ಹೈದರಾಬಾದ್:ಇತ್ತೀಚೆಗೆ ತೆಲುಗು ಜನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ನಟಿ ಕಸ್ತೂರಿ ಅವರನ್ನು ಹೈದರಾಬಾದ್ನ ಗಚಿಬೌಲಿಯಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನಲ್ಲಿ ಹಿಂದೂ ಮಕ್ಕಳ್ ಕಚ್ಚಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆಕೆ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿ ತೆಲುಗು ಸಂಘಟನೆಗಳು ಮತ್ತು ಸೆಲೆಬ್ರಿಟಿಗಳಲ್ಲಿ ಕೋಪವನ್ನು ಕೆರಳಿಸಿದ್ದನ್ನು ಸ್ಮರಿಸಬಹುದಾಗಿದೆ. ಆಕೆಯ ವಿರುದ್ಧ ಚೆನ್ನೈ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ದಾಖಲಾಗಿದ್ದವು.
ಚೆನ್ನೈನ ಎಗ್ಮೋರ್ನಲ್ಲಿರುವ ತೆಲುಗು ಸಂಘಟನೆಯೊಂದು ನೀಡಿದ ದೂರಿನ ಮೇರೆಗೆ ಪೊಲೀಸರು ನಾಲ್ಕು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಯಸ್ ಗಾರ್ಡನ್ನಲ್ಲಿರುವ ಅವರ ನಿವಾಸದಲ್ಲಿ ಅಧಿಕಾರಿಗಳು ಸಮನ್ಸ್ ನೀಡಲು ಪ್ರಯತ್ನಿಸಿದಾಗ, ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ ಮತ್ತು ಕಸ್ತೂರಿ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಆಕೆಯ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಸುಳಿವಿನ ಮೇರೆಗೆ ಚೆನ್ನೈ ಪೊಲೀಸರು ಶನಿವಾರ ಸಂಜೆ ಹೈದರಾಬಾದ್ನ ಗಚಿಬೌಲಿಯಲ್ಲಿ ಆಕೆಯನ್ನು ಪತ್ತೆ ಮಾಡಿದರು. ಆಕೆಯನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಮತ್ತೆ ಚೆನ್ನೈಗೆ ಕರೆತರಲಾಯಿತು.