ತುಮಕೂರು: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢಪಟ್ಟಿದ್ದು, ಡೆಂಘೀ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಅದರಂತೆ ಪ್ರತಿ ಶುಕ್ರವಾರದಂದು ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಡಿಎಚ್ಓ ಸೂಚನೆ ನೀಡಿದ್ದಾರೆ.
ಮಾನ್ಸೂನ್ ಮಳೆಯಿಂದ ಡೆಂಘೀ ಜ್ವರದ ಪ್ರಕರಣ ಹೆಚ್ಚಳವಾಗುತ್ತಿದ್ದು, ಟಯರ್, ಚಿಪ್ಪುತೊಟ್ಟಿಗಳಲ್ಲಿ ನಿಂತ ಮಳೆನೀರಿನಿಂದ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇಡಿಸಿಜಿಪಿ ಎಂಬ ಸೊಳ್ಳೆ ಮೂಲಕವೂ ವೈರಸ್ ಹರಡುತ್ತಿದೆ. ಇಡಿಸಿಜಿಪಿ ಸೊಳ್ಳೆ ಶುದ್ಧ ನೀರಿನ ಮೂಲಕ ಉತ್ಪತ್ತಿಯಾಗುತ್ತವೆ.
ಜಿಲ್ಲೆಯಲ್ಲಿ ಡೆಂಘೀ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು, ಮಳೆನೀರು ಶೇಖರಣೆ ಮಾಡದಂತೆ ಡಿಎಚ್ಓ ಮಂಜುನಾಥ್ ಸೂಚನೆ ನೀಡಿದ್ದಾರೆ. ಅಲ್ಲದೆ, ಡೆಂಘೀ ತಡೆಗಟ್ಟಲು ಪ್ರತಿ ಶುಕ್ರವಾರ ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಸೂಚಿಸಿದ್ದಾರೆ.