ್ತಾ ಈ ಅದ್ಧೂರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.ಸುಮಾರು ದಿನಗಳಿಂದ ಸಿ.ಜಿ ಕೆಲಸಗಳಲ್ಲಿ ನಿರತವಾಗಿದ್ದ ಮಾರ್ಟಿನ್ ಚಿತ್ರತಂಡ, ಇದೀಗ ರಿಲೀಸ್ ದಿನಾಂಕ ಘೋಷಣೆ ಮಾಡಿದೆ. ಪೊಗರು ಚಿತ್ರದ ಬಳಿಕ 3 ವರ್ಷಗಳ ನಂತರ ಧ್ರುವ ಸರ್ಜಾ ತೆರೆಗೆ ಎಂಟ್ರಿ ನೀಡುತ್ತಿದ್ದು, ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.