ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿರುವ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಇಂದು ರಿಲೀಸ್ ಆಗಿದೆ. ತಮ್ಮ ಆರಾಧ್ಯದೈವ ದರ್ಶನ್ ರನ್ನ ಮತ್ತೆ ತೆರೆ ಮೇಲೆ ನೋಡಲು ಕಾತುರವಾಗಿದ್ದ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಥಿಯೇಟರ್ ಗಳಲ್ಲಿ ಕಾದು ಕುಳಿತು ಸಿನಿಮಾ ನೋಡಿದ್ದಾರೆ.

ಕಾಟೇರ ಯಶಸ್ಸಿನ ನಂತರ ದರ್ಶನ್ ಕೊಲೆ ಕೇಸ್ ನಲ್ಲಿ ಸಿಲುಕಿದ್ದರು. ಈ ಅವಧಿಯಲ್ಲಿ ನಿರ್ಮಾಣವಾಗಿರುವ ಡೆವಿಲ್ ಚಿತ್ರಕ್ಕೆ ಪ್ರೇಕ್ಷಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಹಾಗಾದ್ರೆ ಡೆವಿಲ್ ಸಿನಿಮಾದ ಕೆಲ ವಿಶೇಷಗಳು ಏನೇನು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.

400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ..
ನಟ ದರ್ಶನ್ ಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಹೀಗಾಗಿ ರಾಜ್ಯದ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಡೆವಿಲ್ ಅಪ್ಪಳಿಸಿದೆ. ಡೆವಿಲ್ ಚಿತ್ರದ ಮೊದಲ ಶೋ ಬೆಳಗ್ಗೆ 6 ರಿಂದಲೇ ಪ್ರಾರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಲಕ್ಷನ್ ನಲ್ಲೂ ಡೆವಿಲ್ ದಾಖಲೆ..
ಡಿಸೆಂಬರ್ 6ರಿಂದ ಆರಂಭವಾದ ಡೆವಿಲ್ ಮುಂಗಡ ಬುಕ್ಕಿಂಗ್ಗಳು ದಾಖಲೆ ಬರೆದಿವೆ. ಕೇವಲ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟವಾಗಿದ್ದರೆ, 30,000ಕ್ಕೂ ಹೆಚ್ಚು ಟಿಕೆಟ್ಗಳು ನೇರವಾಗಿ ಕೌಂಟರ್ನಲ್ಲಿ ಖರೀದಿಸಲ್ಪಟ್ಟು 4 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗ್ತಿದೆ. ಇನ್ನು ಬಿಡುಗಡೆಯ ಮುನ್ನವೇ ಎರಡು ಲಕ್ಷ ಟಿಕೆಟ್ಗಳು ಮಾರಾಟವಾದ ಸುದ್ದಿ ಚಿತ್ರ ತಂಡದಲ್ಲಿ ಹೊಸ ಹುರುಪು ತಂದಿದೆ. ಹಲವೆಡೆ ಶೋಗಳು ಹೌಸ್ಫುಲ್ ಆಗುತ್ತಿದ್ದು, ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸಂಗ್ರಹಿಸುವ ನಿರೀಕ್ಷೆಯಿದೆ.

ಪತಿ ಚಿತ್ರಕ್ಕೆ ಪತ್ನಿ, ಪುತ್ರ ಸಾಥ್..

ಪತಿ ದರ್ಶನ್ ಜೈಲಿಗೆ ಹೋದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಆವರ ಬೆನ್ನಿಗೆ ನಿಂತಿದ್ದಾರೆ. ಡೆವಿಲ್ ಸಿನಿಮಾ ವಿಚಾರದಲ್ಲೂ ವಿಜಯಲಕ್ಷ್ಮಿ ಸಾಕಷ್ಟು ಶ್ರಮ ಹಾಕಿದ್ದಾರೆ. ಸದ್ಯ ಇಂದು ರಿಲೀಸ್ ಆದ ಡೆವಿಲ್ ಚಿತ್ರ ನೋಡಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ನರ್ತಕಿ ಥಿಯೇಟರ್ಗೆ ಪುತ್ರ ವಿನೀಸ್, ನಟ ಧನ್ವೀರ್ ಜೊತೆ ಬಂದಿ ಫ್ಯಾನ್ಸ್ ಹುರಿದುಂಬಿಸಿದರು.

ಕಾಟೇರ ಯಶಸ್ಸಿನ ಹುರುಪಲ್ಲಿ ಡೆವಿಲ್
ದರ್ಶನ್ ರ ಕಾಟೇರ ಸಿನಿಮಾದ ದೊಡ್ಡ ಗೆಲುವಿನ ನಂತರ ದರ್ಶನ್ ಅಭಿನಯಿಸಿದ ಸಿನಿಮಾ ಡೆವಿಲ್ ಈ ಕಾರಣದಿಂದಲೂ ಅಭಿಮಾನಿಗಳಿಗೆ ಡೆವಿಲ್ ಮೇಲೆ ದೊಡ್ಡ ನಿರೀಕ್ಷೆ ಇದೆ. ಕಾಟೇರಾ ಕಾರಣದಿಂದಲೂ ಡೆವಿಲ್ ಸಿನಿಮಾ ಹೈಪ್ ಸೃಷ್ಟಿಸಿತ್ತು. ಆದರೆ ಇದರ ರಿಸಲ್ಟ್ ಒಂದು ವಾರದ ನಂತರ ಗೊತ್ತಾಗಲಿದೆ.

ಸಿನಿಮಾ ಅವಧಿ ಎಷ್ಟಿದೆ..?
ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಅವಧಿ 2 ಗಂಟೆ 49 ನಿಮಿಷ ಇದೆ. ಇತ್ತೀಚೆನ ವರ್ಷಗಳಲ್ಲಿ ಇಷ್ಟೊಂದು ಅವಧಿಯ ಕನ್ನಡದಲ್ಲಿ ಬಂದಿದ್ದು ಬಹಳ ಕಡಿಮೆ. ಬಹುತೇಕ ಸಿನಿಮಾಗಳು 2 ಗಂಟೆ 30 ನಿಮಿಷ ಇರುವುದು ಸಾಮಾನ್ಯವಾಗಿದೆ.

ಸಾರಥಿ ಸಿನಿಮಾದಂತೆ ಡೆವಿಲ್ ರಿಲೀಸ್..!
ಡೆವಿಲ್ ಸಿನಿಮಾ ಬಿಡುಗಡೆ ವೇಳೆಯೇ ದರ್ಶನ್ ಜೈಲಿನಲ್ಲಿ ಇದ್ದಾರೆ. ಈ ಮೊದಲು ಕೂಡ ಈ ರೀತಿಯ ಘಟನೆ ನಡೆದಿತ್ತು. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ದರ್ಶನ್ ಜೈಲು ಸೇರಿದ್ದರು. ಅದೇ ವೇಳೆ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ಸಾರಥಿ ಚಿತ್ರವನ್ನು ದರ್ಶನ್ ಸಹೋದರ ದಿನಕರ್ ನಿರ್ದೇಶನ ಮಾಡಿದ್ದರು. ಸಾರಥಿ ಚಿತ್ರ ದರ್ಶನ್ ಇಲ್ಲದಿದ್ದರು ದೊಡ್ಡ ಗೆಲುವು ಸಾಧಿಸಿತ್ತು.












