• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಬಿಐ ತನಿಖೆಗೆ ಡೆಡ್‌ಲೈನ್‌.. ಪ್ರಿಯಾಂಕ್‌ ಖರ್ಗೆಗೆ ಹೈಕಮಾಂಡ್‌ ಬುಲಾವ್‌

ಕೃಷ್ಣ ಮಣಿ by ಕೃಷ್ಣ ಮಣಿ
December 31, 2024
in Top Story, ಕರ್ನಾಟಕ, ರಾಜಕೀಯ, ವಿಶೇಷ
0
ಸಿಬಿಐ ತನಿಖೆಗೆ ಡೆಡ್‌ಲೈನ್‌.. ಪ್ರಿಯಾಂಕ್‌ ಖರ್ಗೆಗೆ ಹೈಕಮಾಂಡ್‌ ಬುಲಾವ್‌
Share on WhatsAppShare on FacebookShare on Telegram

ಸಚಿವ ಪ್ರಿಯಾಂಕ್ ಖರ್ಗೆಗೆ ದೆಹಲಿಗೆ ಬರುವಂತೆ ಬುಲಾವ್ ಕೊಡಲಾಗಿದೆ. ಎಐಸಿಸಿ ಅಧ್ಯಕ್ಷರೂ ಆಗಿರುವ ಪ್ರಿಯಾಂಕ್‌ ಖರ್ಗೆ ತಂದೆ ಮಲ್ಲಿಕಾರ್ಜುನ್ ಖರ್ಗೆ ಬುಲಾವ್ ಕೊಟ್ಟಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಸೂಚನೆ ಕೊಟ್ಟಿದ್ದಾರೆ. ಬಿಜೆಪಿ ಹೋರಾಟ, ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡುತ್ತಿರುವ ಬೆನ್ನಲ್ಲೇ ಬುಲಾವ್ ನೀಡಿದ್ದು, ಪ್ರರಣದ ಬಗ್ಗೆ ಜೂನಿಯರ್ ಖರ್ಗೆಯಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಇಂದಿನಿಂದ ಮೂರು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಲಿರೋ ಪ್ರಿಯಾಂಕ್ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆ ಸಿ ವೇಣುಗೋಪಾಲ್ ಭೇಟಿ ಮಾಡಿ ಪ್ರಕರಣದ ಬಗ್ಗೆ ವಿವರಣೆ ನೀಡಲಿದ್ದಾರೆ ಎನ್ನಲಾಗಿದೆ.

ADVERTISEMENT

ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕ್ತೇವೆ ಎಂದಿದ್ದ ವಿಜಯೇಂದ್ರಗೆ ಸಚಿವ ಪ್ರಿಯಾಂಕ್​ ಖರ್ಗೆ ತಿರುಗೇಟು ಕೊಟ್ಟಿದ್ದು, ರಾಜು ಕಪನೂರ್​ ನನ್ನ ಆಪ್ತ ಅಲ್ಲ ಅಂತ ನಾನು ಎಲ್ಲಿಯೋ ಹೇಳಿಲ್ಲ. ಬಿಜೆಪಿಯವರು ಲಾಜಿಕ್ ಇಲ್ಲದೆ ಮಾತಾಡ್ತಿದ್ದಾರೆ. ವಿಜಯೇಂದ್ರ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಆಗಿದೆಯಲ್ಲ ಹಾಗಿದ್ರೆ ಯಾಕೆ ಅವರು ರಾಜೀನಾಮೆ ಕೊಡ್ತಿಲ್ಲ..? ಕಲಬುರಗಿ ಮುತ್ತಿಗೆಗೆ ಎಷ್ಡು ಜನ ಬರ್ತೀರಿ ಅಂತ ಮೊದಲೇ ಹೇಳಿ. ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡ್ತೇವೆ, ಇಲ್ಲದಿದ್ದರೆ ಆಮೇಲೆ ನೀರೂ ಕೊಟ್ಟಿಲ್ಲ ಅಂತ ಪ್ರತಿಭಟನೆ ಮಾಡ್ತೀರಾ? ಎಂದು ವ್ಯಂಗ್ಯವಾಡಿದ್ದಾರೆ. ಯಾರು ಎಷ್ಟೇ ಚೀರಾಡಲಿ.. ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ವಿಜಯೇಂದ್ರ ಏನು ಸುಪ್ರೀಂಕೋರ್ಟಾ..? ನನ್ನ ರಾಜೀನಾಮೆ ಕೇಳೋಕೆ ಎಂದು ಕಿಡಿಕಾರಿದ್ದಾರೆ.

K J George reaction: ಪ್ರಿಯಾಂಕ್ ಖರ್ಗೆ ರಾಜೀನಾಮೆ ಅಗತ್ಯ ಇಲ್ಲ ಎಂದ ಸಚಿವ ಕೆ.ಜೆ ಜಾರ್ಜ್  #pratidhvani

ಪ್ರಿಯಾಂಕ್​ ಖರ್ಗೆ ಮೇಲಿನ ಬಿಜೆಪಿ ಆರೋಪದ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಅನವಶ್ಯಕವಾಗಿ ಈ ಪ್ರಕರಣದಲ್ಲಿ ಸಚಿವರ ಹೆಸರು ತರಲಾಗಿದೆ. ಡೆತ್​ನೋಟ್​ನಲ್ಲಿ ಖರ್ಗೆ ಹೆಸರು ಕೂಡ ಇಲ್ಲ ಎಂದು ಇಲಾಖೆಯವರು ಹೇಳಿದ್ದಾರೆ. ಅವರ ಹೆಸರಿಗೆ ಹಾಗೂ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಆಗ್ತಿದೆ. ಇದರ ಸತ್ಯಾಸತ್ಯತೆ ಹೊರಬರಬೇಕಾಗುತ್ತದೆ. ಪ್ರಕರಣದ ಬಗ್ಗೆ ಚರ್ಚಿಸಿ ಸಿಒಡಿಗೆ ಕೊಟ್ಟಿದ್ದೇವೆ. ಎಲ್ಲಾ ಕೇಸ್ ಅ​ನ್ನ ಸಿಬಿಐಗೆ ಕೊಡೊಕೆ ಆಗಲ್ಲ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌ ಕೂಡ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಇಲ್ಲ ಎಂದಿದ್ದಾರೆ.

Previous Post

ಅಂಬೇಡ್ಕರ್‌ಗೆ ಅಮಿತ್‌ ಷಾ ಅವಮಾನ.. ಬಂದ್‌ ಕರೆ.. ಶಾಲಾ ಕಾಲೇಜಿಗೂ ರಜೆ..

Next Post

“ಯಶಸ್ವಿ ಜೈಸ್ವಾಲ್ ಆಯ್ಕೆ:ವಾದವಿವಾದ ಮತ್ತು ವಾಸ್ತವಿಕತೆ”

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಕರ್ನಾಟಕ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

by ಪ್ರತಿಧ್ವನಿ
April 25, 2026
0

ಮಂಡ್ಯ: ಹವಾಮಾನ  ವೈಪರಿತ್ಯಗಳು ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಮುನ್ಸೂಚನೆ ನೀಡುತ್ತಾ ಬಂದಿರುವ ಅರಸೀಕೆರೆ ಶ್ರೀ ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ...

Read moreDetails
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
Next Post
“ಯಶಸ್ವಿ ಜೈಸ್ವಾಲ್ ಆಯ್ಕೆ:ವಾದವಿವಾದ ಮತ್ತು ವಾಸ್ತವಿಕತೆ”

"ಯಶಸ್ವಿ ಜೈಸ್ವಾಲ್ ಆಯ್ಕೆ:ವಾದವಿವಾದ ಮತ್ತು ವಾಸ್ತವಿಕತೆ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada