
ಜೈಪುರ: ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪಿಗೆ ರಾಜಸ್ಥಾನದ ಉದಯಪುರದ ನ್ಯಾಯಾಲಯ ಸೋಮವಾರ ಮರಣದಂಡನೆ ವಿಧಿಸಿದೆ.ನ್ಯಾಯಮೂರ್ತಿ ಸಂಜಯ್ ಕುಮಾರ್ ಭಟ್ನಾಗರ್ ಅವರು ಕಮಲೇಶ್ ಸಿಂಗ್ ಮಾಡಿದ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ಮರಣದಂಡನೆ ಶಿಕ್ಷೆಯನ್ನು ಘೋಷಿಸಿದರು.

ಅಲ್ಲದೆ ತಮ್ಮ ಮಗನ ಅಪರಾಧವನ್ನು ಮರೆಮಾಚಿದ್ದಕ್ಕಾಗಿ ಆತನ ಪೋಷಕರಾದ ರಾಮ್ ಸಿಂಗ್ ಮತ್ತು ಕಿಶನ್ ಕನ್ವರ್ ಅವರಿಗೆ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಯದ್ ಹುಸೇನ್ ಹೇಳಿದ್ದಾರೆ. ಘಟನೆಯು ಮಾರ್ಚ್ 29, 2023 ರಂದು ನಡೆದಿತ್ತು. ಕಮಲೇಶ್ ಎಂಬ ದುಷ್ಕರ್ಮಿ ಬಾಲಕಿಯ ಮೇಲೆ ಅತ್ಯಾಚಾರದ ನಂತರ ಕೊಲೆ ಮಾಡಿದ್ದಾನೆ.ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ನಂತರ ಶಿಥಿಲಗೊಂಡ ಕಟ್ಟಡದಲ್ಲಿ ದೇಹದ ಭಾಗಗಳನ್ನು ಮುಚ್ಚಿಟ್ಟಿದ್ದಾನೆ ಎಂದು ಅವರು ಹೇಳಿದರು.





