
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ 100 ಕೋಟಿ ರೂ ಆಫರ್ ಮಾಡಿದ್ದರು ಎಂದು ಆರೋಪಿಸಿದ್ದ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಸಚಿವ ಚಲುವರಾಯಸ್ವಾಮಿ, ಜನರ ಗಮನ ಬೇರೆಡೆ ಸೆಳೆಯಲು ಸುಳ್ಳು ಆರೋಪ ಮಾಡಿದ್ದಾರೆ. ದೇವರಾಜೇಗೌಡರ ಆರೋಪ ನಿರಾಧಾರ. ದೇವರಾಜೇಗೌಡರ ಮಾತಿಗೆ ಮಾನ್ಯತೆ ಕೊಡುವ ಅಗತ್ಯವಿಲ್ಲ. ಪ್ರಕರಣ ಸಂಬಂಧ ಎಸ್ ಐಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ತಿಳಿಸಿದ್ದಾರೆ.

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ 100 ಕೋಟಿ ಆಫರ್ ನೀಡಿದ್ದರು ವಕೀಲ ದೇವರಾಜೇಗೌಡ ಆರೋಪಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಮಾತ್ರವಲ್ಲದೆ, ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹೆಸರನ್ನೂ ಉಲ್ಲೇಖ ಮಾಡಿದ್ದರು

ಪ್ರಿಯಾಂಕ್ ಖರ್ಗೆ ಟಾಂಗ್ ..
ನಮಗೆ ಚುನಾವಣೆ ಬಿಟ್ಟರೇ ಬೇರೆ ಕೆಲಸ ಇಲ್ವಾ. ವಿಷಯ ಡೈವೈರ್ಟ್ ಮಾಡಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಲೋಕಲ್ ಪಾಲಿಟಿಕ್ಸ್ ಬಗ್ಗೆ ಗಮನ ಹರಿಸ್ತಿದಿದ್ದಾರೆ. 100 ಕೋಟಿ ಆಫರ್ ಇತ್ತಂದು ಅಮಿತ್ ಶಾಗೆ ಹೇಳಬಹುದಿತ್ತಲ್ವಾ. ಹಣದ ಆಫರ್ ಕೊಟ್ಟಿದ್ದರೇ ಅಮಿತ್ ಶಾಗೆ ಹೇಳಿ ತನಿಖೆ ಮಾಡಿಸಬಹುದಿತ್ತಲ್ವಾ..? ಹಣ ಕೊಟ್ಟಿರುವ ಬಗ್ಗೆ ವಿಡಿಯೋ ಇದ್ರೆ ರಿಲೀಸ್ ಮಾಡಲಿ. ಪೊಲೀಸ್ ವ್ಯಾನ್ ನಲ್ಲಿ ಹೇಳಿದರೇ ಸಾಕ್ಷಿ ಬೇಕಲ್ವಾ..? ಎಂದು ಪ್ರಶ್ನಿಸಿದರು.ಪ್ರಜ್ವಲ್ ರೇವಣ್ಣ ಯಾಕೆ ವಿಡಿಯೋ ಮಾಡಿಕೊಂಡರು. ವಿಡಿಯೋ ಮೊಬೈಲ್ ನಲ್ಲಿದ್ದಾಗ ಚಾಲಕನ ಕೈಗೆ ಹೇಗೆ ಹೋಯ್ತು..? ಯಾಕೆ ವಿಡಿಯೋ ವೈರಲ್ ಮಾಡಿದ್ದರೆಂದು ಉತ್ತರ ನೀಡಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು