• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ರಾಜೀನಾಮೆಗೆ ಆಗ್ರಹ: ವಿಧಾನಸೌಧಕ್ಕೆ ಬೀಗ ಹಾಕಲು ಯತ್ನಿಸಿದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

ಪ್ರತಿಧ್ವನಿ by ಪ್ರತಿಧ್ವನಿ
September 26, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಬೆಂಗಳೂರು: ಮುಡಾ ಹಗರಣ (Muda Scam)ಸಂಬಂಧ ಹೈಕೋರ್ಟ್ ತೀರ್ಪು ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೂಗು ಜೋರಾಗಿದೆ.ಸಿಎಂ (CM)ತಕ್ಷಣ ರಾಜೀನಾಮೆ ನೀಡಬೇಕು (Should resign)ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು, (BJP and JDS leaders)ಕಾರ್ಯಕರ್ತರು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪ್ರತಿಭಟನೆ (protest)ಹದ್ದು ಮೀರದಂತೆ ತಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು.

ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah)ವಿರುದ್ಧ ಆಕ್ರೋಶ ಹೊರಹಾಕಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು.ಈ ವೇಳೆ ವಿಧಾನಸೌಧಕ್ಕೆ ಬೀಗ ಹಾಕಲು ಮುಂದಾದರು. ಆದರೆ ವಿಪಕ್ಷಗಳ ನಾಯಕರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಸಿದರು.

ಪೊಲೀಸರ ಕಣ್ಣು ತಪ್ಪಿಸಿ ಬೀಗ ಹಾಕಲು ಅರವಿಂದ್ ಬೆಲ್ಲದ್ ಯತ್ನಿಸಿದರು. ಪೊಲೀಸರ ಕಣ್ತಪ್ಪಿಸಿ ದ್ವಾರಕ್ಕೆ ಬೀಗ ಹಾಕಲು ಕಸರತ್ತು ನಡೆಸಿದರು. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮೆಗಾ ಡ್ರಾಮಾವೇ ನಡೆಯಿತು. ಆಗ ಪೊಲೀಸರೇ ಬಾಗಿಲು ಮುಚ್ಚಿ ಬೆಲ್ಲದ್ ಅವರನ್ನು ತಡೆದರು. ಕೊನೆಗೆ ಪ್ರತಿಭಟನಾಕಾರರನ್ನು ಬಸ್‌ನಲ್ಲಿ ತುಂಬಿಕೊಂಡು ಪೊಲೀಸರು ಹೊರಟರು.

ಡಕೋಟಾ ಬಸ್‌ನಲ್ಲಿ ಬಿಜೆಪಿಯವರನ್ನು ಕರೆದೊಯ್ಯುತ್ತಿದ್ದಾರೆ ಅಂತಾ ಮಾಜಿ ಸಂಸದ ಮುನಿಸ್ವಾಮಿ ಆರೋಪಿಸಿದರು. ಬಿಎಂಟಿಸಿ ಬಸ್‌ಗೆ ಬ್ರೇಕ್ ಇಲ್ಲ, ಹಾರ್ನ್ ಇಲ್ಲ, ಒಡೆದ ಗ್ಲಾಸ್ ಇದೆ. ನಮಗೆ ಏನಾದರೂ ಅವಘಡ ಆಗಲಿ ಅಂತಾನೇ ಉದ್ದೇಶಪೂರ್ವಕವಾಗಿ ಈ ಬಸ್‌ನಲ್ಲಿ ಕರ್ಕೊಂಡು ಹೋಗ್ತಿದ್ದಾರೆ. ಈ ಬಸ್‌ನ ಹಾಗೆ ಸರ್ಕಾರವೂ ಲಡಾಸ್ ಆಗಿದೆ ಎಂದು ವಾಗ್ದಳಿ ನಡೆಸಿದರು. ಮುನಿಸ್ವಾಮಿ ಆರೋಪ.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಗೋವಿಂದ ಕಾರಜೋಳ, ಛಲವಾದಿ ನಾರಾಯಣಸ್ವಾಮಿ, ಸುನೀಲ್ ಕುಮಾರ್, ರವಿಕುಮಾರ್, ಜಗ್ಗೇಶ್, ಬೆಲ್ಲದ್, ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಆರಗ ಜ್ಞಾನೇಂದ್ರ, ಹರೀಶ್ ಪೂಂಜಾ, ಗೋಪಾಲಯ್ಯ, ಮಹೇಶ್ ತೆಂಗಿನಕಾಯಿ, ಬಿ ಪಿ ಹರೀಶ್, ಸಿ.ಪಿ.ಯೋಗೇಶ್ವರ್, ಯಶ್‌ಪಾಲ್ ಸುವರ್ಣ ಸೇರಿ ಬಿಜೆಪಿ ಜೆಡಿಎಸ್‌ನ 55 ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು.

ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಗೈರಾಗಿದ್ದರು. ದೋಸ್ತಿಗಳ ಪ್ರತಿಭಟನೆ ಎನ್ನಲಾಗಿತ್ತು. ಆದರೆ ಜೆಡಿಎಸ್ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.

Tags: BJPCongress Partymuda case cm siddaramaiahOpposition BJP leader R Ashok
Previous Post

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಆರ್‌ ಅಶೋಕ್‌, ಸಿಟಿ ರವಿ ವಶಕ್ಕೆ ಪಡೆದ ಪೊಲೀಸರು

Next Post

ಏನೇ ತನಿಖೆ ನಡೆಯಲಿ ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Related Posts

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ
ರಾಜಕೀಯ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

by ಪ್ರತಿಧ್ವನಿ
April 23, 2026
0

ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನದ ಮಹತ್ವವನ್ನು ಮನದಟ್ಟು ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.“2026ರ ವಿಧಾನಸಭಾ ಚುನಾವಣೆಯಲ್ಲಿ ನಾನು ನನ್ನ ಮತವನ್ನು...

Read moreDetails
ಶಿಕ್ಷಣ ಇಲಾಖೆ ಮಾಡಿಕೊಂಡಿರುವ ಯಡವಟ್ಟು ಒಂದಾ ಎರಡಾ..?

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ:

April 23, 2026
ಬೋರಗಾಂವ‌ನಲ್ಲಿ ವಿದ್ಯುತ ಕಡಿತ್ ಸಮಸ್ಯೆಗಳ ಕುರಿತು ಗ್ರಾಮಸ್ಥರ ಆಕ್ರೋಶ

ಬೋರಗಾಂವ‌ನಲ್ಲಿ ವಿದ್ಯುತ ಕಡಿತ್ ಸಮಸ್ಯೆಗಳ ಕುರಿತು ಗ್ರಾಮಸ್ಥರ ಆಕ್ರೋಶ

April 23, 2026
ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

April 23, 2026
ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ: ನಾರಾಯಣ ಗೌಡ ಪರ ಕರವೇ ಕಾನೂನು ಹೋರಾಟ

ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ: ನಾರಾಯಣ ಗೌಡ ಪರ ಕರವೇ ಕಾನೂನು ಹೋರಾಟ

April 23, 2026
Next Post

ಏನೇ ತನಿಖೆ ನಡೆಯಲಿ ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ: ಸಚಿವ ಪ್ರಿಯಾಂಕ್ ಖರ್ಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada