ದೇಶದಾದ್ಯಂತ ಕರೋನಾ ಎಂಬ ಮಹಾಮಾರಿಯಿಂದ ಬೇಸತ್ತ ಜನರು ನಿಟ್ಟುಸಿರು ಬಿಡುವ ಹೊತ್ತಿಗೆ ರಾಜ್ಯದಲ್ಲಿ ಮತ್ತೆ ಕರೋನಾ ರೂಪಾಂತರಿ AY.4.2 ಎಂಬ ಹೊಸ ವೈರೆಸ್ ಪತ್ತೆಯಾಗಿದೆ.
ರಾಜ್ಯದಲ್ಲಿ ಏಳು ಮಂದಿಯಲ್ಲಿ AY.4.2 ಕಾಣಿಸಿಕೊಂಡಿದ್ದು, ಬೆಂಗಳೂರಿನಲ್ಲಿಯೇ ಮೂರು ಜನರಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರೂಪಾಂತರಿ ಕರೋನಾ ಡೆಲ್ಟಾಗಿಂತ ಅತೀ ವೇಗವಾಗಿ ಹರಡುತ್ತಿದೆ.
ಕರೋನಾ ಎಂಬ ಮಹಾಮಾರಿಯಿಂದ ದೇಶದ ಪರಿಸ್ಥಿತಿಯು ಅಧೋಗತಿಯಾಗಿದ್ದು, ವರ್ಷಗಳಿಂದಲೇ ಜನರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಪುನಃ ಚೇತರಿಸಿಕೊಳ್ಳಲು ಸಂದರ್ಭದಲ್ಲಿಯೇ ಹೊಸ ರೂಪಾಂತರಿ ವೈರೆಸ್ ಜನರ ಜೀವ ಹಿಂಡಲು ತಯಾರಾಗಿರುವುದು ರಾಜ್ಯದ ಜನರಿಗೆ ಭಯ ಶುರುವಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ , ರಾಜ್ಯದಲ್ಲಿ ಮೂರನೇ ಅಲೆ ಬರುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಪತ್ತೆಯಾದ AY.4.2 ನಿಂದ ಯಾರೂ ಮೃತಪಟ್ಟಿಲ್ಲ ಎಂದಿದ್ದಾರೆ.
ಬ್ರಿಟನ್, ಯೂರೋಪ್, ರಷ್ಯಾ, ಅಮೆರಿಕದಲ್ಲಿ ‘AY.4.2 ರೂಪಾಂತರಿಯಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಭಾರತದಲ್ಲಿಯೂ ಕೋವಿಡ್-19 ಜಿನೋಮಿಕ್ ಕಣ್ಗಾವಲು ಯೋಜನೆ ಹೈ ಅಲರ್ಟ್ ನಲ್ಲಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿಕೊಂಡು ಈ ಮೂಲಕ ಎವೈ 4.2 ನಿಂದ ಬರುವ ಸೋಂಕುಗಳ ಪತ್ತೆ ಸಾಧ್ಯತೆಯನ್ನು ತಪ್ಪಿಸುವುದಿಲ್ಲ ಇದರಿಂದ ಸೋಂಕಿತರಾದವರನ್ನು ತ್ವರಿತವಾಗಿ ಗುರುತಿಸಲಾಗುತ್ತದೆ ಎಂದು ಐಎನ್ ಎಸ್ಎ ಸಿಒಜಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಷ್ಯಾದಲ್ಲಿ 37 ಸಾವಿರಕ್ಕೂ ಹೆಚ್ಚು ‘AY.4.2 ‘ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ನವೆಂಬರ್ 7ರವರೆಗೆ ಕಚೇರಿಗಳಿಗೆ ತೆರಳದಂತೆ ಸೂಚನೆ ನವೆಂಬರ್ 7ರ ತನಕ ಕೆಲಸಕ್ಕೆ ಹೋಗದಂತೆ ಆದೇಶ ಹೊರಡಿಸಲಾಗಿದೆ.
