ಬೆಂಗಳೂರು : ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿರುವ ರಾಸಲೀಲೆಯ ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಕಚೇರಿಯಲ್ಲಿಯಲ್ಲೆ ಹಲವು ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ವೈರಲ್ ಆಗುತ್ತಿವೆ.
ಖಾಕಿ ಸಮವಸ್ತ್ರದಲ್ಲೇ ಕಚೇರಿಯ ಕುರ್ಚಿ ಮೇಲೆ ಕುಳಿತು ಯುವತಿಗೆ ಮುತ್ತು ಕೊಡುವ ದೃಶ್ಯಗಳು, ಮಹಿಳೆಯನ್ನು ಅಪ್ಪಿಕೊಳ್ಳುವ ವಿಡಿಯೋ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬ ಮಾಡೆಲ್ ಸೇರಿದಂತೆ ಇತರ ಮಹಿಳೆಯರ ಜೊತೆ ಕಾಣಿಸಿಕೊಂಡ ರಾಮಚಂದ್ರ ರಾವ್ , ಕಚೇರಿ ಬರುವವರೊಂದಿಗೆ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದರಾ ಎನ್ನುವ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ವೈಫಲ್ಯಗಳನ್ನು ವಿಪಕ್ಷಗಳು ಮುಗಿಬೀಳುತ್ತಿದ್ದು, ಸಿದ್ದರಾಮಯ್ಯ ಸರ್ಕಾರವನ್ನು ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಸಂಕಷ್ಟ ತರುವ ಸಾಧ್ಯತೆ ಇದೆ. ಆದರೆ ಈ ವಿಡಿಯೋ ಹಳೆಯದ್ದು ಎನ್ನಲಾಗಿದೆ, ಆದರೆ ತನಿಖೆಯ ಬಳಿಕವೇ ಈ ವಿಡಿಯೋ ಕುರಿತು ಇನ್ನಷ್ಟು ಸತ್ಯಾಸತ್ಯತೆಗಳು ತಿಳಿದುಬರಲಿದೆ.
ಇನ್ನೂ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆಯ ಪ್ರಕರಣ ಹೊರಬೀಳುತ್ತಿದ್ದಂತೆ ಖುದ್ದು ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.












