66 ವರ್ಷದ ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್‌ನ (Isha foundation) ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ (sadhguru jaggi Vasudev) ಅವರು ನವದೆಹಲಿಯ (new delhi) ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ (Brain surgery) ಒಳಗಾಗಿದ್ದಾರೆ. ಅವರಿಗೆ ತಲೆಬುರುಡೆಯಲ್ಲಿ ರಕ್ತಸ್ರಾವ ಉಂಟಾಗಿತ್ತು. ಹೀಗಾಗಿ ಮಾರ್ಚ್ 17 ರಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸದ್ಗುರು ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ (head ache) ಬಳಲುತ್ತಿದ್ದರು. ನೋವಿನ ಹೊರತಾಗಿಯೂ, ಅವರು ಇಂದಿನ ಹಾಗೇ ಇದ್ದರೂ ಮತ್ತು ಮಾರ್ಚ್ 8 (march 8th ) ರಂದು ಮಹಾ ಶಿವರಾತ್ರಿ (Maha Shivaratri) ಕಾರ್ಯಕ್ರಮವನ್ನು ಸಹ ಅದ್ಭುತವಾಗಿ ನೆರವೇರಿಸಿದ್ದರು.ಆದ್ರೆ ಮಾರ್ಚ್ 15 ರ ಹೊತ್ತಿಗೆ ತಲೆನೋವು ಹೆಚ್ಚಾಗಿ ಕಾಡಿತ್ತು, ಹೀಗಾಗಿ ಆಸ್ಪತ್ರೆಯ ಮೊರೆಹೋಗಿದ್ದಾರೆ ಮತ್ತು ವೈದ್ಯರು ಅವರಿಗೆ ತುರ್ತು ಎಂಆರ್ಐಗೆ (MRI Scan) ಸಲಹೆ ನೀಡಿದ್ದರು.ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೂರರಿಂದ ನಾಲ್ಕು ವಾರಗಳಿಂದ ರಕ್ತಸ್ರಾವ ಉಂಟಾಗಿರೋದು ಕಂಡುಬಂದಿದೆ.

ಹೀಗಾಗಿ ಸದ್ಗುರು ತಕ್ಷಣ ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಲಾಯ್ತು. ಮಾರ್ಚ್ 17 ರಂದು,ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.