ಡೆಲ್ಟಾದ ಹೊಸ ಪ್ರಭೇದ AY.4.2 ವೈರಸ್
AY.4.2 ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಗಣನೀಯವಾಗಿ ಹೆಚ್ಚು ಹರಡುತ್ತಿದ್ದು, AY.4.2 ವೈರಸ್ ಡೆಲ್ಟಾದಿಂದ ಉಂಟಾಗಿರುವ ರೂಪಾಂತರಿ ತಳಿಯಾಗಿದ್ದು, ಇದರ ಹರಡುವಿಕೆ ಶೇ 6 ರಷ್ಟಿದೆ ಎಂದು ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ‘ಡೆಲ್ಟಾ ಪ್ರಧಾನ ರೂಪಾಂತರವಾಗಿದೆ . AY.4.2 ಎಂದು ಹೊಸದಾಗಿ ಗೊತ್ತುಪಡಿಸಿದ ಡೆಲ್ಟಾ ಉಪ ವಂಶವು ಇಂಗ್ಲೆಂಡಿನಲ್ಲಿ ವಿಸ್ತರಿಸುತ್ತಿರುವುದನ್ನು ಗುರುತಿಸಲಾಗಿದೆ ಎಂದು ವರದಿ ಹೇಳಿದೆ.
ಬ್ರಿಟನ್ ನಲ್ಲಿ AY.4.2 ರೂಪಾಂತರಿಯನ್ನು “ವೇರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್” ಎಂದು ಘೋಷಿಸಲಾಗಿದೆ. . ಈಗಾಗಲೇ, 68,000 ಸ್ಯಾಂಪಲ್ ಗಳನ್ನು ಕೋವಿಡ್-19 ಸೋಂಕಿತರಿಂದ ಸಂಗ್ರಹಿಸಲಾಗಿದ್ದು, ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಟ್ಟಿದೆ. ಕಳೆದ ವಾರ ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿ ಡೆಲ್ಟಾ ರೂಪಾಂತರಿಯ ಸಬ್ ಟೈಪ್ ಕೊರೋನಾ ವೈರಾಣು ದೇಶದಲ್ಲಿ ಹರಡುತ್ತಿರುವುದನ್ನು ಘೋಷಿಸಿತ್ತು.

ಏನಿದು ಜಿನೋಟಿಕ್ ಸೀಕ್ವೆನ್ಸಿಸ್?
ಎರಡು ಅಥವಾ ಮೂರು ಬಾರಿ ಕರೋನಾ ಕಂಡುಬಂದ ವ್ಯಕ್ತಿಗಳನ್ನು ರಕ್ತಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವ ಪ್ರಕ್ರೀಯೆಯನ್ನು ಜಿನೋಟಿಕ್ ಸೀಕ್ವೆನ್ಸಿಸ್ ಪರೀಕ್ಷೆ ಎಂದು ಕರೆಯಲಾಗುತ್ತದೆ.
ಕರೊನಾ ಬಿಕ್ಕಟ್ಟಿನ ಕ್ರಮಗಳ ಕುರಿತು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡುವ ತಾಂತ್ರಿಕ ಸಲಹಾ ಸಮಿತಿಯು ಈ ವರ್ಷ ಜೂನ್ ನಲ್ಲಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್ ನ ವೈರಾಲಜಿಯ ಮಾಜಿ ಪ್ರಾಧ್ಯಾಪಕ ಸೇರಿದಂತೆ ಎಂಟು ಸದಸ್ಯರ ಜೀನೋಮಿಕ್ ಸರ್ವೇಲೆನ್ಸ್ ಕಮಿಟಿಯನ್ನು ರಚನೆ ಮಾಡಿತ್ತು. ಇಲ್ಲಿ ಕೊರೊನಾ ಪೀಡಿತ ವ್ಯಕ್ತಿಗಳ ಮಾದರಿಗಳಲ್ಲಿ(ಸ್ಯಾಂಪಲ್) ಜೀನ್ ಅನುಕ್ರಮಗಳನ್ನು ಅಧ್ಯಯನ ಮಾಡಲು ಆದೇಶಿಸಲಾಗಿತ್ತು. ಇದರಿಂದ ಕೊರೋನಾ ರೋಗವನ್ನು ಪತ್ತೆಹಚ್ಚಲಾಗುತ್ತದೆ.