• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; ಸಿಎಂ ಸಿದ್ದರಾಮಯ್ಯ ನಿಲುವು ಸ್ಪಷ್ಟಪಡಿಸಲಿ ಎಂದ ಮಾಜಿ ಸಿಎಂ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
May 30, 2024
in ರಾಜಕೀಯ
0
ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಇಲ್ಲ.. ಅದಕ್ಕೆ ಮಿನಿಸ್ಟರ್ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿದ್ದಾರೆ : ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ವಿಜಯನಗರ :(ಹೊಸಪೇಟೆ) ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.

ADVERTISEMENT

ಹೊಸಪೇಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿಯಲ್ಲಿ ಘಟನೆಗಳು ಆಗಿವೆ, ಆಗಿಲ್ಲಾ ಅಂತ ನಾನು ಹೇಳುವುದಿಲ್ಲ. ಆದರೆ, ಹಿಂದಿನವರು ಏನು ಪಾಲನೆ ಮಾಡಿದ್ದರು, ಅದನ್ನು ಈಗಿನ ಸರ್ಕಾರವೂ ಮಾಡಬೇಕು. ಆದರೆ, ಇದೊಂದು ಭಂಡ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪನವರದ್ದೇನು ಕೂಡ ತಪ್ಪಿರಲಿಲ್ಲ ಆದರೂ, ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಶ್ವರಪ್ಪ ಅವರ ವಿಚಾರದಲ್ಲಿ ವಿಪಕ್ಷನಾಯಕರಿದ್ದ ಸಿದ್ದರಾಮಯ್ಯನವರು ಮಾಡಿದ ರೋಷಾವೇಶ ಈಗ ಯಾಕೆ ಇಲ್ಲಾ. ಈಗ ಅವರೇ ಸಿಎಂ, ಅವರ ಸಚಿವ ಸಂಪುಟದ ಸಚಿವರ ವ್ಯಾಪ್ತಿಯ ವಾಲ್ಮೀಕಿ ನಿಗಮ್ ಹಣ ಲೂಟಿ ಆಗಿದೆ. 14 ಅಕೌಂಟ್ ಗಳ ಮೂಲಕ ಹಗಲು ದರೊಡೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಡೆತ್ ನೋಟ್ ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖ ಮಾಡಿದ್ದಾರೆ.

ಆದರೆ, ಇವರು ರಾಜೀನಾಮೆ ತೆಗೆದುಕೊಳ್ಳುವ ನೈತಿಕತೆ ಇಲ್ಲಾ. ಇದೊಂದು ಭ್ರಷ್ಟಾಚಾರ ಕೂಟದ ಸರ್ಕಾರ ಎಂದು ಆರೋಪಿಸಿದರು. ಈ ಪ್ರಕರಣಕ್ಕೂ, ಈಶ್ವರಪ್ಪನವರ ಪ್ರಕರಣಕ್ಕೂ ಹೊಂದಾಣಿಕೆ ಮಾಡುತ್ತಾರೆ, ನಾಚಿಕೆಯಾಗಬೇಕು ಇವರಿಗೆ. ಬಹುಕೋಟಿ ಹಗರಣ ಇದು, ಒಂದೇ ದಿನದಲ್ಲಿ 14 ಅಕೌಂಟ್ ಗೆ ಮಾಯ ಆಗುತ್ತದೆ. ಅಂದರೆ ಸಂಶಯಾಸ್ಪದ ಅಕೌಂಟ್ ಗಳಿಗೆ ಹೋಗಿದೆ. ಇದು ಸಿಬಿಐ ಗೆ ಹೋಗುವಂತಹ ಮುಖ್ಯವಾದ ಕೇಸ್. ಒಂದು ಬ್ಯಾಂಕ್ ಮುಖಾಂತರ ಬೇರೆ ರಾಜ್ಯಕ್ಕೆ ಹಣ ಹೋಗಿದೆ. 10 ಕೋಟಿಗೆ ಹೆಚ್ಚು ಹಗರಣ ಅವ್ಯವಹಾರ ಆಗಿದ್ದರೆ,, ಅದು ಸಿಬಿಐ ತನಿಖೆಗೆ ಹೋಗಬೇಕು ಅಂತ ಇದೆ. ಆದರೆ, ಇವರು ಯಾಕೆ ಸಿಬಿಐಗೆ ಕೊಡುತ್ತಿಲ್ಲ,, ಸಿಒಡಿ ತನಿಖೆ ಮಾಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸಿಬಿಐ ತನಿಖೆಯಾಗಬೇಕು
ಚುನಾವಣೆ ಸಮಯದಲ್ಲಿ ಹೈದ್ರಾಬಾದ್ ನ ಒಂದು ಸಹಕಾರಿ ಬ್ಯಾಂಕ್ ಗೆ ಹಣ ವರ್ಗಾವಣೆ ಆಗುತ್ತದೆ ಅಂದರೆ, ರಾಜಕೀಯದಿಂದ ಚುನಾವಣೆಗಾಗಿ ನಡೆದಿರುವ ದರೋಡೆ ಪ್ರಕರಣ ಇದು. ಸರ್ಕಾರ ಏನೇ ಸಮಾಜಾಯಿಸಿ ಕೊಟ್ಟರೂ ಕೂಡ, ಡಿಜಿಟಲ್ ಟ್ರಾಕ್, ಡಿಜಿಟಲ್ ಎವಿಡೆನ್ಸ್ ಇರುವ ಕಾರಣ ಸಿಒಡಿಯಿಂದ ತನಿಖೆಯಾಗುವ ಪ್ರಕರಣ ಅಲ್ಲ. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು, ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಹಣ ವಾಪಾಸ್ ಬರಬೇಕು. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಹಣ ವಾಪಾಸ್ ತರಬಹುದು, ಚುನಾವಣೆಗೆ ಬಳಕೆಯಾಗಿದ್ರೆ ಏನು ಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಮನಿ ಟ್ರೈಲ್ ಫಾಲೋ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಎಸ್ ಸಿ, ಎಸ್ ಟಿ ಸಮಾಜಕ್ಕೆ ಓಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡುವುದು ಬಿಟ್ಟರೆ ಬೇರೆನೂ ಪ್ರಯೋಜನವಿಲ್ಲ. ಎಸ್ಸಿ, ಎಸ್ಟಿ ಸಮುದಾಯದವರು ಮೀಸಲಾತಿ ಹೋರಾಟ ಮಾಡಿದ್ದರೂ ಹೆಚ್ಚಳ ಮಾಡಲಿಲ್ಲಾ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವು. ಇವರು ಬಂದ ಮೇಲೆ ಎಸ್ಸಿಪಿ ಟಿಎಸ್ಪಿ ಹಣ ಕಡಿತವಾಗಿದೆ. ಎಸ್ಸಿ ಎಸ್ಟಿ ಜನಾಂಗಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕಾನೂನು ಎಲ್ಲರಿಗೂ ಒಂದೆ
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಎಸ್ ಐಟಿ ತನಿಖೆಯಾಗುತ್ತಿದೆ, ಪ್ರಕರಣ ತನಿಖೆ ಹಂತದಲ್ಲಿದೆ. ಅಪರಾಧ ಮಾಡಿದವರು, ಶೋಷಣೆ ಮಾಡಿದವರು, ಅದನ್ನು ಪ್ರಚಾರ ಮಾಡಿದವರು ಎಲ್ಲಾ ವಿಚಾರದಲ್ಲಿ ಕಾನೂನು ಇದೆ ತನಿಖೆ ನಡೆಯುತ್ತಿದೆ ಕಾನೂನು ಎಲ್ಲರಿಗೂ ಒಂದೇ ಎಂದರು.

ಕಾನೂನು ಸುವ್ಯವಸ್ಥೆ ಹಾಳಾಗಿದೆ
ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ. ನಮ್ಮ ಮಕ್ಕಳು ಶಾಲೆ, ಕಾಲೇಜ್ ಗೆ ಹೋದರೆ ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಅನ್ನುವ ನಂಬಿಕೆ ಇಲ್ಲಾ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲಾ. ರಾಜ್ಯದಲ್ಲಿ ಸಾಮೂಹಿಕ ಕೊಲೆಗಳು ಆಗುತ್ತಿವೆ. ಒಂದೇ ಸಮಯಕ್ಕೆ ಮೂರು ನಾಲ್ಕು ಜನರ ಕೊಲೆ ಆಗುತ್ತಿವೆ. ಸಮಾಜಘಾತುಕರಿಗೆ ಹೆದರಿಕೆ ಇಲ್ಲಾ, ಅವರಿಗೆ ಪೊಲೀಸ್ ಠಾಣೆಗಳಲ್ಲಿ ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಆ ಕಾರಣಕ್ಕೆ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಸಮಾಜಘಾತುಕ ಶಕ್ತಿಗಳಿಗೆ ಎಲ್ಲಿಯವರೆಗೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಕೃತ್ಯ ತಪ್ಪುವುದಿಲ್ಲ. ಸಮಾಜಘಾತುಕರಿಗೆ ಭಯ ಹುಟ್ಟಿಸಬೇಕಿದೆ, ಇಲಾಖೆಯ ಸಡಿಲತನ ನಿಯಂತ್ರಣ ಆಗಬೇಕು. ರಾಜ್ಯ ಸರ್ಕಾರವೇ ಇದಕ್ಕೆ ಹೋಣೆ, ಅವರನ್ನ ನಿಯಂತ್ರಣ ಮಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ರಾಜ್ಯಕ್ಕೆ ಬರುವ ಬಂಡವಾಳ ವಾಪಾಸ್ ಹೋಗುತ್ತದೆ ಎಂದರು.

ಬೇಜವಾಬ್ದಾರಿ ಹೇಳಿಕೆ
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟಕಾ, ಟಕ್ ಹಣದ ಆಸೆಗೆ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೇಜವಬ್ದಾರಿಯ ಹೇಳಿಕೆಗಳಿಂದ ಈ ರೀತಿಯಲ್ಲಿ ಆಗುತ್ತದೆ. ಏನು ಹೇಳಬೇಕೋ, ಬೇಡವೋ ಅನ್ನುವುದು ಯೋಚಿಸಿ ಮಾತನಾಡಬೇಕು ಎಂದು ಹೇಳಿದರು.

Tags: Basavaraj BommaiNagendraresignsiddaramaiah
Previous Post

DK Shivakumar: ಇಂದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮನ ಡಿಕೆಶಿ ಸ್ಫೋಟಕ ಮಾಹಿತಿ

Next Post

LH 764 ಫೈಟ್‌ ನ Seat no. 8G ಯಲ್ಲಿ ಕುಳಿತಿರುವ ಪ್ರಜ್ವಲ್ ರೇವಣ್ಣ ! 

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
0

https://youtube.com/live/zK_8kusfh_Q

Read moreDetails

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025

CM Siddaramaiah: ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ..!!

July 12, 2025
Next Post
ಪ್ರಜ್ವಲ್​ ರೇವಣ್ಣ ಬಾರದೇ ಇರಲು ಇರುವ ಕಾರಣಗಳೇನು..?

LH 764 ಫೈಟ್‌ ನ Seat no. 8G ಯಲ್ಲಿ ಕುಳಿತಿರುವ ಪ್ರಜ್ವಲ್ ರೇವಣ್ಣ ! 

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada