ಗದಗ:ಮಹಾಮಾರಿ ಡೆಂಘೀಗೆ ಐದು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ.ಬೆಡ್ ಇಲ್ಲದೇ ಎರಡು ಗಂಟೆ ಮಗು ನರಳಾಟ ಮಾಡಿದ್ದು, ಅಡ್ಮಿಟ್ ಮಾಡಿಕೊಳ್ಳಲು ಸಹ ಜಿಲ್ಲಾ ಆಸ್ಪತ್ರೆ ವೈದ್ಯರು ಹಿಂದೇಟು ಹಾಕಿದ್ದರು. ಬೆಡ್ ಇಲ್ಲ ಬೇರೆ ಕಡೆ ಹೋಗಿ ಅಂತ ಹೇಳಿದ್ರು. ಎರಡು ಗಂಟೆ ಬಳಿಕ ಅಡ್ಮಿಟ್ ಮಾಡಿಕೊಂಡರೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಒಂದೇ ಇದೆ ಅಂತ ಐಸಿಯುನಲ್ಲಿ ಚಿಕಿತ್ಸೆ ನೀಡಲಿಲ್ಲ. ಆಕ್ಸಿಜನ್ ಸಹ ಹಚ್ಚದೇ ನಿರ್ಲಕ್ಷ್ಯ ತೋರಿದರುಕೇವಲ ಪಿಜಿ ಡಾಕ್ಟರ್ ಗಳಿಂದ ಮಾತ್ರವೇ ಚಿಕಿತ್ಸೆ ನೀಡಿದರು . ತಜ್ಞ ವೈದ್ಯರು ಒಂದೇ ಒಂದು ಬಾರಿ ಬಂದು ಚಿಕಿತ್ಸೆ ನೀಡಿಲ್ಲ ಎಂದು ಗದಗ ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಮಗು ತಂದೆ ತಾಯಿ ಸಾಲು ಸಾಲು ಆರೋಪ ಮಾಡಿದ್ದಾರೆ.ಮಗುವಿನ ಮನೆಯಲ್ಲಿ ತಂದೆ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ತಾಲೂಕಿನ ಶಿರುಂಜ ಗ್ರಾಮದ ಐದು ವರ್ಷದ ಮಗು ಸಾವನ್ನಪ್ಪಿತ್ತು. ಚಿರಾಯಿ ಮಂಜುನಾಥ ಹೊಸಮನಿ 5 ವರ್ಷದ ಮಗು ಸಾವನ್ನಪ್ಪಿತ್ತು. ಘಟನೆ ಹಿನ್ನೆಲೆ ತಂದೆ ಮಂಜುನಾಥ ಹೊಸಮನಿ ತಾಯಿ ಸುಜಾತಾ ಕಣ್ಣೀರು ಹಾಕಿದ್ದಾರೆ. ಮೂವರು ಮಕ್ಕಳಲ್ಲಿ ಚಿರಾಯು ಮಾತ್ರ ಗಂಡು ಮಗನಾಗಿದ್ದ ಎನ್ನಲಾಗಿದೆ.
ನಾಮಫಲಕ ರೆಡಿ ಮಾಡಿಸಿದ ನಿಖಿಲ್ ಅಭಿಮಾನಿಗಳು!
ಇಂದು ಚೆನ್ನಪಟ್ಟಣ ಫಲಿತಾಂಶ ಪ್ರಕಟವಾಗಲಿದೆ. ಆದರೆ ಅದಕ್ಕೂ ಮೊದಲೇ ನಿಖಿಲ್ ಎಂಎಲ್ಎ ಎಂಬ ನಾಮಫಲಕವನ್ನು ಅಭಿಮಾನಿಗಳು ರೆಡಿ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ಹಾಗೂ...
Read moreDetails