‘ಧೂಮ್’ ಮತ್ತು ‘ಧೂಮ್ 2’ ನಂತಹ ಯಶಸ್ವಿ ಚಿತ್ರಗಳನ್ನೊ ಕೊಟ್ಟ ಬಾಲಿವುಡ್ ಸಿನಿಮಾ ನಿರ್ದೇಶಕ ಸಂಜಯ್ ಗಾಧ್ವಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಹೇಳಲಾಗುತ್ತಿದೆ. 57 ವರ್ಷದ ಸಂಜಯ್ ಗಾಧ್ವಿ ಅವರ ಸಾವಿನಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ನವೆಂಬರ್ 19 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಿಧನರಾದರು. ಸಂಜಯ್ ಬೆಳಿಗ್ಗೆ ವಾಕಿಂಗ್ ಗೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿದೆ. ಅವರನ್ನು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಧೂಮ್, ಧೂಮ್ 2, ಮೇರೆ ಯಾರ್ ಕಿ ಶಾದಿ ಹೈ, ತೇರೆ ಲಿಯೆ, ಕಿಡ್ನಾಪ್, ಅಜಬ್ ಗಜಬ್ ಲವ್ ಮತ್ತು ಆಪರೇಷನ್ ಪರಿಂಡೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.