
ಧರ್ಮಸ್ಥಳದ (Dharmasthala ) ಮೇಲಿನ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ (Vidhanasodha) ಜೆಡಿಎಸ್ ಶಾಸಕ ಎ .ಮಂಜು (A Manju) ಮಾತನಾಡಿದ್ದಾರೆ.ಧರ್ಮಸ್ಥಳದಲ್ಲಿ ಎಸ್.ಐ.ಟಿ ತನಿಖೆ ನಡೆಯುತ್ತಿದೆ. ಎಸ್ ಐ ಟಿ ತನಿಖೆಗೆ ಸರ್ಕಾರ ಸಂಪೂರ್ಣ ಸಹಕಾರ ಕೊಟ್ಟಿದೆ.ಆದ್ರೆ ಯಾವುದೇ ಕಾರಣಕ್ಕೂ ಧರ್ಮಸ್ಥಳದಲ್ಲಿರುವ ದೇವರಿಗಾಗಲೆ,ಅಣಪ್ಪ ಸ್ವಾಮಿಗಾಗಲಿ ಯಾವುದೇ ರೀತಿಯ ಕೆಟ್ಟದಾಗೊದಕ್ಕೆ ನಾವು, ಈ ಸಮಾಜ ಬಿಡುವುದಿಲ್ಲ ಎಂದಿದ್ದಾರೆ.

ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಸ್ಥಳ..ಅಲ್ಲಿ ಭಕ್ತಾಧಿಗಳು ನಂಬಿಕೆ ಇಟ್ಟಿರುವ ಸ್ಥಳ.ವಯ್ಯಕ್ತಿಕವಾಗಿ ಯಾವುದಾದ್ರು ತಪ್ಪುಗಳು ಆಗಿದ್ರೆ ಎಸ್.ಐ.ಟಿ ತನಿಖೆ ಮಾಡ್ತಿದೆ.ಹೀಗಾಗಿ ತನಿಖೆಯಲ್ಲಿ ಏನ್ ಬರುತ್ತೆ ಕಾದುನೋಡೊಣಾ, ಈಗಾಗಲೇ ತಂತ್ರಜ್ಞಾನ ಬಳಸಿ, ಹುಡುಕ್ತಿದ್ದಾರೆ ಹುಡುಕಲಿ ಎಂದಿದ್ದಾರೆ.

ಆದ್ರೆ ಇಲ್ಲಿಯವರೆಗೂ ನಡೆಸಿರುವ ಶೋಧಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ಅಸ್ಥಿ ಪಂಜರಗಳು ಸಿಕ್ಕಿಲ್ಲಾ ಎಂಬ ವರದಿಯಾಗಿದೆ. ಹೀಗಾಗಿ ಆತ ಅನಾಮಿಕ ದೂರುದಾರನ ತನಿಖೆ ಕೂಡ ನಡೆಯಬೇಕು ಎಂದು ನೂರಾರು ಶವಗಳನ್ನು ಹೂತಿಟ್ಟ ಆರೋಪ ಮಾಡಿದ್ದ ವ್ಯಕ್ತಿಯ ವಿರುದ್ಧ ಶಾಸಕ ಎ.ಮಂಜು ಆಗ್ರಹಿಸಿದ್ದಾರೆ.