ಬೆಂಗಳೂರಿನಲ್ಲಿ (Bengaluru) ಮಾಜಿ ಸಂಸದ ಡಿಕೆ ಸುರೇಶ್ (Dk suresh) ಧರ್ಮಸ್ಥಳದಲ್ಲಿ (Dharmasthala) ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ. ಬಿಜೆಪಿ (Bjp) ನಾಯಕರು ಧರ್ಮಸ್ಥಳ ಉಳಿಸಿ ಅಂತ ಹೋಗೋದು ರಾಜಕೀಯ.ಧರ್ಮಸ್ಥಳಕ್ಕೆ ತನ್ನದೆ ಆದ ಮಾನ್ಯತೆ, ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರವಾಗಿದೆ ಎಂದಿದ್ದಾರೆ.

ಶ್ರೀ ಕ್ಷೇತ್ರದ ಮೇಲೆ ಹಲವು ಅಪಾದನೆಗಳು ಬರ್ತಿವೆ.ಹೀಗೆ ಬಂದ ದೂರುಗಳನ್ನ ಸಹಾನುಭೂತಿಯಿಂದ ನೋಡಬೇಕಾಗುತ್ತೆ. ಈ ಕಾರಣಕ್ಕೆ ಎಸ್.ಐ.ಟಿಯನ್ನ ಸರ್ಕಾರ ರಚನೆ ಮಾಡಿದೆ.ಧರ್ಮಸ್ಥಳದ ಬಗ್ಗೆ ಹೆಚ್ಚು ಕಾಳಜಿ, ನಂಬಿಕೆ ಇರೋದು ಕಾಂಗ್ರೆಸ್ ಗೆ.ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ದೊಂಬರಾಟ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸರ್ಕಾರಕ್ಕೂ ಶ್ರೀ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಇದೆ. ಹೀಗಾಗಿ ಆರೋಪ ಹೊರಿಸುವವರ ಮೇಲೆ ಕ್ರಮಕ್ಕೂ ಅವಕಾಶ ಇದೆ.ಆರೋಪಗಳಿಂದ ಮುಕ್ತವಾಗಬೇಕಾದದ್ದು ಶ್ರೀಗಳ ಕೆಲಸ, ಮಾನಸಿಕ ಹಿಂಸೆ ಅವರಿಗೂ ಇರುತ್ತೆ ಎಂದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿರುವ ಎಸ್.ಐ.ಟಿ ಏನು ವರದಿ ಕೊಡುತ್ತೆ ಗೊತ್ತಿಲ್ಲ.ಮಂಜುನಾಥನ ಕೃಪೆ ಧರ್ಮಸ್ಥಳದ ಮೇಲಿದೆ. ಧರ್ಮಸ್ಥಳ ಬಿಜೆಪಿಯ ಸ್ವಂತ ಆಸ್ತಿಯಲ್ಲ. ಹಿಂದೂ ಧರ್ಮ ಎಂಬುದು ಈ ಆರ್. ಎಸ್. ಎಸ್. ಕಟ್ಟುವ ಮುಂಚೆಯಿಂದಲೂ ಹಿಂದು ಧರ್ಮವಿದೆ. ಈ ಬಗ್ಗೆ ನ್ಯಾಯಾಲಯಕ್ಕೂ ವರದಿ ನೀಡಬೇಕಿದೆ, ನ್ಯಾಯಾಲಯ ಕೂಡ ಗಮನಿಸುತ್ತಿದೆ ಎಂದಿದ್ದಾರೆ.