ಹಾಸನ: Hassan ಜಿಲ್ಲಾ ಕಾಂಗ್ರೆಸ್ನಲ್ಲಿ ಇಲ್ಲ ಸಲ್ಲದ ಗೊಂದಲ ಮೂಡಿಸುತ್ತಿರುವ ಮಾಜಿ ಸಚಿವ ಬಿ.ಶಿವರಾಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕೆಪಿಸಿಸಿ ಮಾಜಿ ಸದಸ್ಯ ವಿನಯ್ ಗಾಂಧಿ (Vinay gandhi) ಆಗ್ರಹಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವರಾಂ ಅವರು ಕಾಂಗ್ರೆಸ್ನಿಂದ ಎಲ್ಲಾ ರೀತಿಯ ಲಾಭ, ಅಧಿಕಾರ, ಸ್ಥಾನ ಪಡೆದಿದ್ದಾರೆ. ಆದರೆ ಅವರು ಪಕ್ಷಕ್ಕೆ ಏನೂ ಮಾಡಿಲ್ಲ ಎಂದು ದೂರಿದರು.ಅವರು ಹಿಂದಿನಿಂದಲೂ ಪಕ್ಷದ ಮುಖಂಡರಿಗೆ ತೊಂದರ ಕೊಡುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಮುಂದುವರಿಸಿದ್ದಾರೆ ಎಂದು ಕಿಡಿ ಕಾರಿದರು.ಹಿಂದೆ ನಾಲ್ಕು ಬಾರಿ ಗೆದ್ದು, ಒಮ್ಮೆ ಸಚಿವರಾಗಿದ್ದರೂ, ಈಗ ಎಸ್ಸಿ, ಎಸ್ಟಿ ಎಂದು ರಾಜಕಾರಣ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಅವರು ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಸಮುದಾಯಕ್ಕೆ ಏನು ಮಾಡಿದ್ದಾರೆ, ಯಾರಿಗೆ ಅನುಕೂಲ ಮಾಡಿದ್ದಾರೆ ಹೇಳಲಿ ಎಂದು ಆಗ್ರಹಿಸಿದರು.ಈಗಾಗಲೇ ಪಕ್ಷದ ವಿರುದ್ಧ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳುವೆ ಎಂದಿರುವ ಕೆಪಿಸಿಸಿ ಅಧ್ಯಕ್ಷರು, ಶಿವರಾಂ ಅವರ ಮೇಲೂ ಕ್ರಮ ಜರುಗಿಸಬೇಕು, ಇಲ್ಲವೇ ಪಕ್ಷದಿಂದ ಉಚ್ಛಾಡಿಸಬೇಕು ಎಂದು ಒತ್ತಾಯಿಸಿದರು.ಅದಕ್ಕೂ ಮುನ್ನವೇ ಶಿವರಾಂ ಅವರಿಗೆ ಕಾಂಗ್ರೆಸ್ ಪಕ್ಷ ಇಷ್ಟ ಇಲ್ಲ ಅಂದ್ರೆ ಬೇರೆ ಪಕ್ಷ ಹೋಗಲಿ, ಅದನ್ನು ಬಿಟ್ಟು ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವುದು ಬೇಡ ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಗೆಲ್ಲುವ ವಾತಾವರಣ ಇದ್ದರೂ, ಶಿವರಾಂ ಜೆಡಿಎಸ್-ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
#Congress #Hassan #shivaram #congresskaryakartas