
ದರ್ಶನ್ ಭೇಟಿ ಮಾಡಿದೆ.. ಆರಾಮವಾಗಿ ಇದ್ದಾರೆ, ಅವ್ರ ಜೊತೆ ಮಾತನಾಡಿದೆ, ಆದ್ರೆ ಕೆಲವೊಂದು ಇರುತ್ತೆ ಹೇಳಿಕೊಳ್ಳಲು ಆಗುವುದಿಲ್ಲ.
ಅಭಿಮಾನಿಗಳ ಬಗ್ಗೆ ದರ್ಶನ್ ಕಾಳಜಿ ಕಿಂಚಿತ್ತೂ ಕಡಿಮೆ ಆಗಿಲ್ಲ ಆದೇ ಹಳೆಯ ದರ್ಶನ್ ನಾವು ನೋಡಿದ್ವಿ ಯಾರೂ ಕುಗ್ಗುವಂತಹ ಪ್ರಶ್ನೆ ಇಲ್ಲ ಅದೇ ಜೋಶ್ ನಲ್ಲಿ ಇದ್ದಾರೆ. ನಾನು ಹಲವಾರು ದಿನದಿಂದ ಹೇಳಬೇಕು ಎಂದುಕೊಂಡಿದ್ದೆ ಸುಮಾರು ಕಡೆ ನಟ ಧನ್ವಿರ್ ಮಾತನಾಡುತ್ತಿಲ್ಲ ಎನ್ನುತ್ತಿದ್ದಾರೆ ಇದು ಮಾತನಾಡುವ ಸನ್ನಿವೇಶ ಅಲ್ಲ ನಾನು ವಿದ್ಯಾವಂತನಾಗಿ ನ್ಯಾಯಾಂಗ ಬಂಧನದಲ್ಲಿರುವಾಗ ಮಾತನಾಡಬಾರದು.

ಕಾನೂನು ಇದೆ ಪೊಲೀಸ್ ಇದೆ ಅವ್ರು ಕೆಲಸ ಮಾಡ್ತಾರೆ ನಾನು ಮಾತನಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ತಪ್ಪಾಗಿರಲಿ ಆಗಿಲ್ಲದೆ ಇರಲಿ ಭಗವಂತನಿಗೆ ಗೊತ್ತು
ಇಂದು ಮುಂದು ಎಂದೆಂದಿಗೂ ದರ್ಶನ್ ನಮ್ಮ ಅಣ್ಣ ಅಂತಾ ಹೇಳ್ಕೊದಿಕೆ ಹಿಂಜರಿಯುವುದಿಲ್ಲ ಎಲ್ಲಾ ಅಭಿಮಾನಿಗಳು ಆರಾಮವಾಗಿ ಇರಿ ಚಾಮುಂಡೇಶ್ವರಿ ತಾಯಿ ಒಳ್ಳೆಯದು ಮಾಡ್ತಾಳೆ.

ತಮ್ಮನಾಗಿ ಹೇಳ್ತಿದ್ದೆನೆ ನಟ ದರ್ಶನ್ ತಪ್ಪು ಮಾಡಿದ್ರೆ ಖಂಡಿತವಾಗಿ ಶಿಕ್ಷೆಯಾಗಲಿ.
ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಆರಾಮವಾಗಿ ಇರಿ ಸಿನಿಮಾ ಶೂಟಿಂಗ್ ಆರಂಭ ಮಾಡಿ ಅಂದ್ರು ಆದ್ರೆ ನಮಗೆ ಬೇಜಾರು ಇದೆ ನಾವು ಜೈಲಿನಲ್ಲಿ ನೋಡ್ತಿವಿ ಅಂತಾ ನಿರೀಕ್ಷೆ ಮಾಡಿರಲಿಲ್ಲ, ಸಿನಿಮಾ ಪ್ರಾಜೆಕ್ಟ್ ಗಳ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ನಟ ದರ್ಶನ್ ಭೇಟಿ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಬಳಿ ಧನ್ವಿರ್ ಹೇಳಿದರು…