ದೆಹಲಿಯ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಗೆ ದೇಶಾದ್ಯಂತ ವಿರೋಧಪಕ್ಷಗಳು ವ್ಯಾಪಕವಾದ ಟೀಕೆಗಳನ್ನ ವ್ಯಕ್ತಪಡಿಸಿದ್ವು, ಆದರೆ ಈ ಟೀಕೆಗಳಿಗೆ ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಹೀಗಾಗಿ ಸಂಸತ್ತಿನಲ್ಲಿ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಬೆಂಬಲವನ್ನು ನೀಡುವಂತೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೆಲವೊಂದು ಪ್ರಮುಖ ವಿರೋಧ ಪಕ್ಷಗಳ ಬೆಂಬಲವನ್ನ ಕೇಳಿದ್ರು ಆದ್ರೆ ಕಾಂಗ್ರೆಸ್ನ ಬಳಿ ಅಧಿಕೃತವಾಗಿ ಯಾವುದೇ ಬೆಂಬಲವನ್ನ ಕೇಳಿರಲಿಲ್ಲ
ಇನ್ನು ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ನ ಬಳಿ ಬೆಂಬಲವನ್ನ ಕೇಳುವ ಸಾಧ್ಯತೆ ಇದೆ ಮತ್ತು ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನುವ ವಿಚಾರ ದೆಹಲಿ ಕಾಂಗ್ರೆಸ್ ನಾಯಕರಿಗೆ ತಿಳಿಯುತ್ತಿದ್ದಂತೆ ದೆಹಲಿಯ ಕಾಂಗ್ರೆಸ್ ನಾಯಕರು ಆಕ್ರೋಶವನ್ನ ವ್ಯಕ್ತಪಡಿಸಿದ್ರು. ಇನ್ನು ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ನ ಕೆಲ ಹಿರಿಯ ನಾಯಕತರೊಂದಿಗೆ ಅರವಿಂದ್ ಕೇಜ್ರಿವಾಲ್ ಮಾತನಾಡಿದರು ಎನ್ನಲಾಗಿತ್ತು, ಇದಕ್ಕೆ ಪೂರಕ ಎನ್ನುವಂತೆ ಈ ಬೆಂಬಲ ವಿಚಾರದಲ್ಲಿ ಹಿರಿಯ ನಾಯಕರು ಒಪ್ಪಿಗೆಯನ್ನು ಸೂಚಿಸುವ ರೀತಿಯಲ್ಲಿ ಮಾತನಾಡಿದರು,
ಆದರೆ ದೆಹಲಿ ಕಾಂಗ್ರೆಸ್ ಆಪ್ಗೆ ನೀಡುವ ಬೆಂಬಲದ ನಿರ್ಧಾರವನ್ನೇ ವಿರೋಧಿಸಿತ್ತು. ಇಷ್ಟೇ ಅಲ್ಲ ಭ್ರಷ್ಟ ಕೇಜ್ರಿವಾಲ್ಗೆ ಬೆಂಬಲ ಯಾಕೆ? ಈ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ಕೇಜ್ರಿವಾಲ್ಗೆ ಮಾತ್ರ ಯಾಕೆ ಸಮಸ್ಯೆಯಾಗುತ್ತಿದೆ ಅಂತ ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕೇನ್ ಕೂಡ ಪ್ರಶ್ನಿಸಿದ್ರು.
ಹೀಗಾಗಿ ಈ ವಿಚಾರ ಕಾಂಗ್ರಸ್ಗೆ ಗೊಂದಲದ ಗೂಡಾಗಿತ್ತು. ಜೊತೆಗೆ ಅರವಿಂದ್ ಕೇಜ್ರಿವಾಲ್ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿತ್ತು
ಆದರೆ ಈಗ ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆ ವಿರುದ್ಧ ಸಂಸತ್ತಿನಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ ಎನ್ನುವ ವರದಿಗಳು ಬಂದಿವೆ
ಹೀಗಾಗಿ ಇದೀಗ ಕಾಂಗ್ರೆಸ್ ನಡೆ ಮತ್ತು ನಿರ್ಧಾರ ಹಾಗೂ ಅರವಿಂದ್ ಕೇಜ್ರಿವಾಲಿಗೆ ಕಾಂಗ್ರೆಸ್ ಬೆಂಬಲವನ್ನ ಕೊಡಲಿ ಅನ್ನುವ ಪ್ರಶ್ನೆಗಳು ಸಹಜವಾಗಿಯೇ ಉದ್ಭವವಾಗಿದೆ