ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನಾಗಿ ಎಡಗೈ ಬ್ಯಾಟ್ಸ್‌ಮ್ಯಾನ್ ಶಿಖರ್ ಧವನ್‌ರನ್ನು ಆಡಳಿತ ಮಂಡಳಿ ನೇಮಿಸಿದೆ.
ಈ ಹಿಂದೆ ನಾಯಕನಾಗಿದ್ದ ಕನ್ನಡಿಗೆ ಮಯಾಕ್ ಅಗರ್ವಾಲ್ ತಂಡವನ್ನ ಪ್ಲೇ ಆಪ್ ಹಂತಕ್ಕೇರಿಸಲು ವಿಫಲರಾದ ಹಿನ್ನಲೆಯಲ್ಲಿ ನಾಯಕತ್ವ ಸ್ಥಾನದಿಂದ ಅವರನ್ನು ವಜಾಗೊಳಿಸಿ ಧವನ್‌ರನ್ನು ನೇಮಿಸಿದೆ.
ಇತ್ತೀಚಿಗೆ ಪಂಜಾಬ್ ಆಢಳಿತ ಮಂಡಳಿಯೂ ಕೋಚ್ ಅನಿಲ್ ಕುಂಬ್ಳೆ ಸ್ಥಾನಕ್ಕೆ ಟ್ರೆವರ್ ಬೇಲಿಸ್ರನ್ನು ನೇಮಿಸಿತ್ತು ಮತ್ತು ಸಹಾಯಕ ಕೋಚ್ ಆಗಿ ಆಸ್ಟ್ರೇಲಿಯಾ ತಂಡ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ಬ್ರಾಡ್ ಹ್ಯಾಡಿನ್ರನ್ನು ನೇಮಿಸಿ ಆದೇಶ ಹೊರಡಿಸಿತ್ತು.




