
ಕೊಪ್ಪಳ : ಗಂಗಾವತಿ ಯಿಂದ ಕೊಪ್ಪಳಕ್ಕೆ ತೆರಳುವ ರಸ್ತೆಯ ದಾಸನಾಳ್ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಇಂದು ಮಧ್ಯಾನ್ಹ ಒಂದು ಗಂಟೆ ಸುಮಾರಿಗೆ ಹೊಸಬೆಣಕಲ್ ಗ್ರಾಮದ ಪ್ರೀತಿ ತಂದೆ ವೀರಭದ್ರಪ್ಪ ಬಳಿಗೇರ್(17) ವರ್ಷದ ಯುವತಿಯ ಮೃತ ದೇಹ ಪತ್ತೆಯಾದ ಘಟನೆ.
ಇಂದು ಮುಂಜಾನೆ 11 ಗಂಟೆಗೆ ಹೊಸಬೆಣಕಲ್ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಪಿಯು ವಸತಿ ಸಹಿತ ಕಾಲೇಜಿನಲ್ಲಿ ಇದಂತಹ ಬಾಲಕಿಯನ್ನು ತಾಯಿ ಬಂದು ಕರೆದುಕೊಂಡು ಹೋದ ನಂತರ ಈ ಘಟನೆ ಜರುಗಿದೆ.
ಕಾಲುವೆಯಲ್ಲಿ ಬಾಲಕಿಯ ದೇಹತೇಲಿಕೊಂಡು ಹೋಗುವ ಸಂದರ್ಭದಲ್ಲಿ ದೇಹ ನೋಡಿದ ಯುವಕರು ನೀರಿನಿಂದ ಹೊರತೆಗೆದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಬ್ಬಂದಿ ಭೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.