ಕ್ರಿಕೆಟ್(Cricket) ಅಭಿಮಾನಿಗಳ ನಿರೀಕ್ಷೆಯಂತೆ ರಾಜ್‌ಕೋಟ್‌ನ ಸೌರಾಷ್ಟ್ರ(Saurashtra) ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಇಂಗ್ಲೆಂಡ್(England) ವಿರುದ್ಧದ 3ನೇ ಟೆಸ್ಟ್‌ನಲ್ಲಿ ಯುವ ಆಟಗಾರ ಧ್ರುವ್ ಜುರೆಲ್(Dhruv Jurel) ಟೀಮ್ ಇಂಡಿಯಾ(Team India) ಪ್ಲೇಯಿಂಗ್ ಇಲವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಟೂರ್ನಿಯ ಆರಂಭಿಕ ಎರಡು ಟೆಸ್ಟ್‌ಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಕೆ.ಎಸ್.ಭರತ್(KS Bharat) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಇದರಿಂದಾಗಿ ಕೆ.ಎಸ್. ಭರತ್ ಅವರ ಆಯ್ಕೆಗೆ ಸಾಕಷ್ಟು ಆಕ್ಷೇಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೂರನೇ ಟೆಸ್ಟ್‌ಗೆ ಭಾರತದ ವಿಕೆಟ್ ಕೀಪರ್(Wicket Keeper) ಸ್ಥಾನಕ್ಕೆ ಜುರೆಲ್ ಅವರನ್ನ ಆಯ್ಕೆ ಮಾಡಲಾಗಿದೆ.

ಪಂದ್ಯದ ಆರಂಭಕ್ಕೂ ಮುನ್ನ ನಡೆದ ಕ್ಯಾಪ್ ಪ್ರಸೆಂಟೇಷನ್‌ನಲ್ಲಿ ಅನುಭವಿ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಅವರಿಂದ ತಮ್ಮ ಟೆಸ್ಟ್ ಕ್ಯಾಪ್ ಪಡೆದರು. ಜುರೆಲ್ ಅವರು ಐಪಿಎಲ್ 2023ರಲ್ಲಿ ರಾಜಸ್ಥಾನ ರಾಯಲ್ಸ್(Rajasthan Royals)ಗೆ ಫಿನಿಶರ್ ಆಗಿ ಹೊರಹೊಮ್ಮಿದರು. ಅವರು 13 ಪಂದ್ಯಗಳಲ್ಲಿ 172.73 ಸ್ಟ್ರೈಕ್ ರೇಟ್‌ನಲ್ಲಿ 152 ರನ್‌ಗಳಿಸಿದರು. ಡೆತ್ ಓವರ್‌ಗಳಲ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಮಿಂಚಿದ್ದರು.
ಜುರೆಲ್ 2021-22ರ ರಣಜಿ ಟ್ರೋಫಿ(Ranji Trophy) ಋತುವಿನಲ್ಲಿ ಯುಪಿಗೆ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು ಮತ್ತು ಅವರು ಇಲ್ಲಿಯವರೆಗೆ ಆಡಿದ 15 ಪಂದ್ಯಗಳಲ್ಲಿ, ಅವರು 46.47 ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. 19 ಇನ್ನಿಂಗ್ಸ್‌ಗಳಲ್ಲಿ ಅವರು 1 ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದರು. ಅಲ್ಲದೇ ದೇಸಿ ಕ್ರಿಕೆಟ್‌ನಲ್ಲಿ ಹಲವು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
#TeamIndia #DhruvJurel #DineshKarthik #KSBharat #TestMatch