‘ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟ ಸಭೆ ನಡೆಸದೇ ಏಕಪಕ್ಷೀಯವಾಗಿ ಕೃಷಿ ಕಾಯ್ದೆ ಗಳನ್ನು ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.
‘ಸಂಪುಟ ಸಭೆಯ ಅನುಮತಿ ಇಲ್ಲದೇ, ಕಾನೂನುಗಳನ್ನು ರಚಿಸುವುದು ಮತ್ತು ರದ್ದು ಗೊಳಿಸುವುದು ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯ ’ ಎಂದು ಪಿ. ಚಿದಂಬರಂ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆ ಯನ್ನು ರದ್ದು ಗೊಳಿಸುವ ನಿರ್ಧಾರವನ್ನು ಘೋಷಣೆ ಮಾಡಿದ ಒಂದು ದಿನದ ಬಳಿಕ ಟ್ವೀ ಟ್ ಮಾಡಿರುವ ಪಿ. ಚಿದಂಬರಂ, ‘ಪ್ರಧಾನಿಯವರ ಈ ಘೋಷಣೆಯು ಮುತ್ಸ ದ್ದಿ ತನದ ನಡೆ ಎಂದು ಗೃಹ ಸಚಿವರು ಶ್ಲಾಘಿಸಿದ್ದಾರೆ. ಬಿಜೆಪಿ ಅಧ್ಯ ಕ್ಷರು, ಪ್ರಧಾನಿ ರೈತರ ಬಗ್ಗೆ ಅಪಾರ ಕಾಳಜಿಹೊಂದಿದ್ದಾರೆ ಎಂದು ಪ್ರ ತಿಕ್ರಿಯಿಸಿದ್ದಾರೆ. ರಕ್ಷಣಾ ಸಚಿವರು, ರೈತರ ಕಲ್ಯಾ ಣಕ್ಕಾ ಗಿ ಪ್ರಧಾನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಆದರೆ ಈ ಮಹಾನ್ ನಾಯಕರು ಕಳೆದ ಹದಿನೈದು ತಿಂಗಳು ಎಲ್ಲಿದ್ದ ರು ಮತ್ತು ಅವರ ಬುದ್ಧಿವಂತ ಸಲಹೆಗಳು ಎಲ್ಲಿದ್ದ ವು?’ ಎಂದು ಪ್ರ ಶ್ನಿ ಸಿದ್ದಾರೆ.
‘ಪ್ರಧಾನಿಯವರು ಸಚಿವ ಸಂಪುಟದ ಸಭೆ ನಡೆಸದೇ ಈ ಘೋಷಣೆ ಮಾಡಿದ್ದ ನ್ನು ನೀವು ಗಮನಿಸಿದ್ದೀ ರಾ’ ಎಂದೂ ಅವರು ಸಚಿವರನ್ನು ಕೇಳಿದ್ದಾರೆ.