ರಾತ್ರಿ ಮಹಿಳಾ ಸುರಕ್ಷತೆ ಬಗ್ಗೆ ತಮ್ಮ ತಂಡದ ಜೊತೆ ದೆಹಲಿಯ ಏಮ್ಸ್ ರಸ್ತೆಯಲ್ಲಿ ಪರಿಶೀಲನೆ ನಡೆಸಲು ಹೋಗಿದ್ದ ದಿಲ್ಲಿಯ ಮಹಿಳಾ ಆಯೋಗ ಅಧ್ಯಕ್ಷೆ ಮೇಲೆಯೇ ವ್ಯಕ್ತಿಯೋರ್ವ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನಡುರಾತ್ರಿಯಲ್ಲಿ ರಾಷ್ಟ್ರರಾಜಧಾನಿ ರಸ್ತೆಯಲ್ಲಿ ಮಹಿಳಾ ಸುರಕ್ಷೆಯ ಬಗ್ಗೆ ಪರಿಶೀಲನೆ ನಡೆಸಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಸ್ತೆಯಲ್ಲಿ ತಮ್ಮ ಮೇಲೆ ಆಕ್ರಮಣ ಎಸಗಿದ ಕುಡುಕ ಚಾಲಕನೊಬ್ಬ ಸುಮಾರು 15 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದ್ದಾನೆ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।
— Swati Maliwal (@SwatiJaiHind) January 19, 2023
ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂದು ಪರಿಶೀಲಿಸಲು ‘ರಿಯಾಲಿಟಿ ಚೆಕ್’ ನಡೆಸುವುದಕ್ಕಾಗಿ ರಸ್ತೆಗೆ ಬಂದಿದ್ದಾಗ, ದಿಲ್ಲಿಯ ಏಮ್ಸ್ ಆಸ್ಪತ್ರೆ ಬಳಿ ತಮಗೆ ಕಿರುಕುಳ ನೀಡಲಾಗಿದೆ ಮತ್ತು ಎಳೆದೊಯ್ಯಲಾಗಿದೆ ಎಂದು ಸ್ವಾತಿ ಆರೋಪಿಸಿದ್ದಾರೆ.
ವನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದ ವೇಳೆ, ಪಾನಮತ್ತನಾಗಿದ್ದ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ತನ್ನನ್ನು ಸನ್ನೆ ಮಾಡಿ ಕರೆದ. ಬಳಿಕ ನಾನು ಕಾರಿನ ಪಕ್ಕದಲ್ಲಿ ಹೋದಾಗ ಕಾರಿನಡಿ ಕೂರಲು ಹೇಳಿದ. ಇದಕ್ಕೆ ನಾನು ನಿರಾಕರಿಸಿದಾಗ, ಆತ ನನ್ನ ಕೈಹಿಡಿದು ಎಳೆದೊಯ್ಯಲು ಯತ್ನಿಸಿದ. ಕಾರಿನ ಕನ್ನಡಿಗಳಿಂದ ನನ್ನ ಕೈಯನ್ನು ಆತ ಲಾಕ್ ಮಾಡಿದ. ಕಾರು ಚಲಾಯಿಸಿಕೊಂಡು 15 ಮೀಟರ್ ಓಡಿಸಿದ. ನಾನು ಕೂಡ ಕಾರಿನ ಜೊತೆಗೇ ಓಡಿದೆ. ಅದೃಷ್ಟವಶಾತ್ ಆತನಿಂದ ತಪ್ಪಿಸಿಕೊಂಡೆ. ದೆಹಲಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯ ಪ್ರಾಣಕ್ಕೇ ಭದ್ರತೆಯಿಲ್ಲ ಎಂದಾದರೆ, ಸಾಮಾನ್ಯರ ಬದುಕು ಹೇಗಿರಬಹುದು ನೀವೇ ಊಹಿಸಿ ಎಂದು ಮಲಿವಾಲ್ ಅವರು ಪ್ರಶ್ನಿಸಿದ್ದಾರೆ.
ತಕ್ಷಣವೇ ಮಲಿವಾಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿ ಗಸ್ತಿನಲ್ಲಿದ್ದ ಗರುಡಾ ಪಡೆ ಸಿಬ್ಬಂದಿ ಆರೋಪಿಯ ಕಾರನ್ನು ಬೆನ್ನತ್ತಿ ಹಿಡಿದಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ದೂರಿನ ಮೇರೆಗೆ ಪ್ರಕರಣ ದಾಖಲಿಸಿಳ್ಳಲಾಗಿದೆ. ಬಂಧಿತ ಕಾರು ಚಾಲಕನನ್ನು ದೆಹಲಿಯ ಸಂಗಮ್ ವಿಹಾರ್ ನಿವಾಸಿ ಹರೀಶ್ ಚಂದ್ರ ಎಂದು ಗುರುತಿಸಲಾಗಿದೆ. ಈತ ಲೆಫ್ಟಿನೆಂಟ್ ದುರ್ಜನ್ ಸಿಂಗ್ ಅವರ ಪುತ್ರ ಎಂದು ಹೇಳಲಾಗಿದೆ.