
ರಾಜ್ಯ ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂದಿದ್ದ ಹೆಚ್.ಡಿ ದೇವೇಗೌಡರ(HD Devegowda)ಮಾತಿಗೆ ಚಲುವರಾಯಸ್ವಾಮಿ (Chaluvarayaswamy)ತಿರುಗೇಟು ನೀಡಿದ್ದಾರೆ. ದೇವೇಗೌಡರ ಕುಟುಂಬ ಬಿಟ್ರೆ ಬೇರೆ ಯಾರು ಪ್ರಾಮಾಣಿಕರಲ್ಲ. ಈಗ ಕಾಂಗ್ರೆಸ್‌ನವರು ಮಾತ್ರ ಭ್ರಷ್ಟರು, ಬಿಜೆಪಿಯನ್ನ ಒಪ್ಪುತ್ತಾರೆ ಅನ್ಸುತ್ತೆ. ದೇವೇಗೌಡರಿಗೆ ಇನ್ನು ಹತ್ತಾರು ವರ್ಷ ಆಯಸ್ಸು ಸಿಗಲಿ. ಅವರು ನಮ್ಮನ್ನು ಹೀಗೆ ಟೀಕೆ ಮಾಡುತ್ತಿರಲಿ ಎಂದು ತಿರುಗೇಟು ನೀಡಿದ್ದಾರೆ.

ಹೆಚ್.ಡಿ ದೇವೇಗೌಡರ(HD Devegowda) ಕುಟುಂಬದ ಬಗ್ಗೆ ಮಾತನಾಡಲು ಬಹಳಷ್ಟು ವಿಚಾರಗಳಿವೆ. ಇಳೀ ವಯಸ್ಸಿನಲ್ಲಿ ಇರುವ ದೇವೇಗೌಡರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಅವರ ಜೊತೆಯಲ್ಲೇ ಇದ್ದು ರಾಜಕಾರಣ ಮಾಡಿದವನು. ನನ್ನ ಜೊತೆ ಇದ್ದಾಗ ಅವರ ಮಕ್ಕಳಿಗೆ ದೇವೇಗೌಡರು ಏನು ಬುದ್ಧಿ ಹೇಳಿದ್ರು ಅಂತಾ ಗೊತ್ತಿದೆ. ನಾನು ಹವಾಯ್ ಚಪ್ಲಿ, ಪಂಚೆ ಹಾಕ್ತಿದ್ದೆ. ನೀವು ಹಾಗೇ ಇದ್ದೀರಾ ಎಂದು ಕೇಳ್ತಿದ್ರು..? ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದಿದ್ದಾರೆ.
ಹೊರ ರಾಜ್ಯದವರ ರೀತಿ ರಾಜ್ಯ ಸರ್ಕಾರ ಹೆಚ್.ಡಿ ಕುಮಾರಸ್ವಾಮಿಯನ್ನು(HD Kumaraswamy)ಬಳಸಿಕೊಳ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿ, ಆಂಧ್ರ, ಬಿಹಾರಕ್ಕೆ ಮಾತ್ರ ಮೋದಿ ಕೊಟ್ಟಿರೋದು, ಕುಮಾರಸ್ವಾಮಿ ಅಲ್ಲ. ರಾಜ್ಯಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡಲು ಹೇಳಿ. ನಾನು ಅರ್ಜಿ ಹಿಡಿದು ಅವರ ಮನೆ ಬಳಿ ನಿಲ್ಲಲು ಆಗುತ್ತಾ..? ರಾಷ್ಟ್ರೀಯ ಹೆದ್ದಾರಿ, ಫ್ಯಾಕ್ಟರಿ ಮಾಡಲು ಮಾಧ್ಯಮಗಳ ಮೂಲಕ ಹೇಳಿದ್ದೆ. ಈ ಜಿಲ್ಲೆ, ರಾಜ್ಯದ ಜನ ಗೆಲ್ಲಿಸಿಲ್ವಾ..? ಎಂದಿದ್ದಾರೆ.

ಅಭಿವೃದ್ಧಿ ಮಾಡಿ ಅಂತ ನಾವು ಅರ್ಜಿ ಹಿಡಿದು ನಿಂತ್ಕೋಬೇಕಾ? ಎಂದಿರುವ ಚಲುವರಾಯಸ್ವಾಮಿ(Chaluvarayaswamy), ಚಂದ್ರಬಾಬು ನಾಯ್ಡು(, Chandrababu Naidu,), ನಿತೀಶ್ ಕುಮಾರ್(Nitish Kumar)ಸಹಕಾರದಿಂದ Nitish Kumarಸರ್ಕಾರ ಇದೆ. ಅವರು ಇಲ್ಲ ಅಂದರೆ ಮೋದಿ(Modi)ಪ್ರಧಾನಿಯಾಗಿ ಇರಲ್ಲ. ಹಾಗಾಗಿ ಅವರ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದ್ದಾರೆ.